ವರ್ಗಾವಣೆ ವ್ಯವಹಾರಕ್ಕಿಳಿದ ಮೇಲೆ ಕಾನೂನಿನ ಭಯವೆಲ್ಲಿರುತ್ತದೆ? ಖರ್ಗೆ ಪ್ರಶ್ನೆ
* ಮೈಸೂರು ಗ್ಯಾಂಗ್ ರೇಪ್ ಪ್ರಕರಣ
* ಮೈಸೂರು ಪೊಲೀಸರ ವಿರುದ್ಧ ಸ್ಥಳೀಯರ ಆಕ್ರೋಶ
* ಗೃಹ ಸಚಿವರ ಹೇಳಿಕೆಗೆ ಕಾಂಗ್ರೆಸ್ ವರೋಧ
* ಎಲ್ಲಾ ಇಲಾಖೆಗೆಳು ವ್ಯವಹಾರಕ್ಕೆ ಇಳಿದಿವೆ ಎಂದ ಪ್ರಿಯಾಂಕ್ ಖರ್ಗೆ
ಮೈಸೂರು(ಆ. 26) ಸಂಜೆ ವೇಳೆ ಯುವತಿ ಅಲ್ಲಿಗೆ ಹೋಗಬಾರದಿತ್ತು.. ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗಳು ಆರಂಭವಾಗಿದೆ.
ಗ್ಯಾಂಗ್ ರೇಪ್ ಪ್ರಕರಣ; ಮತ್ತೊಬ್ಬ ಸಚಿವರ ಉಡಾಫೆ ಉತ್ತರ
ಈ ಬಗ್ಗೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಜನರಲ್ಲಿ ಭಯ ಹೊರಟು ಹೋಗಿದೆ. ಅಧಿಕಾರಿಗಳು ಹಣ ಕೊಟ್ಟು ವರ್ಗಾವಣೆ ಪಡೆದುಕೊಳ್ಳುತ್ತಿದ್ದಾರೆ. ಯಾರಿಗೂ ಕಾನುನು ಸುವ್ಯವಸ್ಥೆ ಕಾಪಾಡುವುದು ಬೇಕಿಲ್ಲ. ಎಲ್ಲರೂ ವ್ಯವಹಾರಕ್ಕೆ ಇಳಿದಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ. ಇನ್ನೊಂದು ಕಡೆ ಮೈಸೂರಿನ ಗ್ಯಾಂಗ್ ರೇಪ್ ಆರೋಪಿಗಳ ಸುಳಿವು ಸಿಕ್ಕಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮಿಳಾ ನಾಯ್ಡು ತಿಳಿಸಿದ್ದಾರೆ.