Asianet Suvarna News Asianet Suvarna News

ಹದ್ದು ಮೀರಿದ ಬೆಂಗಳೂರಿನ ಅಪೋಲೋ, ವಿಕ್ರಂ ಆಸ್ಪತ್ರೆಗಳಿಗೆ ಬಿಸಿ ಮುಟ್ಟಿಸಿದ ಸರ್ಕಾರ...!

ನಗರದ ಎರಡು ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಬಿಸಿ ಮುಟ್ಟಿಸಿದೆ. ಸರ್ಕಾರ ಸೂಚಿಸಿದ್ದ ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ ವಿಕ್ರಂ ಮತ್ತು ಅಪೋಲೋ ಆಸ್ಪತ್ರೆ ವಿರುದ್ಧ ಶಿಸ್ತು ಕ್ರಮಕೈಗೊಂಡಿದೆ.

ಬೆಂಗಳೂರು, (ಜುಲೈ.14): ನಗರದ ಎರಡು ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಬಿಸಿ ಮುಟ್ಟಿಸಿದೆ.  ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ ವಿಕ್ರಂ ಮತ್ತು ಅಪೋಲೋ ಆಸ್ಪತ್ರೆ ವಿರುದ್ಧ ಶಿಸ್ತು ಕ್ರಮಕೈಗೊಂಡಿದೆ.

2 ಆಸ್ಪತ್ರೆಗಳಿಗೆ ನೋಟಿಸ್; ಆದೇಶ ಉಲ್ಲಂಘಿಸಿದರೆ ಸೀಲ್‌ಡೌನ್ ಎಚ್ಚರಿಕೆ

ಈ ಹಿಂದೆ ನೀಡಿರುವ ನೋಟಿಸ್‌ಗೆ ಸ್ಪಂದಿಸದ ಈ ಎರಡು ಆಸ್ಪತ್ರೆಗಳ OPD ಚಿಕಿತ್ಸೆ ಬಂದ್ ಮಾಡುವಂತೆ ಆದೇಶ ನೀಡಿದೆ. ಅಲ್ಲದೇ ಲೈಸೆನ್ಸ್ ರದ್ದು ಮಾಡುವ ಎಚ್ಚರಿಕೆಯನ್ನೂ ಸಹ ಕೊಡಲಾಗಿದೆ. ಇದು ಇನ್ನುಳಿದ ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆಯ ಗಂಟೆಯೂ ಆಗಿದೆ.

Video Top Stories