ಉಡುಪಿ ಕೋವಿಡ್ ಆಸ್ಪತ್ರೆಯಲ್ಲಿ ಅಪರೂಪದ ಹೆರಿಗೆ!

  • ಕೊರೋನಾ ಸೋಂಕಿತೆಗೆ ಸಿಜೇರಿಯನ್ ಹೆರಿಗೆ
  • ಮಹಾರಾಷ್ಟ್ರದಿಂದ ಬಂದವರ ಪ್ರಾಥಮಿಕ ಸಂಪರ್ಕ ಹೊಂದಿದ್ದ ಗರ್ಭಿಣಿ
  • ರಾಜ್ಯದ ಇತಿಹಾಸದಲ್ಲಿ ಕೋವಿಡ್ ಪೇಶೆಂಟ್ ಗೆ ಪ್ರಥಮ ಸಿಜೇರಿಯನ್ ಹೆರಿಗೆ
     
First Published Jun 17, 2020, 6:19 PM IST | Last Updated Jun 17, 2020, 6:19 PM IST

ಉಡುಪಿ (ಜೂ. 17):  22 ವರ್ಷದ ತುಂಬು ಗರ್ಭಿಣಿಗೆ  ಸಿಜೇರಿಯನ್ ಹೆರಿಗೆ ಮಾಡುವಲ್ಲಿ ಉಡುಪಿ ವೈದ್ಯರು ಯಶಸ್ವಿಯಾಗಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಕೋವಿಡ್ ಪೇಶೆಂಟ್‌ಗೆ  ಸಿಜೇರಿಯನ್ ಹೆರಿಗೆ ಮಾಡಿರೋದು ಇದೇ ಮೊದಲ ಬಾರಿಯಾಗಿದೆ. 

ಇದನ್ನೂ ನೋಡಿ | ನವೆಂಬರ್‌ನಲ್ಲಿ ಹೆಚ್ಚಾಗಲಿದೆ ಕೊರೊನಾ; ಐಸಿಯು, ವೆಂಟಿಲೇಟರ್‌ ಕೊರತೆ ಸಂಭವ...

ಮಹಾರಾಷ್ಟ್ರದಿಂದ ಬಂದವರ ಪ್ರಾಥಮಿಕ ಸಂಪರ್ಕ ಹೊಂದಿದ್ದ ಗರ್ಭಿಣಿ, ಉಡುಪಿಯ ಟಿಎಂಎ ಪೈ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಮಗುವಿಗೆ ಜನ್ಮ ನೀಡಿದ್ದಾರೆ. ಬಾಣಂತಿ ಮತ್ತು ಮಗು ಆರೋಗ್ಯವಾಗಿದ್ದು, ಬಾಣಂತಿ ಕೊರೋನಾದಿಂದ ಚೇತರಿಸಿಕೊಳ್ಳುತ್ತಿದ್ದಾರೆ, ಎಂದು ಕೋವಿಡ್ ಆಸ್ಪತ್ರೆ ವೈದ್ಯ ಡಾ. ಶಶಿಕಿರಣ್ ಮಾಹಿತಿ ನೀಡಿದ್ದಾರೆ.