Asianet Suvarna News Asianet Suvarna News

ಸೈನಿಕರ ಮೃತದೇಹದ ಜೊತೆಗೆ ಚಿನ್ನ, ಫ್ರಿಜ್‌ನಲ್ಲಿ ಹೆಣಗಳ ರಾಶಿ: ಉಕ್ರೇನ್‌ ರಷ್ಯಾ ಯುದ್ಧದ ಕರಾಳ ಸತ್ಯ

ರಷ್ಯಾ-ಉಕ್ರೇನ್ ಮಹಾಯುದ್ಧದಲ್ಲಿ ಸತ್ತವರೆಷ್ಟು..? ಡೆತ್ ಟ್ರೈನ್ ಬಿಚ್ಚಿಟ್ಟ ಕರಾಳ ಸತ್ಯ..! ಸಾವಿರಾರು ಸೈನಿಕರ ಹತ್ಯೆ.. ಫ್ರಿಜ್ನಲ್ಲಿ ಹೆಣಗಳ ರಾಶಿ.. ಹೊತ್ತೊಯ್ಯಲು ಬಂತು ಸಾವಿನ ರೈಲು..! ಸೈನಿಕರ ಮೃತದೇಹದ ಜೊತೆಗೆ ಚಿನ್ನವನ್ನು ಹೊತ್ತೊಯ್ಯುತ್ತಿರುವ ರಷ್ಯಾ ಬಣ್ಣ ಬಯಲು..! 

ಕೀವ್(ಮೇ.17): ರಷ್ಯಾ ಉಕ್ರೇನ್ ಯುದ್ಧ, ಕಲಿಯುಗದ ಘನಘೋರ ಯುದ್ಧಕ್ಕೆ ರಷ್ಯಾಧಿಪತಿ ವ್ಲಾದಿಮಿರ್ ಪುಟಿನ್ ರಣಕಹಳೆ ಊದಿದ್ದಾರೆ. ಈ ಯುದ್ಧದಲ್ಲಿ ಗೆದ್ದೇ ಗೆಲ್ತಿನಿ ಅನ್ನೋ ವಿಶ್ವಾಸದಿಂದ ಸಾವಿರಾರು ಸೈನಿಕರನ್ನು ಪುಟ್ಟ ರಾಷ್ಟ್ರ ಉಕ್ರೇನ್ ಮೇಲೆ ಛೂ ಬಿಟ್ಟಿದ್ದಾರೆ. ಆದ್ರೆ ಎಲ್ಲವೂ ಉಲ್ಟಾ ಆಗಿದೆ. ಸಾವಿರಾರು ರಷ್ಯಾ ಸೈನಿಕರು ಯುದ್ಧಭೂಮಿಯಲ್ಲಿ ಕೊಳೆತು ಹೋಗ್ತಿದ್ದಾರೆ. ಮೃತದೇಹಗಳನ್ನ ಟ್ರೇನ್ ಮೂಲಕ ಸಾಗಿಸುತ್ತಿದೆ. ಆದ್ರೆ ಈ ಟ್ರೇನ್ ಬರಿ ಡೆಡ್ ಬಾಡಿಗಳನ್ನ ಮಾತ್ರ ಹೊತ್ತೋಯ್ಯದೇ, ಉಕ್ರೇನ್ ಲೂಟಿ ಮಾಡಿದ ಚಿನ್ನಾಭರಣಗಳನ್ನೂ ಹೊತ್ತೋಯ್ಯುತ್ತಿದೆ. 

ಪೂರ್ವ ಉಕ್ರೇನಿನ ಸಿವರ್‌ಸ್ಕಿ ಡೊನೆಟ್ಸ್‌ ನದಿ ದಾಟಲು, ರಷ್ಯಾ ಪಡೆಗಳು ಬಳಸುತ್ತಿದ್ದ ಪಾಂಟೂನ್ ಸೇತುವೆಯನ್ನು ಉಕ್ರೇನ್‌ ಸೇನೆ ನಾಶಪಡಿಸಿದ್ದು.. ರಷ್ಯಾದ ಸುಮಾರು ಒಂದು ಸಾವಿರ ಸೈನಿಕರು ಹಾಗೂ ಅಪಾರ ಸಂಖ್ಯೆಯ ಸೇನಾ ವಾಹನಗಳನ್ನು ಹೊಡೆದುರುಳಿಸಿದೆ

ಇಷ್ಟೆಲ್ಲಾ ನರಮೇದದ ಮಧ್ಯೆ ರಷ್ಯಾ ಪಕ್ಕಾ ಸೋಲುಂಡು, ವರ್ಷಾಂತ್ಯದ ವೇಳೆಗೆ ರಷ್ಯಾ ವಿರುದ್ಧ ಉಕ್ರೇನ್ ಗೆ ಗೆಲುವು ಸಿಗುತ್ತೆ ಅಂತ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.  ಮೂರು ತಿಂಗಳಾದ್ರು ಉಕ್ರೇನ್ ವಿರುದ್ಧ ಬಲಿಷ್ಟ ರಷ್ಯಾ ಗೆಲುವು ಸಾಧಿಸಲು ಹೆಣಗಾಡ್ತಿದೆ.. ಈ ನಡುವೆಯೇ ವರ್ಷಾಂತ್ಯದ ವೇಳೆಗೆ ರಷ್ಯಾ ವಿರುದ್ಧ ಉಕ್ರೇನ್ ಗೆ ಗೆಲುವು ಸಾಧಿಸಲಿದೆ ಅನ್ನೋ ಮಾಹಿತಿಯನ್ನ  ಗುಪ್ತಚರ ಇಲಾಖೆ ಮುಖ್ಯಸ್ಥರೊಬ್ಬರು ನೀಡಿದ್ದಾರೆ

Video Top Stories