ರಾಯಚೂರು; ಲೈಂಗಿಕ ಅಲ್ಪಸಂಖ್ಯಾತರಿಂದ ಕಲ್ಯಾಣ, ತಮ್ಮ ಖರ್ಚಿನಲ್ಲೇ ತಾಳಿ ಬಂಗಾರ!

ಲೈಂಗಿಕ ಅಲ್ಪಸಂಖ್ಯಾತರಿಂದ ನವ ಜೋಡಿಗಳ ಮದುವೆ!/ ಬಡ ಜನರ ಸಹಾಯಕ್ಕೆ ಮುಂದಾದ ಲೈಂಗಿಕ ಅಲ್ಪಸಂಖ್ಯಾತರು!/ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಮದುವೆ/ ಹೊಸಳ್ಳಿ ಇಜೆ ಕ್ಯಾಂಪಿನಲ್ಲಿರುವ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿವಾಹ

First Published Dec 7, 2020, 8:37 PM IST | Last Updated Dec 7, 2020, 8:39 PM IST

ರಾಯಚೂರು(ಡಿ. 07)  ಬಡ ಜನರ ಸಹಾಯಕ್ಕೆ ಮುಂದಾದ ಲೈಂಗಿಕ ಅಲ್ಪಸಂಖ್ಯಾತರು ಕಲ್ಯಾಣ ಕೆಲಸ ಮಾಡಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಮದುವೆ ನಡೆದಿದೆ.

ವಧುವಿಗೆ ಕೊರೋನಾ ಸೋಂಕು... ಪಿಪಿಯ ಕಿಟ್ ಧರಿಸಿ ಮದುವೆ

ಹೊಸಳ್ಳಿ ಇಜೆ ಕ್ಯಾಂಪಿನಲ್ಲಿರುವ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿವಾಹ ಸಮಾರಂಭ ನೆರವೇರಿದೆ.  ಕರ್ನಾಟಕ ರಾಜ್ಯ ಜೋಗಪ್ಪ ಸಂಘ ತಾಲ್ಲೂಕು ಸಮಿತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಘದ ಗುರುಮಾತೆ ಜಮುನಾ ನೇತೃತ್ವದಲ್ಲಿ ಅತ್ಯಂತ ಕಡು ಬಡವರನ್ನು ಗುರುತಿಸಿ ಮದುವೆ ಆಯೋಜನೆ ಮಾಡಲಾಗಿತ್ತು ತಮ್ಮ ಖರ್ಚಿನಲ್ಲೇ ಬಂಗಾರ, ತಾಳಿ ಸೇರಿದಂತೆ ವಿವಿಧ ಒಡವೆಗಳನ್ನು ಮಾಡಿಸಿ ಸರಳ ಸಮಾರಂಭ ಮೂಲಕ ಜೋಡಿಗಳಿಗೆ ಮದುವೆ ನೆರವೇರಿಸಲಾಗಿದೆ.