ಜೈಲಿನಲ್ಲಿರುವ ರಾಗಿಣಿಗೆ ಸಂಕಷ್ಟಗಳ ಸರಮಾಲೆ!
ಡ್ರಗ್ಸ್ ಮಾಫಿಯಾ ಪ್ರಕರಣ ಸಂಬಂಧ ಪರಪ್ಪನ ಜೈಲು ಪಾಲಾಗಿರುವ ಆರೋಪಿ ನಟಿ ರಾಗಿಣಿಗೆ ಒಂದಾದ ಬಳಿಕ ಮತ್ತೊಂದರಂತೆ ಸಂಕಷ್ಟಗಳ ಎದುರಾಗುತ್ತಿವೆ.
ಬೆಂಗಳೂರು(ಸೆ.16): ಡ್ರಗ್ಸ್ ಮಾಫಿಯಾ ಪ್ರಕರಣ ಸಂಬಂಧ ಪರಪ್ಪನ ಜೈಲು ಪಾಲಾಗಿರುವ ಆರೋಪಿ ನಟಿ ರಾಗಿಣಿಗೆ ಒಂದಾದ ಬಳಿಕ ಮತ್ತೊಂದರಂತೆ ಸಂಕಷ್ಟಗಳ ಎದುರಾಗುತ್ತಿವೆ.
ಡ್ರಗ್ಸ್ ಜಾಲ ಬೆನ್ನತ್ತಿದ ಸಿಸಿಬಿಗೆ ರಾಗಿಣಿಯದ್ದೇ ಒಂದು ರಾಮಾಯಣವಾಗಿದೆ. ಹೀಗಾಗೇ ಬೇಲ್‌ಗೆ ಅರ್ಜಿ ಸಲ್ಲಿಸಿರುವ ನಟಿ ರಾಗಿಣಿಗೆ ಅವಾಂತರಗಳೇ ಮುಳ್ಳಾಗಿವೆ.
ಹೌದು ದಿನಕ್ಕೊಂದರಂತೆ ರಾಗಿಣಿ ಅವಾಂತರಗಳು ಬಯಲಾಗತೊಡಗಿದ್ದು, ಬೇಲ್ ಸಿಗೋದು ಅನುಮಾನವಾಗಿದೆ. ಈಗಾಗಲೇ SDPS ಕೋರ್ಟ್‌ನಲ್ಲಿ ರಾಗಿಣಿ ಬೇಲ್‌ಗಾಗಿ ಅರ್ಜಿ ಸಲ್ಲಿಸಿfದು, ಸಿಗುತ್ತಾ? ಇಲ್ಲವಾ? ಎಂಬುವುದೇ ಕುತೂಹಲ ಮೂಡಿಸಿದೆ.