Asianet Suvarna News Asianet Suvarna News

RCB ಲೋಗೋ ಅನಾವರಣ ಬೆನ್ನಲ್ಲೇ ಮಾಜಿ ಬಾಸ್ ಮಲ್ಯ ನೀಡಿದ್ರು ಸಲಹೆ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೊಸ ಲೋಗೋ ಭಾರಿ ಸದ್ದು ಮಾಡುತ್ತಿದೆ. IPL ಫ್ರಾಂಚೈಸಿ, ಕ್ರಿಕೆಟಿಗರು ಸೇರಿದಂತೆ ಅಭಿಮಾನಿಗಳು ಲೋಗೋಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದರ ನಡುವೆ ತಂಡದ ಹಳೇ ಬಾಸ್ ವಿಜಯ್ ಮಲ್ಯ ದೂರದ ಲಂಡನ್‌ನಿಂದ ಪ್ರತಿಕ್ರಿಯೆ ನೀಡಿದ್ದಾರೆ. 

RCB former chairman Vijay mallya advise management after new logo
Author
Bengaluru, First Published Feb 15, 2020, 6:32 PM IST

ಲಂಡನ್(ಫೆ.15): ಐಪಿಎಲ್ ಟೂರ್ನಿಗೆ 8 ಫ್ರಾಂಚೈಸಿಗಳು ತಯಾರಿ ಆರಂಭಿಸಿದೆ. ಇದರ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊಸ ಲೋಗೋ ಅನಾವರಣ ಮಾಡಿದೆ. ನೂತನ ಲೋಗೋ ಕುರಿತು RCB ತಂಡದ ಮಾಜಿ ಬಾಸ್ ವಿಜಯ್ ಮಲ್ಯ ಪ್ರತಿಕ್ರಿಯೆ ನೀಡಿದ್ದಾರೆ. 

ಇದನ್ನೂ ಓದಿ: IPL ಟೂರ್ನಿಗೂ ಮುನ್ನ ಹೊಸ ಲೋಗೋ ಅನಾವರಣ ಮಾಡಿದ RCB

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೊಸ ಲೋಗೋ ಅನಾವರಣ ಬೆನ್ನಲ್ಲೇ ತಂಡಕ್ಕೆ ವಿಜಯ್ ಮಲ್ಯ ಅಭಿನಂದನೆ ಸಲ್ಲಿಸಿದ್ದಾರೆ. ಹೊಸ ಲೋಗೋ ತಂಡದ ಅದೃಷ್ಠ ಬದಲಿಸಲಿ. ನೂತನ ಲೋಗೋ ಪ್ರಶಸ್ತಿ ಗೆಲುವಿಗೆ ಸಹಕಾರಿಯಾಗಲಿ ಎಂದು ಟ್ವೀಟ್ ಮಾಡಿದ್ದಾರೆ. 

 

ಇದನ್ನೂ ಓದಿ: RCB ಹೊಸ ಲೋಗೋ ಟ್ರೋಲ್ ಮಾಡಿದ ಜಸ್ಪ್ರೀತ್ ಬುಮ್ರಾ

ಇನ್ನು ನಾಯಕ ವಿರಾಟ್ ಕೊಹ್ಲಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಲು ಮಲ್ಯ ಸಲಹೆ ನೀಡಿದ್ದಾರೆ. ಅಂಡರ್ 19 ತಂಡದಲ್ಲಿದ್ದ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡ  ಸೇರಿಕೊಂಡರು . ಇದೀಗ ವಿರಾಟ್ ಕೊಹ್ಲಿ ಭಾರತ ತಂಡವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಕೊಹ್ಲಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಬೇಕಿದೆ. ಎಲ್ಲಾ ಆರ್‌ಸಿಬಿ ಅಭಿಮಾನಿಗಳು ಪ್ರಶಸ್ತಿ ಕೊರಗನ್ನು  ನೀಗಿಸಲು ಬಯಸುತ್ತಿದ್ದಾರೆ ಎಂದು ಮಲ್ಯ ಟ್ವೀಟ್ ಮಾಡಿದ್ದಾರೆ.

 

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗಾಗಲೈ ಮುತ್ತೂಟ್ ಫಿನ್‌ಕಾರ್ಪ್ ಜೊತೆ ಒಪ್ಪಂದ ಮಾಡಿಕೊಂಡಿದೆ. 3 ವರ್ಷಗಳ ಕಾಲ ಮುತ್ತೂಟ್ ಜೊತೆ ಟೈಟಲ್ ಪ್ರಾಯೋಜಕತ್ವ ಒಪ್ಪಂದ ಮಾಡಿಕೊಂಡಿದೆ.

Follow Us:
Download App:
  • android
  • ios