Asianet Suvarna News Asianet Suvarna News

ಬೆಂಗ್ಳೂರು ಮನೆ ಮಾಲೀಕರಿಗೆ ಬಿಗ್ ಶಾಕ್, ನಿಮ್ಮ ಮನೆ ಮುಂದೆ ಗಾಡಿ ನಿಲ್ಲಿಸೋ ಮುನ್ನ ಎಚ್ಚರ

ಬೆಂಗಳೂರಿನಲ್ಲಿ ವಾಹನ ಇಟ್ಟುಕೊಂಡಿರುವ ಮನೆ ಮಾಲೀಕರಿಗೆ ಸರ್ಕಾರ ಶಾಕ್‌ ಕೊಟ್ಟಿದೆ. ಹಾಗಾಗಿ  ನಿಮ್ಮ ಮನೆ ಮುಂದೆ ಗಾಡಿ ನಿಲ್ಲಿಸೋ ಮುನ್ನ ಎಚ್ಚರ..ಎಚ್ಚರ...

ಬೆಂಗಳೂರು, (ಸೆಪ್ಟೆಂಬರ್.21): ಬೆಂಗಳೂರಿನಲ್ಲಿ ವಾಹನ ಇಟ್ಟುಕೊಂಡಿರುವ ಮನೆ ಮಾಲೀಕರಿಗೆ ಸರ್ಕಾರ ಶಾಕ್‌ ಕೊಟ್ಟಿದೆ. ಇನ್ಮುಂದೆ ನಿಮ್ಮ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಿದರೆ ದಂಡ ಬೀಳೋದು ಪಕ್ಕಾ.

ಮಳೆ ಬರುವ ಟೈಮ್‌ನಲ್ಲಿ ಅಂಡರ್​ಪಾಸ್​ನಲ್ಲಿ ವಾಹನ ನಿಲ್ಲಿಸಿದರೆ ದಂಡ: ರವಿಕಾಂತೇಗೌಡ

ಹೌದು...ಜನರ ಜೇಬಿಗೆ ಕತ್ತರಿ ಹಾಕೋಕೆ ಹೊಸ ಪಾರ್ಕಿಂಗ್ ಕಾಯ್ದೆ ಬಂದಿದೆ. ಈ ಹಿನ್ನೆಲೆಯಲ್ಲಿ ಮನೆ ಮುಂದಿನ ರಸ್ತೆಯಲ್ಲಿ ಗಾಡಿ ಸಿಲ್ಲಿಸಿದ್ರೆ ದಂಡ ಫಿಕ್ಸ್.  ಮನೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಇದ್ದವರು ಬಚಾವ್.