Asianet Suvarna News Asianet Suvarna News

ಬೋಟ್ ಮುಳುಗಿದ ಪ್ರಕರಣ: ರಕ್ಷಣೆಗೆ ಮುಂದಾಗದ ಕೋಸ್ಟ್ ಗಾರ್ಡ್ ವಿರುದ್ಧ ಮೀನುಗಾರರ ಆಕ್ರೋಶ

- ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಿ ಓರ್ವ ನಾಪತ್ತೆ ಪ್ರಕರಣ

- 5 ಗಂಟೆ ಕಳೆದರೂ ಸ್ಥಳಕ್ಕೆ ಬಾರದೇ ಕೋಸ್ಟ್ ಗಾರ್ಡ್ ಮತ್ತು ಕರಾವಳಿ ತಟರಕ್ಷಣಾ ಪಡೆ ನಿರ್ಲಕ್ಷ್ಯ

- ರಕ್ಷಣೆಗೆ ಮುಂದಾಗದ ಕೋಸ್ಟ್ ಗಾರ್ಡ್ ವಿರುದ್ಧ ಮೀನುಗಾರರ ಆಕ್ರೋಶ
 

ಮಂಗಳೂರು (ಸೆ. 12): ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಿ ಓರ್ವ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ  5 ಗಂಟೆ ಕಳೆದರೂ ಸ್ಥಳಕ್ಕೆ ಬಾರದೇ ಕೋಸ್ಟ್ ಗಾರ್ಡ್ ಮತ್ತು ಕರಾವಳಿ ತಟರಕ್ಷಣಾ ಪಡೆ ನಿರ್ಲಕ್ಷ್ಯ ವಹಿಸಿದೆ. 

ಬೀದರ್‌ನಲ್ಲಿ ಭಾರೀ ಮಳೆ: ಅತಿವೃಷ್ಟಿಗೆ ರೈತ ಕಂಗಾಲು

ಘಟನೆ ನಡೆದ ಸಮೀಪದಲ್ಲೇ ಕೋಸ್ಟ್ ಗಾರ್ಡ್ ಕೇಂದ್ರವಿದ್ದರೂ ಸ್ಥಳಕ್ಕೆ ಬಾರದೇ ನಿರ್ಲಕ್ಷ್ಯ ವಹಿಸಿದ್ದಕ್ಕೆ ಕೋಸ್ಟ್ ಗಾರ್ಡ್ ವಿರುದ್ಧ ಮೀನುಗಾರರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಿಲ್ ನೆಟ್ ಬೋಟ್ ಅವಘಡದಲ್ಲಿ ಮೀನುಗಾರ ಶರೀಫ್ ಸಮುದ್ರಪಾಲಾಗಿದ್ದು, ಅಬ್ದುಲ್ ಅಜೀಜ್, ಇಂತಿಯಾಜ್, ಸಿನಾನ್, ಫೈರೋಜ್ ಎಂಬುವವರನ್ನು ರಕ್ಷಣೆ ಮಾಡಿದ್ದಾರೆ. 

Video Top Stories