ನನಸಾಗದ ಮೋದಿ ಕನಸು: ರಾಯಚೂರಿನಲ್ಲಿ 'ಸ್ವಚ್ಛ ಭಾರತ' ಮೂಲೆಗುಂಪು

ರಾಯಚೂರು ಜಿಲ್ಲೆಯಲ್ಲಿ ಸ್ವಚ್ಛ ಭಾರತ ಯೋಜನೆ ಹಳ್ಳ ಹಿಡಿದಿದ್ದು,  ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಯೋಜನೆ ಪೂರ್ಣಗೊಂಡಿಲ್ಲ.
 

First Published Nov 30, 2022, 4:27 PM IST | Last Updated Nov 30, 2022, 4:27 PM IST

ರಾಯಚೂರು ಜಿಲ್ಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸ್ವಚ್ಛ ಭಾರತ ಯೋಜನೆಗಾಗಿ ಹಣ ನೀಡಿದ್ರೂ, ಯೋಜನೆ ಪೂರ್ಣಗೊಳಿಸಲು ಅಧಿಕಾರಿಗಳು ಮಾತ್ರ ಮನಸ್ಸು ಮಾಡುತ್ತಿಲ್ಲ. ಈ ಯೋಜನೆ ಹೆಸರಲ್ಲಿ ರಾಯಚೂರು ಜಿಲ್ಲೆಯ 178 ಗ್ರಾಮ ಪಂಚಾಯತ್'ಗಳಿಗೆ 9 ಕೋಟಿಗೂ ಅಧಿಕ ಹಣದಲ್ಲಿ ಸ್ವಚ್ಛತಾ ವಾಹನ ಖರೀದಿ ಮಾಡಿದ್ದಾರೆ. ಒಂದು ಗ್ರಾಮ ಪಂಚಾಯತಿಗೆ ಕನಿಷ್ಠ 4 ರಿಂದ 5 ಸಾವಿರ ಪ್ಲಾಸ್ಟಿಕ್ ಬುಟ್ಟಿಗಳನ್ನು ಖರೀದಿಸಿ ವಿತರಣೆ ಮಾಡಿದ್ದಾರೆ. ಜೊತೆಗೆ ಕಸ ವಿಲೇವಾರಿ ಮಾಡುವ ಯಂತ್ರಗಳ ಖರೀದಿಯೂ ಆಗಿದೆ. 178 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 10 ಲಕ್ಷ ವೆಚ್ಚದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಗಳ ನಿರ್ಮಾಣ ಮಾಡಿದ್ದಾರೆ. ಆದ್ರೆ ಬಹುತೇಕ ಕಸ ವಿಲೇವಾರಿ ಘಟಕಗಳು ಕಳಪೆ ಕಾಮಗಾರಿ ಆಗಿ ಅರ್ಧಕ್ಕೆ ನಿಂತಿವೆ. ಹೀಗೆ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸಾಗಿರುವ ಸ್ವಚ್ಛ ಭಾರತ ಯೋಜನೆಯೂ ಯಶ್ವಸಿಯಾಗುವ ಮುನ್ನವೇ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹಳ್ಳ ಹಿಡಿದಿದೆ.

Vijayapura: ಮತದಾರ ಪಟ್ಟಿಯಲ್ಲಿ ಹೆಸರು ಡಿಲಿಟ್‌ ಖಂಡಿಸಿ ಧರಣಿ ಸತ್ಯಾಗ್ರಹ