ಶಿರಾ, ಆರ್ ಆರ್ ನಗರ ಕ್ಷೇತ್ರದ ಮರುಚುನಾವಣಾ ದಿನಾಂಕ ನಿಗದಿ

ಜೆಡಿಎಸ್‌ ಶಾಸಕ ಸತ್ಯನಾರಾಯಣ್ ನಿಧನದಿಂದ ತೆರವಾಗಿದ್ದ ಶಿರಾ, ಮುನಿರತ್ನ ರಾಜಿನಾಮೆಯಿಂದ ತೆರವಾಗಿದ್ದ ರಾಜರಾಜೇಶ್ವರಿ ನಗರ  ಕ್ಷೇತ್ರಗಳ ಮರುಚುನಾವಣೆಗೆ ದಿನಾಂಕ ನಿಗದಿಯಾಗಿದೆ. 
 

First Published Sep 29, 2020, 5:15 PM IST | Last Updated Sep 29, 2020, 5:15 PM IST

ಬೆಂಗಳೂರು (ಸೆ. 29): ಜೆಡಿಎಸ್‌ ಶಾಸಕ ಸತ್ಯನಾರಾಯಣ್ ನಿಧನದಿಂದ ತೆರವಾಗಿದ್ದ ಶಿರಾ, ಮುನಿರತ್ನ ರಾಜಿನಾಮೆಯಿಂದ ತೆರವಾಗಿದ್ದ ರಾಜರಾಜೇಶ್ವರಿ ನಗರ  ಕ್ಷೇತ್ರಗಳ ಮರುಚುನಾವಣೆಗೆ ದಿನಾಂಕ ನಿಗದಿಯಾಗಿದೆ. 

ಶಿರಾ, RR ನಗರ ಬೈ ಎಲೆಕ್ಷನ್‌: ಕಾಂಗ್ರೆಸ್ ಅಧ್ಯಕ್ಷ ಡಿಕೆಶಿಗೆ ಸವಾಲಿನ ಚುನಾವಣೆ

ನವೆಂಬರ್ 3 ಕ್ಕೆ ಶಿರಾ ಹಾಗೂ ರಾಜರಾಜೇಶ್ವರಿ ನಗರ ಉಪಚುನಾವಣೆ ನಡೆಯಲಿದೆ. ನವೆಂಬರ್ 10 ಕ್ಕೆ ಎರಡೂ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. ಅಕ್ಟೋಬರ್ 9 ಕ್ಕೆ ಚುನಾವಣಾ ಅಧಿಸೂಚನೆ ಪ್ರಕಟವಾಗುತ್ತದೆ. ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 16 ಕೊನೆಯ ದಿನವಾಗಿದೆ. ನಾಮಪತ್ರ ವಾಪಸ್ ಪಡೆಯಲು ನವೆಂಬರ್ 19 ಕೊನೆಯ ದಿನ. ಇನ್ನು ಮಸ್ಕಿ, ಬಸವಕಲ್ಯಾಣ ಕ್ಷೇತ್ರಕ್ಕೆ ಚುನಾವಣೆ ಬಾಕಿ ಇದೆ.