ಕೊರೋನಾ ಆತಂಕ, ಕೆಲ ತಿಂಗಳು EMI ವಿನಾಯಿತಿ!?
ಕೊರೋನಾ ವೈರಸ್ ಆತಂಕ, ಜನರೆಲ್ಲಾ ಕಂಗಾಲು| ಭಾರತ ಲಾಕ್‌ಡೌನ್, ಜನರ ಸಂಕಷ್ಟ ನಿವಾರಿಸಲು ಮುಂದಾದ ಹಣಕಾಸು ಇಲಾಖೆ| ಆರ್‌ಬಿಐಗೆ ಪತ್ರ
ನವದೆಹಲಿ(ಮಾ.26): 21 ದಿನ ಮನೆಯಲ್ಲಿದ್ದು, ಸಂಚಾರ ವೆಚ್ಚವನ್ನು ಉಳಿಯುತ್ತೆ. ಆದರೆ, ಬಡವ ಹಾಗೂ ಮಧ್ಯಮ ವರ್ಗದ ಮಂದಿಗೆ ನಾಳೆ ಕಟ್ಟಬೇಕಾದ ಇಎಂಐ ಚಿಂತೆ ಶುರುವಾಗಿದೆ. ಹೀಗಿರುವಾಗ ಹಣಕಾಸು ಇಲಾಖೆ RBIಗೆ ಪತ್ರವೊಂದನ್ನು ಬರೆದಿದ್ದು, EMI, ಬಡ್ಡಿ ಸಹಿತ ಹಣ ಪಾವತಿ ಹಾಗೂ ಲೋನ್ ಪಾವತಿ ಮೇಲೆ ಕನಿಷ್ಠ ಮೂರು ತಿಂಗಳ ಕಾಲ ರಿಯಾಯಿತಿ ನೀಡುವಂತೆ ಮನವಿ ಮಾಡಿದೆ. ಅಲ್ಲದೇ ನಾನ್ ಪರ್ಫಾರ್ಮಿಂಗ್ ಅಸೆಟ್ಸ್ ಕ್ಲಾಸಿಫಿಕೇಷನ್ ಕೂಡಾ ಕೊಂಚ ಸಡಿಲಗೊಳಿಸುವಂತೆ ಮನವಿ ಮಾಡಿದೆ.
ಏಷ್ಯಾದ ಈ ರಾಷ್ಟ್ರದಲ್ಲಿ ಫಲ ಕೊಡ್ತಿದೆ ಕೊರೋನಾ ನಿಯಂತ್ರಣ ಕ್ರಮ!
ಕೊರೋನಾದಿಂದ ಆದಾಯಕ್ಕೆ ಕತ್ತರಿ
ವಿತ್ತ ಸಚಿವಾಲಯದ ಹಣಕಾಸು ವಿಭಾಗದ ಕಾರ್ಯದರ್ಶಿ ದೇವಾಶಿಶ್ ಪಾಂಡಾ ಈ ಸಂಬಂಧ RBIಗೆ ಮಂಗಳವಾರ ಪತ್ರವೊಂದನ್ನು ಬರೆದಿದ್ದು, ಕೊರೋನಾ ಎಮರ್ಜೆನ್ಸಿ ಮುಗಿಯುವವರೆಗೆ ಇಎಂಐ ಮೇಲೆ ವಿನಾಯಿತಿ ನೀಡುವಂತೆ ಕೇಳಿದ್ದಾರೆ. ಈ ಪತ್ರದಲ್ಲಿ ವೈಯಕ್ತಿಕ ಸಾಲ, ವಾಹನ ಸಾಲ ಮತ್ತು ಗೃಹ ಸಾಲಗಳಿಗೆ ವಿನಾಯಿತಿ ಕೊಡಿ ಎಂದು ಮನವಿ ಮಾಡಿದ್ದು, ಸಾಲಗಳ ಜತೆಗೆ ಸಾಲದ ಮೇಲಿನ ಬಡ್ಡಿಗೂ ವಿನಾಯಿತಿ ನೀಡುವಂತೆಯೂ ಬರೆದಿದ್ದಾರೆ. ಹಲವು ಕಂಪನಿಗಳು, ಕೈಗಾರಿಗೆಗಳ ಸ್ಥಗಿತವಾಗಿರೋ ಹಿನ್ನೆಲೆಯಲ್ಲಿ ಆದಾಯಕ್ಕೆ ಕತ್ತರಿ ಬೀಳುವ ಸಾಧ್ಯತೆಗಳಿವೆ. ಹೀಗಾಗಿ ಈ ವಿನಾಯಿತಿ ನೀಡುವ ಸಾಧ್ಯತೆಗಳಿವೆ ಎನ್ನಲಲಾಗಿದೆ.
ಸದ್ಯ ಭಾರತದಲ್ಲಿ ಏಪ್ರಿಲ್ 15ರವರೆಗೆ ಲಾಕ್‌ಡೌನ್ ಜಾರಿಯಲ್ಲಿರಲಿದೆ. ಕೊರೋನಾ ಯೋಧರನ್ನು ಹೊರತುಪಡಿಸಿ ಯಾರೊಬ್ಬರೂ ಹೊರ ಹೋಗುವಂತಿಲ್ಲ. ಹೀಗಿರುವಾಗ ಇದು ದೇಶಕ್ಕೆ ಹಾಗೂ ನಾಗರಿಕರಿಗೆ ಆರ್ಥಿಕ ಹೊಡೆತ ನೀಡುವುದರಲ್ಲಿ ಅನುಮಾನವೇ ಇಲ್ಲ.