ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ಸಾರ್ಥಕತೆ ದಿನ: ಬಾಲಕನಿಗೆ ಮರುಜನ್ಮ ನೀಡಿದ ಕರುನಾಡು

ಎರಡೂ ಕೈ ಕಳೆದುಕೊಂಡು ಕಂಗಾಲಾಗಿ ಕುಳಿತಿದ್ದ ಬಾಲಕ| ಹಿಂದೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಕಾಳಜಿಗೆ ಮಿಡಿದಿದ್ದ  ಕರುನಾಡಿನ ಜನತೆ ಹಾಗೂ ರಾಜ್ಯಸಭಾ ಸದಸ್ಯೆ ಜೆ.ಸಿ. ಚಂದ್ರಶೇಖರ್‌| ಕೊಟ್ಟ ಭರವಸೆಯಂತೆ ಮಾತು ಉಳಿಸಿಕೊಂಡ ಜೆ.ಸಿ. ಚಂದ್ರಶೇಖರ್‌| 

First Published Dec 7, 2020, 3:16 PM IST | Last Updated Dec 7, 2020, 3:16 PM IST

ಬೆಳಗಾವಿ(ಡಿ.07): ಕಳೆದ ಒಂದೂವರೆ ವರ್ಷದ ಹಿಂದೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಎರಡೂ ಕೈ ಕಳೆದುಕೊಂಡು ಕಂಗಾಲಾಗಿ ಕುಳಿತಿದ್ದ ಬಾಲಕನ ಕುರಿತು ಒಂದು ವರದಿ ಪ್ರಸಾರ ಮಾಡಿತ್ತು. ಈ ಬಾಲಕನ ಪಾಲಿಗೆ ಆಸರೆಯಾಗಬೇಕು ಅಂತ ಹಟಕ್ಕೆ ನಿಂತಿತ್ತು. ಆಗ ನಮ್ಮ ಕಾಳಜಿಗೆ ಕರುನಾಡಿನ ಜನರು ಹಾಗೂ ರಾಜ್ಯಸಭಾ ಸದಸ್ಯೆ ಜೆ.ಸಿ. ಚಂದ್ರಶೇಖರ್‌ ನೆರವಾಗಿದ್ದರು. 

ಬೀದರ್‌: ರೈತನ ಬೆನ್ನಿಗೆ ನಿಂತ ಬಿಗ್‌ 3, ಅನ್ನದಾತನ ಬದುಕಲ್ಲಿ ಹೊಸ ಭರವಸೆ..!

ಬಾಲಕ ಸಂಪೂರ್ಣ ವೈದ್ಯಕೀಯ ವೆಚ್ಚವನ್ನ ಭರಿಸುವುದಾಗಿ ಜೆ.ಸಿ. ಚಂದ್ರಶೇಖರ್‌ ಅಂದು ಭರವಸೆ ಕೊಟ್ಟಿದ್ದರು. ಇಂದು ಕೊಟ್ಟ ಭರವಸೆಯಂತೆ ಜೆ.ಸಿ. ಚಂದ್ರಶೇಖರ್‌ ಮಾತು ಉಳಿಸಿಕೊಂಡಿದ್ದಾರೆ. ಇದರ ಫಲವೇ ಕಿರಣ್‌ ಇಂದು ನಮ್ಮ ನಿಮ್ಮಂತಾಗಿದ್ದಾನೆ.