ರಾತ್ರಿ ಜೈಲೂಟ, ನಿದ್ದೆಯಿಲ್ಲ; ಸೆಂಟ್ರಲ್‌ ಜೈಲಿನಲ್ಲಿ ಮೌನಕ್ಕೆ ಜಾರಿದ ಕೈದಿ ನಂ. 6604

ಡ್ರಗ್ಸ್‌ ಮಾಫಿಯಾ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಸ್ಯಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ ಈಗ ಪರಪ್ಪನ ಅಗ್ರಹಾರದಲ್ಲಿ ಕೈದಿ ನಂ 6604 ಆಗಿದ್ದಾರೆ. ಜೈಲು ಸೇರಿರುವ ರಾಗಿಣಿ ನಿದ್ದೆ ಇಲ್ಲದೇ ಮೌನವಾಗಿಯೇ ರಾತ್ರಿ ಕಳೆದಿದ್ದಾರೆ.

First Published Sep 15, 2020, 10:13 AM IST | Last Updated Sep 15, 2020, 10:48 AM IST

ಬೆಂಗಳೂರು(ಸೆ.15): ಡ್ರಗ್ಸ್‌ ಮಾಫಿಯಾ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಸ್ಯಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ ಈಗ ಪರಪ್ಪನ ಅಗ್ರಹಾರದಲ್ಲಿ ಕೈದಿ ನಂ 6604 ಆಗಿದ್ದಾರೆ. ಜೈಲು ಸೇರಿರುವ ರಾಗಿಣಿ ನಿದ್ದೆ ಇಲ್ಲದೇ ಮೌನವಾಗಿಯೇ ರಾತ್ರಿ ಕಳೆದಿದ್ದಾರೆ.

ಜೈಲಿಗೆ ಹೋಗುವ ವೇಳೆಯೂ ಕಣ್ಣೀರು ಹಾಕಿ ತೆರಳಿದ್ದ ರಾಗಿಣಿ, ಕಂಬಿ ಹಿಂದೆಯೂ ಕಣ್ಣೀರು ಸುರಿಸಿದ್ದಾರೆ. ಸದ್ಯ ಅವರು ಪರಪ್ಪನ ಅಗ್ರಹಾರದ ಮಹಿಳಾ ಕ್ವಾರಂಟೈನ್ ಸೆಲ್‌ನಲ್ಲಿದ್ದಾರೆ. ಲ್ಲಿ ಜೈಲು ಸಿಬ್ಬಂಇ ನೀಡಿದ ಊಟವನ್ನೇ ಸೇವಿಸಿದ್ದಾರೆ.