Asianet Suvarna News Asianet Suvarna News

ಡಿಕೆಶಿ ವಿರುದ್ಧ ಡೀಲ್ ಆರೋಪ, ದೂರು ದಾಖಲು: ಮತ್ತೆ ಕಂಟಕ ಶುರು.?

Oct 18, 2021, 12:31 PM IST

ಬೆಂಗಳೂರು (ಅ. 18): ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಿರುದ್ಧ ಡೀಲ್ ಅರೋಪ ಕೇಳಿ ಬಂದಿದ್ದು, ದೂರು ಕೂಡಾ ದಾಖಲಾಗಿದೆ. ಡಿಕೆಶಿ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದ್ದು, ಹೆಲ್ಪಿಂಗ್ ಸಿಟಿಜನ್ ಹಾಗೂ ಪೀಪಲ್ಸ್ ಸಂಸ್ಥೆ ಎಸಿಬಿಗೆ ದೂರು ಸಲ್ಲಿಸಿದೆ. ಈ ದೂರಿನ ಪ್ರತಿ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. 

ಜೆಡಿಎಸ್ ಶಾಸಕರಿಗೆ ಶುರುವಾಯ್ತು ಸಂಕಷ್ಟ: ಸೂಪರ್ ಎಕ್ಸ್‌ಕ್ಲೂಸಿವ್

ಸಲೀಂ- ಉಗ್ರಂ ನಡುವೆ ನಡೆದ ಸಂಭಾಷಣೆ ಅಕ್ಷರಶಃ ಸತ್ಯ. ಡಿಕೆಶಿ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಗೊತ್ತಿದೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಹೆಲ್ಪಿಂಗ್ ಸಿಟಿಜನ್ ಹಾಗೂ ಪೀಪಲ್ಸ್ ಸಂಸ್ಥೆ ಸಂಸ್ಥಾಪಕ ಆಲಂ ಪಾಷಾ ದೂರು ನೀಡಿದ್ದಾರೆ.