Asianet Suvarna News Asianet Suvarna News

ಲಸಿಕಾ ಅಭಿಯಾನಕ್ಕೆ ಸಾಂಕೇತಿಕ ಚಾಲನೆ, ಸದ್ಯ 3+1 ಲಕ್ಷ ಲಸಿಕೆ ಸಂಗ್ರಹವಿದೆ ಎಂದ ಸಿಎಂ ಬಿಎಸ್‌ವೈ

ಭಾರತ ಸರ್ಕಾರದ ಸೂಚನೆಯಂತೆ ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯಕ್ರಮ ಶುರುವಾಗಿದೆ. ರಾಜ್ಯದಲ್ಲಿ ಸಹ ಈ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಗಿದೆ.

ಬೆಂಗಳೂರು (ಮೇ. 01): 'ಭಾರತ ಸರ್ಕಾರದ ಸೂಚನೆಯಂತೆ ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯಕ್ರಮ ಶುರುವಾಗಿದೆ. ರಾಜ್ಯದಲ್ಲಿ ಸಹ ಈ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಗಿದೆ. ಸದ್ಯ ಕೇಂದ್ರ ಸರ್ಕಾರದಿಂದ 3 ಲಕ್ಷ ಲಸಿಕೆ ಲಭ್ಯವಾಗಿದೆ. ಜೊತೆಗೆ 2 ಕೋಟಿ ಲಸಿಕೆ ಖರೀದಿಸಲು ಹಣವನ್ನು ಮೀಸಲಿಟ್ಟಿದ್ದೇವೆ. ಖಾಸಗಿ ಆಸ್ಪತ್ರೆಗಳಲ್ಲಿ ನಿಗದಿತ ಶುಲ್ಕ ವಿಧಿಸಲಾಗಿದೆ. ಇದಕ್ಕಿಂತ ಹೆಚ್ಚಿನ ಹಣ ತೆಗೆದುಕೊಳ್ಳಬಾರದು. ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ, ಕೋವಿಡ್ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಿ' ಎಂದು ಸಿಎಂ ಮನವಿ ಮಾಡಿದ್ದಾರೆ. 

ಸ್ಯಾನಿಟೈಸರ್ ಬದಲು ರಸ್ತೆಗಳಲ್ಲಿ ನೀರನ್ನು ಸಿಂಪಡಿಸಿದ ಬಿಬಿಎಂಪಿ, ಇದೆಂಥಾ ಕಳ್ಳಾಟ..?