ಲಾಕ್‌ಡೌನ್‌ ನಂತರ ಮೈಮರೆತರೆ ಅಪಾಯ: ಡಾ|ದೇವಿ ಶೆಟ್ಟಿ ಎಚ್ಚರಿಕೆ

ಲಾಕ್‌ಡೌನ್‌ ನಂತರ ಮೈಮರೆತರೆ ಅಪಾಯ: ಡಾ| ದೇವಿಶೆಟ್ಟಿ ಎಚ್ಚರಿಕೆ| ಏ.15ರ ನಂತರವೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ| ಇಲ್ಲದಿದ್ದರೆ 1 ತಿಂಗಳಲ್ಲಿ ಸೋಂಕು ಪ್ರಮಾಣ ಹೆಚ್ಚಳ ಖಚಿತ| ಈಗ ದೃಢವಾಗುತ್ತಿರುವ ಪ್ರಕರಣಗಳೆಲ್ಲ ಲಾಕ್‌ಡೌನ್‌ಗಿಂತ ಮುಂಚೆ ಹಬ್ಬಿದವು| ಇನ್ನೂ ಸ್ವಲ್ಪ ದಿನ ಹೆಚ್ಚುತ್ತದೆ. ಆಮೇಲೆ ನಿಧಾನಕ್ಕೆ ಇಳಿಯುತ್ತೆ. ಭಯ ಬೇಡ| ಸೋಂಕು ನಿಯಂತ್ರಣಕ್ಕೆ ಸರ್ಕಾರಗಳು, ಅಧಿಕಾರಿಗಳಿಂದ ಅತ್ಯುತ್ತಮ ಕ್ರಮ

Be Cautious and maintain the social distance after The Withdrawal Of Lockdown Dr Devi Shetty Warns

ಬೆಂಗಳೂರು(ಏ.04): ಲಾಕ್‌ಡೌನ್‌ ತೆರವಾದ ನಂತರವೂ ಜನರು ಜವಾಬ್ದಾರಿಯುತವಾಗಿ ನಡೆದುಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಇಲ್ಲದಿದ್ದರೆ ಒಂದು ತಿಂಗಳಲ್ಲಿ ಮತ್ತೆ ಕೊರೋನಾ ಸೋಂಕು ವಾಪಸು ಬರಲಿದೆ ಎಂದು ಖ್ಯಾತ ಹೃದ್ರೋಗ ತಜ್ಞ ಡಾ.ದೇವಿಶೆಟ್ಟಿಎಚ್ಚರಿಕೆ ನೀಡಿದ್ದಾರೆ.

"

ಈ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಮಾತನಾಡಿರುವ ಅವರು, ಪ್ರಸ್ತುತ ಕೊರೋನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇವೆಲ್ಲವೂ ಲಾಕ್‌ಡೌನ್‌ ಅವಧಿಗಿಂತಲೂ ಮೊದಲೇ ಸೋಂಕು ತಗುಲಿಸಿಕೊಂಡ ಪ್ರಕರಣಗಳು. ಈ ಸೋಂಕು ಪ್ರಕರಣಗಳು ಇನ್ನೂ ಸ್ವಲ್ಪ ಕಾಲ ಹೆಚ್ಚಾಗಬಹುದು. ಆದರೆ ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ನೀವು ಜವಾಬ್ದಾರಿಯುತವಾಗಿ ನಡೆದುಕೊಂಡು ಸಾಮಾಜಿಕ ಅಂತರವನ್ನು ಶಿಸ್ತಾಗಿ ಕಾಪಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಕೊರೋನಾ ಭೀತಿ: ಲಾಕ್‌ಡೌನ್‌ನಿಂದಾಗಿ ಸಾವಿನ ಸಂಖ್ಯೆ ಶೇ.50 ನಿಯಂತ್ರಣ

ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಅತ್ಯುತ್ತಮವಾಗಿ ಶ್ರಮಿಸುತ್ತಿದೆ. ಇದಲ್ಲದೆ, ಅಧಿಕಾರಿಗಳು ಹಾಗೂ ಪೊಲೀಸರೂ ಸಹ ಕಷ್ಟದ ಸಮಯದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಈವರೆಗೆ ಲಾಕ್‌ಡೌನ್‌ ಅವಧಿಯಲ್ಲಿ ಸಾರ್ವಜನಿಕರೂ ಸಹ ಅತ್ಯುತ್ತಮವಾಗಿ ಸ್ಪಂದಿಸಿದ್ದಾರೆ. ಆದರೆ, ಏ.14ಕ್ಕೆ ಲಾಕ್‌ಡೌನ್‌ ಅವಧಿ ಮುಗಿದ ಬಳಿಕ ಏ.15ರಿಂದ ಸಾರ್ವಜನಿಕರು ಎಚ್ಚರ ತಪ್ಪಬಾರದು ಎಂದು ಮನವಿ ಮಾಡಿದ್ದಾರೆ.

ಲಾಕ್‌ಡೌನ್‌ ಅವಧಿ ಬಳಿಕ ಸೋಂಕು ನಿಯಂತ್ರಣಕ್ಕೆ ಬಂದು ನಮಗೆ ಉಸಿರಾಡಲು ಒಂದಷ್ಟುಸಮಯ ಸಿಗುತ್ತದೆ. ಈ ವೇಳೆಯಲ್ಲಿ ಜವಾಬ್ದಾರಿ ಮರೆತು ವರ್ತಿಸಬಾರದು. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಎಚ್ಚರ ತಪ್ಪಿದರೆ ಒಂದೇ ತಿಂಗಳಲ್ಲಿ ಮತ್ತೆ ಕಷ್ಟದ ಸಮಯ ಬರಲಿದೆ ಎಂದು ಎಚ್ಚರಿಸಿದರು.

Latest Videos
Follow Us:
Download App:
  • android
  • ios