Panchanga: ಇಂದು ಭಾನುವಾರ, ಸಪ್ತಮಿ ತಿಥಿ, ಆದಿತ್ಯ ಹೃದಯ ಪಾರಾಯಣದಿಂದ ಆರೋಗ್ಯ, ಆತ್ಮಬಲ ವೃದ್ಧಿ
. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಉತ್ತರ ನಕ್ಷತ್ರ, ಇಂದು ಭಾನುವಾರ. ಸಪ್ತಮಿ ತಿಥಿ ಬಂದಿದ್ದು, ಸೂರ್ಯೋಪಾಸನೆಗೆ ಪ್ರಶಸ್ತವಾದ ಕಾಲ.
ಓದುಗರೆಲ್ಲರಿಗೂ ಶುಭೋದಯ, ಶುಭಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಉತ್ತರ ನಕ್ಷತ್ರ, ಇಂದು ಭಾನುವಾರ. ಸಪ್ತಮಿ ತಿಥಿ ಬಂದಿದ್ದು, ಸೂರ್ಯೋಪಾಸನೆಗೆ ಪ್ರಶಸ್ತವಾದ ಕಾಲ. ಆದಿತ್ಯಹೃದಯ ಪಾರಾಯಣ, ಸೌರಸೂಕ್ತ, ಸೂರ್ಯ ಸಂಬಂಧಿ ಶ್ಲೋಕಗಳನ್ನು ಹೇಳುವುದರಿಂದ ಆರೋಗ್ಯ ವೃದ್ಧಿಯಾಗುವುದು. ಆತ್ಮಬಲ ವೃದ್ಧಿಯಾಗುವುದು.