Asianet Suvarna News Asianet Suvarna News

Assemble election: ರಾಜಕೀಯ ತಲ್ಲಣ ಸೃಷ್ಟಿಸಿತೇಕೆ ಎಚ್‌ಡಿಕೆ ಹೇಳಿಕೆ ?

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಒಂದು ಹೇಳಿಕೆ ಬಿಜೆಪಿಯ ಮೇಲೆ ಬ್ರಹ್ಮಾಸ್ತ್ರವಾಗಿ ಪರಿಣಮಿಸಿತೇ ಎಂದ ಅನುಮಾನ ಕಾಡುತ್ತಿದೆ.

First Published Feb 11, 2023, 2:31 PM IST | Last Updated Feb 11, 2023, 2:31 PM IST

ಬೆಂಗಳೂರು (ಫೆ.11): ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಒಂದು ಹೇಳಿಕೆ ಬಿಜೆಪಿಯ ಮೇಲೆ ಬ್ರಹ್ಮಾಸ್ತ್ರವಾಗಿ ಪರಿಣಮಿಸಿತೇ ಎಂದ ಅನುಮಾನ ಕಾಡುತ್ತಿದೆ. ಇಡೀ ರಾಜ್ಯದ ರಾಜಕಾರಣವನ್ನೇ ತಲ್ಲಣವನ್ನು ಸೃಷ್ಟಿ ಮಾಡಲಿದೆಯೇ ಎಂಬುದು ಗೋಚರವಾಗುತ್ತಿದೆ.

ರಾಜ್ಯದಲ್ಲಿ ಬಿಜೆಪಿಯು ಲಿಂಗಾಯತ, ವೀರಶೈವ, ಒಕ್ಕಲಿಗ, ಹಿಂದುಳಿದವರು, ದಲಿತರಿಗೆ ಅನ್ಯಾಯವಾಗಲಿದೆ. ಚುನಾವಣೆ ಮುಕ್ತಾಯದ ಬಳಿಕ ಬಿಜೆಪಿಯಲ್ಲಿ ಬ್ರಾಹ್ಮಣ ಮುಖ್ಯಮಂತ್ರಿ ಮಾಡಲು ಆರ್‌ಎಸ್‌ಎಸ್‌ ಯೋಜನೆ ರೂಪಿಸಿದೆ. ಇದರಿಂದ ನಾಡಿನ ಬಹುಜನವಾಗಿರುವ ವರ್ಗಗಳಿಗೆ ಭಾರಿ ಪ್ರಮಾಣದಲ್ಲಿ ಹಿನ್ನಡೆ ಉಂಟಾಗಲಿದೆ. ಇನ್ನು ರಾಜ್ಯದಲ್ಲಿ ಕಳೆದೊಂದು ದಶಕದ ಹಿಂದೆ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಬ್ರಾಹ್ಮಣ ವ್ಯಕ್ತಿಯನ್ನು ಈಗ ಮುಖ್ಯಮಂತ್ರಿ ಮಾಡಲಾಗುತ್ತಿದೆ. ಅದರಲ್ಲಿಯೂ ಇವರು ದಕ್ಷಿಣ ಕರ್ನಾಟಕದ ಬ್ರಾಹ್ಮಣರಲ್ಲ. ಬ್ರಾಹ್ಮಣರಲ್ಲೂ ಹಲವು ಪಂಗಡಗಳಿವೆ. ಶೃಂಗೇರಿ ಮಠದ ಮೇಲೆ ಧಾಳಿ ಮಾಡಿದ ಮರಾಠ ಪೇಶ್ವೆ ಪಂಗಡಕ್ಕೆ ಸೇರಿದ ಬ್ರಾಹ್ಮಣರಾಗಿದ್ದಾರೆ. ಭಾರತದ ಪಿತಾಮಹ ಗಾಂಧೀಜಿಯನ್ನು ಕೊಂದಂತಹ ಗೋಡ್ಸೆ, ಸಾವರ್ಕರ್‌ ವಂಶಕ್ಕೆ ಸೇರಿದವರಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. 
 

Video Top Stories