ಫೇಸ್‌ಬುಕ್ ಲೈವ್‌ನಲ್ಲಿ ಅನುಚಿತ ಹೇಳಿಕೆ ನೀಡಿದ ಬಾಲಿವುಡ್ ಖ್ಯಾತ ನಟ ಕಮ್ ಬಿಗ್ ಬಾಸ್ ಸ್ಪರ್ಧಿ ಅಬಾಜ್ ಖಾನ್‌ರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಕೊರೋನಾ ವೈರಸ್ ಲಾಕ್‌ಡೌನ್‌ನಿಂದ ಮನೆಯಲ್ಲೇ ಸಮಯ ಕಳೆಯುತ್ತಿರುವ ತಾರೆಯರು ಫೇಸ್ ಬುಕ್ ಲೈವ್ ಮೂಲಕ ತಮ್ಮ ಅಭಿಮಾನಿಗಳೊಟ್ಟಿಗೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಈ ನಡುವೆ ಬಾಲಿವುಡ್ ನ ಖ್ಯಾತ ನಟ ಅಬಾಜ್ ಖಾನ್ ಫೇಸ್‌ಬುಕ್ ಲೈವ್ ಮಾಡಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
ಕೈ ಮುಗಿದು ಬೇಡುತ್ತೇನೆ ಯಾರೂ ಬರಬೇಡಿ ಹೊರಗೆ, ಮೌಲ್ವಿಯಿಂದ ಜಾಗೃತಿ ಹಾಡು!
ಹೌದು! ಇತ್ತೀಚಿಗೆ ಫೇಸ್‌ಬುಕ್ ಲೈವ್ ಮಾಡಿದ ಅಬಾಜ್ ಖಾನ್ ಜನರನ್ನು ಪ್ರಚೋದಿಸುವಂತಹ ಹೇಳಿಕೆ ನೀಡಿದ್ದಾರೆ. ಆಕ್ಷೇಪಾರ್ಹ ಹೇಳಿಕೆ ನೀಡಿದ ಕಾರಣ ಖಾರ್ ಪೊಲೀಸರು ಖಾನ್ ಅವರಿಗೆ ಸಮನ್ಸ್ ನೀಡಿ ಆ ನಂತರ ಅವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಪೊಲೀಸರು ಅಬಾಜ್‌ನನ್ನು ಠಾಣೆಗೆ ಕರೆದೋಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಲಾಕ್‌ಡೌನ್ ಎಫೆಕ್ಟ್: 'ರಂಜಾನ್ ಹಬ್ಬದ ವೇಳೆ ಮನೆಯಲ್ಲೇ ನಮಾಜ್ ಮಾಡೋಣ'
ಅಬಾಜ್ ಖಾನ್ ವಿರುದ್ಧ ಸೆಕ್ಷನ್ 153 A, 121, 117,188, 501, 504 ಹಾಗೂ 505 ದಾಖಲಿಸಿ ದಂಡ ವಿಧಿಸಲಾಗಿದೆ. 2018 ಅಕ್ಟೋಬರ್‌ನಲ್ಲಿ ಅಬಾಜ್ ಖಾನ್ ನಿಷೇಧಿತ ಡ್ರಗ್ಸ್‌ಗಳನ್ನು ಸೇವಿಸುತ್ತಿರುವ ಆರೋಪದ ಮೇಲೆ ಬಂಧಿಸಲಾಗಿತ್ತು, ಕಳೆದ ವರ್ಷ 2019ರಲ್ಲಿ ಜುಲೈನಲ್ಲಿ ಸಮುದಾಯಗಳ ಬಗ್ಗೆ ಮಾತನಾಡಿದಕ್ಕೆ ಬಂಧಿಸಿದರು. ಈಗ ಎಲ್ಲದಕ್ಕೂ ಮುಸ್ಲಿಮನೇ ಕಾರಣ ಎಂದು ಆರೋಪ ಮಾಡುತ್ತಿದ್ದವರ ವಿರುದ್ಧ ಕಿಡಿ ಕಾರಿದಕ್ಕೆ ಬಂಧಿಸಲಾಗಿದೆ.
