ಬೆಳಗಾವಿ: ಕಾರ್ಖಾನೆಗೆ ಸಿಗದ ಅನುಮತಿ, ‌50 ಕ್ಕೂ ಹೆಚ್ಚು ನೌಕರರಿಂದ ಆತ್ಮಹತ್ಯೆ ಯತ್ನ

ಕಾರ್ಖಾನೆಯ ಸುಮಾರು 300ಕ್ಕೂ ಅಧಿಕ ಸಿಬ್ಬಂದಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಗೆ ಮುತ್ತಿಗೆ ಹಾಕಿದರು. ಈ ವೇಳೆ 50ಕ್ಕೂ ಹೆಚ್ಚಿನ ಸಿಬ್ಬಂದಿ ಕುತ್ತಿಗೆಗೆ ನೇಣು ಹಗ್ಗ ಹಾಕಿಕೊಂಡು ನಿಂತರೆ, ಮತ್ತೆ ಕೆಲವರು ವಿಷದ ಬಾಟಲಿಯನ್ನು ತಮ್ಮ ಮುಂದೆ ಇಟ್ಟುಕೊಂಡು ಪ್ರತಿಭಟನೆ ನಡೆಸಿದರು.

First Published Dec 17, 2024, 11:37 AM IST | Last Updated Dec 17, 2024, 11:37 AM IST

ಬೆಳಗಾವಿ(ಡಿ.17):  ಎಥೆನಾಲ್ ಘಟಕ ಆರಂಭಕ್ಕೆ ಅನುಮತಿ ನೀಡುತ್ತಿಲ್ಲ ಎಂದು ಆರೋಪಿಸಿ ರಾಯಬಾಗ ತಾಲೂಕಿನ ಅಳಗವಾಡಿ ಗ್ರಾಮದ ಬ್ರಹ್ಮಾನಂದ ಸಾಗರ ಜಾಗರಿ ಇಂಡಸ್ಟ್ರಿ ಮತ್ತು ಅಸ್ಟಿನ್ಸ್ ಬಯೋಪಿಲ್ ಕಾರ್ಖಾನೆಯ ಸಿಬ್ಬಂದಿ ಸೋಮವಾರ ಬೆಳಗಾವಿಯ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಗೆ ಮುತ್ತಿಗೆ ಹಾಕಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. 

ವಿಜಯೇಂದ್ರ 150 ಕೋಟಿ ಆಮಿಷ: ಬಿಜೆಪಿ ವಿರುದ್ಧವೇ ಅಸ್ತ್ರ ಹೆಣೆದ ಕಾಂಗ್ರೆಸ್‌ ನಾಯಕರು!