ವಿಂಡ್ ಮಿಲ್ ಹಾವಳಿಗೆ ಹೈರಾಣಾಗಿದ್ದ ಚಿತ್ರದುರ್ಗದ ಜನ: ಮಾಲೀಕರಿಗೆ ಶಾಕ್ ಕೊಟ್ಟ DRDO..!
* ನಿಯಮಗಳನ್ನು ಗಾಳಿಗೆ ತೂರಿ ಅಣಬೆಗಳಂತೆ ಹುಟ್ಟಿರುವ ವಿಂಡ್‌ಮಿಲ್
* ಪರಿಸರವಾದಿಗಳ ವಿರೋಧ, ಮನವಿಗಳಿಗೂ ಕ್ಯಾರೇ ಅನ್ನದ ಅಧಿಕಾರಿಗಳು
* ಐಐಎಸ್‌ಸಿ ಸುತ್ತ 20 ಕಿ.ಮೀ ವ್ಯಾಪ್ತಿಯಲ್ಲಿ ತೆರವುಗೊಳಿಸಲು ಸೂಚನೆ
ಚಿತ್ರದುರ್ಗ(ಜೂ.05): ಅದೊಂದು ಕಲ್ಲಿನಕೋಟೆಯನ್ನೊಳಗೊಂಡ ಜಿಲ್ಲೆ. ಆದ್ರೆ ಅಲ್ಲಿ ವಿಂಡ್ ಮಿಲ್‌ಗಳದ್ದೇ ಕಾರುಬಾರಾಗಿತ್ತು. ವನ್ಯಜೀವಿಗಳು ಹಾಗೂ ಸಾರ್ವಜನಿಕರಿಗೆ ಈ ಫ್ಯಾನ್‌ಗಳಿಂದ ತೀವ್ರ ಕಿರಿಕಿರಿಯಾದ್ರು ಸಹ ಡೋಂಟ್ ಕೇರ್ ಎಂದಿದ್ದ ವಿಂಡ್ ಮಿಲ್ ಮಾಲೀಕರಿಗೆ ಕೇಂದ್ರ ರಕ್ಷಣಾ ಇಲಾಖೆ ಭರ್ಜರಿ ಶಾಕ್ ನೀಡಿದೆ. ಅರೆ, ರಕ್ಷಣಾ ಇಲಾಖೆಗೂ, ವಿಂಡ್ ಮಿಲ್‌ಗೂ ಏನ್ ಸಂಬಂಧ ಅಂತೀರಾ!., ಹಾಗಾದ್ರೆ ನೋಡಿ ಈ ಸ್ಟೋರಿ.
ನೋಡಿ ಹೀಗೆ ಬೆಟ್ಟಗುಡ್ಡ, ವನ್ಯಜೀವಿಧಾಮ ಎನ್ನದೇ ಬೇಕಾಬಿಟ್ಟಿಯಾಗಿ ಹಾಕಿರುವ ವಿಂಡ್ ಮಿಲ್‌ಗಳು. ಗ್ರಾಮ ಪಂಚಾಯ್ತಿ ಹಾಗೂ ಡಿ.ಆರ್ ಡಿ.ಓ ಯಿಂದಲೂ ನಿರಾಪೇಕ್ಷಣಾ ಪತ್ರ ಪಡೆಯದೇ ತಲೆಯೆತ್ತಿರೋ ಫ್ಯಾನ್‌ಗಳು. ಈ ದೃಶ್ಯಗಳಿಗೆ ಸಾಕ್ಯ, ಕೋಟೆನಾಡು ಚಿತ್ರದುರ್ಗ. ಹೌದು, ಈ ಜಿಲ್ಲೆಯ ಸುತ್ತಲ್ಲೂ ಎಲ್ಲಾ ಬೆಟ್ಟಗುಡ್ಡಗಳಲ್ಲೂ ವಿಂಡ್ ಮಿಲ್ ಗಳು ರಾರಾಜಿಸ್ತಿವೆ.
ಬಾಗಲಕೋಟೆ: ವಾಯವ್ಯ ಸಾರಿಗೆಗೆ ಗುಜರಿ ಬಸ್ ಖರೀದಿಸಿದ್ರೆ ಕರವೇಯಿಂದ ಉಗ್ರ ಹೋರಾಟ
ರಾಜ್ಯದ ಉದ್ಯಮಿಗಳು, ರಾಜಕಾರಣಿಗಳು ಈ ವಿಂಡ್ ಮಿಲ್ ಗಳನ್ನು ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಖರೀದಿಸಿದ್ದಾರೆ. ಕೋಟ್ಯಾಂತರ ರೂಪಾಯಿ ಲಾಭ ಗಳಿಸುತ್ತಿದ್ದಾರೆ. ಆದರೆ ಲಾಭ ಗಳಿಸುವ ಭರಾಟೆಯಲ್ಲಿ ಕಾನೂನನ್ನು ಗಾಳಿಗೆ ತೂರಿದ್ದಾರೆ. ವನ್ಯ ಜೀವಿಧಾಮ ಹಾಗು ಐತಿಹಾಸಿಕ ಸ್ಮಾರಕಗಳನ್ನು ಸಹ ಪರಿಗಣಿಸದೇ ನಿಯಮ ಬಾಹಿರವಾಗಿ ಫ್ಯಾನ್ ಗಳನ್ನು ಅಳವಡಿಸಿದ್ದಾರೆ. ಈ ಬಗ್ಗೆ ಚಿತ್ರದುರ್ಗದ ಪರಿಸರವಾದಿಗಳು ಸರ್ಕಾರದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಆದ್ರೆ ಇದೀಗ ಚಳ್ಳಕೆರೆ ತಾಲ್ಲೂಕಿನ ಕುದಾಪುರ ಬಳಿಯ ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಏರೋನಾಟಿಕಲ್ ಟೆಸ್ಟ್ ರೇಂಜ್ ಏರೋಡ್ರಮ್ ಸುತ್ತ ಸುಮಾರು 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ತಲೆಯೆತ್ತಿರುವ ಎಲ್ಲಾ ವಿಂಡ್ ಮಿಲ್ ಗಳನ್ನು ತೆರವುಗೊಳಿಸುವಂತೆ ಭಾರತೀಯ ರಕ್ಷಣಾ ಇಲಾಖೆ ಆದೇಶಿಸಿದೆ. ಅಲ್ಲದೇ ನಿಯಮಬಾಹಿರವಾಗಿ ಜಿಲ್ಲೆಯಲ್ಲಿ ನಡೆಯುತ್ತಿರುವ ವಿಂಡ್ ಮಿಲ್ ಕಾಮಗಾರಿಯನ್ನು ತಡೆಯುವಂತೆ ಸೂಚಿಸಿದೆ.
ಇನ್ನು ಈ ನೋಟೀಸ್ ಈಗಾಗಲೇ ವಿಂಡ್ ಮಿಲ್ ಮಾಲೀಕರು, ಚಿತ್ರದುರ್ಗ ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೂ ರಕ್ಷಣಾ ಇಲಾಖೆ ತಲುಪಿಸಿದೆ. ಏರೋನಾಟಿಕ್ಸ್ ಟೆಸ್ಟ್ ಗೆ ಅಡ್ಡಿಯಾಗದಂತೆ ದ್ಯಾಮವ್ವನಹಳ್ಳಿ ಸುತ್ತಮುತ್ತಲ ವಿಂಡ್ ಮಿಲ್ ಗಳನ್ನ ತಕ್ಷಣವೇ ತೆರವುಗೊಳಿಸುವಂತೆ ತಿಳಿಸಲಾಗಿದೆ. ಹೀಗಾಗಿ ಪರಿಸರ ಪ್ರೇಮಿಗಳಲ್ಲಿ ಹರ್ಷೋದ್ಗಾರ ಮೂಡಿದೆ. ಕಾಡು ಹಾಗೂ ವನ್ಯಜೀವಿಗಳಿಗೆ ರಕ್ಷಣಾ ಇಲಾಖೆ ಕಾರ್ಯದಿಂದ ಅನುಕೂಲವಾಗಿದೆ ಸ್ಥಳೀಯರು.
ಒಟ್ಟಾರೆ ಜಿಲ್ಲೆಯಲ್ಲಿ ಕರ್ಕಶ ಶಬ್ದ ಮಾಡ್ತಾ ಜನರ ನೆಮ್ಮದಿ ಕೆಡಿಸಿದ್ದ ವಿಂಡ್ ಮಿಲ್ ಗಳಿಗೆ ಭಾರತೀಯ ರಕ್ಷಣಾ ಇಲಾಖೆ ಬ್ರೇಕ್ ಹಾಕಲು ಮುಂದಾಗಿದೆ. ಇದರಿಂದಾಗಿ ಚಿತ್ರದುರ್ಗದ ಜನರಲ್ಲಿ ಸಂತಸ ಮೂಡಿದ್ದೂ, ವಿಂಡ್ ಮಿಲ್ ಮಾಲಿಕರ ನಿದ್ರೆ ಗೆಡಿಸಿರೋದಂತು ಗ್ಯಾರಂಟಿ.