Asianet Suvarna News Asianet Suvarna News

ಇಂದಿನಿಂದ ಧಾರ್ಮಿಕ ಕ್ಷೇತ್ರಗಳು ಓಪನ್; ದರ್ಶನಕ್ಕೆ ಅವಕಾಶ, ವಿಶೇಷ ಪೂಜೆ ಇರುವುದಿಲ್ಲ

Jul 5, 2021, 10:52 AM IST

ಬೆಂಗಳೂರು (ಜು. 05): ಮೂರನೇ ಹಂತದ ಲಾಕ್‌ಡೌನ್ ಸಡಿಲಿಕೆಯಲ್ಲಿ ಬಹುತೇಕ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ.  2 ತಿಂಗಳುಗಳಿಂದ ಬಂದ್ ಆಗಿದ್ದ ದೇವಸ್ಥಾನಗಳು ಇಂದಿನಿಂದ ತೆರೆಯಲಿವೆ. ಭಕ್ತರಿಗೆ ದರ್ಶನಕ್ಕೆ ಅವಕಾಶ ಕೊಡಲಾಗಿದೆ.

ಇಂದಿನಿಂದ ದೇಗುಲ ಓಪನ್: ಶೃಂಗೇರಿಯಲ್ಲಿ ಐಡಿ ಕಾರ್ಡ್ ಕಡ್ಡಾಯ

ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮೈಸೂರು ಚಾಮುಂಡಿ ಬೆಟ್ಟ, ಶೃಂಗೇರಿ, ಕೊಲ್ಲೂರು, ಸಿಗಂದೂರು ಸೇರಿದಂತೆ ರಾಜ್ಯಾದ್ಯಂತ ಎಲ್ಲಾ ದೇಗುಲಗಳನ್ನು ಇಂದಿನಿಂದ ತೆರೆಯಲಾಗುತ್ತಿದೆ. ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ವಿಶೇಷ ಪೂಜೆ, ಪ್ರಸಾದ ವಿನಿಯೋಗ ಇರುವುದಿಲ್ಲ.