Asianet Suvarna News Asianet Suvarna News

ನನ್ನ, ರಾಮುಲು ಮಧ್ಯೆ ವೈಮನಸ್ಯವಿಲ್ಲ: ಸುಧಾಕರ್‌

ನನ್ನ, ರಾಮುಲು ಮಧ್ಯೆ ವೈಮನಸ್ಯವಿಲ್ಲ: ಸುಧಾಕರ್‌| ಸುಳ್ಳುಸುದ್ದಿಯ ಹಿಂದೆ ನೀಚ ರಾಜಕೀಯ ಷಡ್ಯಂತ್ರ

There Is No Diferences Of Opinion Between Me And Sriramulu Says Dr K Sudhakar
Author
Bangalore, First Published Apr 5, 2020, 9:12 AM IST

ಬೆಂಗಳೂರು(ಏ.05): ಕೊರೋನಾ ಸೋಂಕು ವಿಚಾರ ಸಂಬಂಧ ಆರೋಗ್ಯ ಸಚಿವ ಶ್ರೀರಾಮುಲು ಅವರೊಂದಿಗೆ ನನಗೆ ಯಾವುದೇ ವೈಮನಸ್ಯವಿಲ್ಲ. ಈ ವಿಚಾರದಲ್ಲಿ ಯಾವುದೇ ಗೊಂದಲವೂ ಇಲ್ಲ ಎಂದು ವೈದ್ಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಶುಕ್ರವಾರ ಹೇಳಿಕೆ ನೀಡಿರುವ ಅವರು, ಕೊರೋನಾದಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಮುನಿಸಿನ ರಾಜಕೀಯ ಮಾಡಲು ಶ್ರೀರಾಮುಲು ಅವರಾಗಲಿ ಅಥವಾ ನಾನಾಗಲಿ ಸಣ್ಣ ಮಕ್ಕಳಲ್ಲ. ನಮಗೇ ನಮ್ಮದೇ ಆದ ಜವಾಬ್ದಾರಿಗಳಿವೆ. ಈ ಸುಳ್ಳು ಸುದ್ದಿಗಳ ಹಬ್ಬಿಸುವುದರ ಹಿಂದೆ ನೀಚ ರಾಜಕೀಯ ಷಡ್ಯಂತ್ರ ಇದೆ ಎಂದು ಅವರು ಆರೋಪಿಸಿದ್ದಾರೆ.

ಕೋವಿಡ್‌-19 ರೂಂಗೆ ತೆರಳದ ಆರೋಗ್ಯ ಸಚಿವ ಶ್ರೀರಾಮುಲು

ಇಂದು ಜಗತ್ತು ವ್ಯಕ್ತಿಗಳ ವೈಯಕ್ತಿಕ ಆಶಯಕ್ಕೆ ಮೀರಿದ ಸಂಕಷ್ಟದಲ್ಲಿದೆ. ಇದಕ್ಕೆ ಕಾರಣವಾಗಿರುವ ಕೊರೋನಾ ಮಹಾಮಾರಿಯನ್ನು ಬಗ್ಗುಬಡಿದು ಜನಹಿತ ಕಾಯುವುದೇ ನನ್ನ ಹಾಗೂ ನನ್ನ ಸಹೋದರರಂತಿರುವ ಶ್ರೀರಾಮುಲು ಅವರ ಧ್ಯೇಯ. ಇಂತಹ ವಿಚಾರದಲ್ಲಿ ಪ್ರಚಾರಕ್ಕಾಗಿ ಪೈಪೋಟಿ ನಡೆಸುವುದೇನಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಶ್ರೀರಾಮುಲು ಹಾಗೂ ನಾನು ಅಣ್ಣ-ತಮ್ಮಂದಿರಂತೆ ಈ ರಾಜ್ಯದ ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ. ನಾವಿಬ್ಬರು ಜನ ಸೇವೆ ಮಾಡಿಕೊಂಡು ಜನಪ್ರತಿನಿಧಿಗಳಾದವರು. ನಮಗೆ ಜನರ ಶಹಬಾಷ್‌ಗಿರಿಯೇ ಶ್ರೀರಕ್ಷೆ. ಇದರಲ್ಲಿ ಪ್ರಚಾರದ ಮಾತೆಲ್ಲಿ? ಜನ ಸಂಕಷ್ಟದಲ್ಲಿರುವ ಈ ಸಮಯದಲ್ಲಿ ನಮ್ಮಿಬ್ಬರ ನಡುವೆ ಕಂದಕ ಹುಟ್ಟುಹಾಕಿ, ಸುಳ್ಳು ಸುದ್ದಿ ಹಬ್ಬಿಸುವವವರ ಮನಸ್ಥಿತಿ ಕೊರೋನಾಕ್ಕಿಂತ ಅಪಾಯಕಾರಿ ಎಂದು ಹೇಳಿದ್ದಾರೆ.

ಕೊರೋನಾ ಆತಂಕ: ಕೊಪ್ಪಳ ಜಿಲ್ಲಾಸ್ಪತ್ರೆ ಕೋವಿಡ್‌- 19ಕ್ಕೆ ಮೀಸಲು

ನಾನೊಬ್ಬ ವೈದ್ಯ, ಅದಕ್ಕಿಂತ ಹೆಚ್ಚಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡವನು. ಈ ರೀತಿಯ ಮಾತುಗಳಿಗೆ ಧೃತಿಗೆಟ್ಟು ಕರ್ತವ್ಯ ವಿಮುಖನಾಗುವವನು ನಾನಲ್ಲ. ಪ್ರತಿಯೊಂದು ಟೀಕೆ, ಪ್ರತಿ ಬಾರಿ ನನ್ನನ್ನು ಇನ್ನಷ್ಟುಬಲಿಶಾಲಿಯಾಗಿ ಮಾಡಿದೆ, ನನಗೆ ಆತ್ಮಸ್ಥೆರ್ಯ ತುಂಬುತ್ತದೆ. ಇಂತಹ ಮಾತುಗಳು ನನ್ನನ್ನು ಇನ್ನಷ್ಟುಮುನ್ನುಗ್ಗಿ ಜನತಾ ಜನಾರ್ದನನ ಸೇವೆ ಮಾಡಲು ಪ್ರೇರೇಪಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow Us:
Download App:
  • android
  • ios