ರತನ್ ಟಾಟಾ ಕಾಲಿಗೆರಗಿ ಆಶೀರ್ವಾದ ಪಡೆದ ನಾರಾಯಣ ಮೂರ್ತಿ| ಭಾರತೀಯ ಸಂಸ್ಕೃತಿಗೆ ಸೈ ಎಂದ ಉದ್ಯಮಿ| ಸರಳತೆ ಮೆರೆದ ನಾರಾಯಣ ಮೂರ್ತಿ ನಡೆಗೆ ತಲೆ ಬಾಗಿದ ನೆಟ್ಟಿಗರು

ಮುಂಬೈ[ಜ.29]: ರತನ್ ಟಾಟಾ ಹೆಸರು ಯಾರಿಗೆ ತಿಳಿದಿಲ್ಲ? ಉದ್ಯಮ ವಲಯದಲ್ಲಿ ಹೆಸರು ಗಳಿಸಿದ ದಿಗ್ಗಜರಲ್ಲಿ ಟಾಟಾ ಕೂಡಾ ಒಬ್ಬರು. ಇತ್ತೀಚೆಗಷ್ಟೇವ ರತನ್ ಟಾಟಾ ಶೇರ್ ಮಾಡಿಕೊಂಡಿದ್ದ ತಮ್ಮ ಹರೆಯದ ಫೋಟೋಗೆ, ನೆಟ್ಟಿಗರೆಲ್ಲಾ ಫಿದಾ ಆಗಿದ್ದರು. ಹೀಗಿರುವಾಗ ಟಾಟಾ ಹಾಗೂ ನಾರಾಯಣ ಮೂರ್ತಿಯವರ ಕೆಲವೇ ಗಂಟೆಗಳ ಹಿಂದೆ ಕ್ಯಾಮೆರಾದಲ್ಲಿ ಸೆರೆಯಾದ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಭಾರತೀಯ ಮೌಲ್ಯಗಳನ್ನು ಪಾಲಿಸಿದ ಉದ್ಯಮಿಯ ಸರಳತೆಗೆ ಎಲ್ಲರೂ ತಲೆ ಬಾಗಿದ್ದಾರೆ.

Scroll to load tweet…

ಮಂಗಳವಾರದಂದು ಟೈಕಾನ್ ಮುಂಬೈ 2020 ಕಾರ್ಯಕ್ರಮದಲ್ಲಿ ರತನ್ ಟಾಟಾರನ್ನು ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್ ನೀಡಿ ಗೌರವಿಸಲಾಯ್ತು. ಹೀಗಿರುವಾಗ ಕಾರ್ಪೋರೇಟ್ ಕ್ಷೇತ್ರದ ಎರಡನೇ ಅತಿದೊಡ್ಡ ಹೆಸರು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿಗೆ ಟಾಟಾರಿಗೆ ಅವಾರ್ಡ್ ನೀಡವ ಅವಕಾಶ ಲಭಿಸಿದೆ. ಹೀಗಿರುವಾಗ ನಾರಾಯಣ ಮೂರ್ತಿಯವರು ಅತ್ಯಂತ ವಿನಮ್ರರಾಗಿ ಟಾಟಾರವರ ಕಾಲಿಗೆರಗಿ ಆಶೀರ್ವಾದ ಪಡೆದಿದ್ದಾರೆ. ಉದ್ಯಮ ಕ್ಷೇತ್ರದ ದಿಗ್ಗಜ 73 ವರ್ಷದ ನಾರಾಯಣ ಮೂರ್ತಿ, 82 ವರ್ಷದ ರತನ್ ಟಾಟಾರವರ ಕಾಲಿಗೆರಗಿ ನಮಿಸಿದ ದೃಶ್ಯ ನೆಟ್ಟಿಗರ ಮನ ಕದ್ದಿದೆ.

ಭರವಸೆಯ ಕಂಗಳು: ಉದ್ಯಮಿ ರತನ್ ಟಾಟಾ ಅವರ ಆ ದಿನಗಳು!

ಈ ಕಾರ್ಯಕ್ರಮದಲ್ಲಿ ರತನ್ ಟಾಟಾ ಸ್ಟಾರ್ಟ್ ಅಪ್ಸ್ ಕುರಿತು ಮಾತನಾಡಿ, ಎಚ್ಚರಿಸಿದ್ದಾರೆ. ಅವರು ಹಲವಾರು ಸ್ಟಾರ್ಟ್ ಅಪ್ಸ್ ಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ. 

View post on Instagram

ಕಳೆದ ಗುರುವಾರ ರತನ್ ಟಾಟಾ ತಮ್ಮ ಇನ್ಸ್ಟಾಗ್ರಾಂ ಅಕೌಂಟ್ ನಲ್ಲಿ #ThrowbackThursday ಎಂಬ ಹ್ಯಾಷ್ ಟ್ಯಾಗ್ ಬಳಸಿ ತಮ್ಮ ಹರೆಯದ ಫೋಟೋ ಶೇರ್ ಮಾಡಿಕೊಂಡಿದ್ದರು. ಈ ಫೋಟೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ನೀವೊಬ್ಬ ಹಾಲಿವುಡ್ ಹೀರೋನಂತೆ ಕಾಣುತ್ತಿದ್ದೀರಡೆಂಬ ಕಾಮೆಂಟ್ ಕೂಡಾ ಬಂದಿದ್ದವು.

ಜನವರಿ 29ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ