Asianet Suvarna News Asianet Suvarna News

IPL 2020: ಮುಂಬೈ ಇಂಡಿಯನ್ಸ್ ಎದುರು ಕೆಕೆಆರ್ ಎಡವಿದ್ದೆಲ್ಲಿ..?

ಯುಎಇನಲ್ಲಿ ಸತತ 6 ಸೋಲುಗಳನ್ನು ಕಂಡಿದ್ದ ಮುಂಬೈ ಇಂಡಿಯನ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿ 5 ವಿಕೆಟ್ ಕಳೆದುಕೊಂಡು 295 ರನ್ ಕಲೆ ಹಾಕಿತ್ತು. ರೋಹಿತ್ ಶರ್ಮಾ(80), ಸೂರ್ಯಕುಮಾರ್ ಯಾದವ್(47) ಉಪಯುಕ್ತ ಜತೆಯಾಟವಾಡಿ ತಂಡಕ್ಕೆ ನೆರವಾಗಿದ್ದರು.
 

ಐಪಿಎಲ್(ಸೆ.24): ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್‌ ತಂಡ ಯುಎಇನಲ್ಲಿ ಕೊನೆಗೂ ಗೆಲುವಿನ ಖಾತೆ ತೆರೆದಿದೆ. ಕೋಲ್ಕತ ನೈಟ್‌ ರೈಡರ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್ 49 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.

ಯುಎಇನಲ್ಲಿ ಸತತ 6 ಸೋಲುಗಳನ್ನು ಕಂಡಿದ್ದ ಮುಂಬೈ ಇಂಡಿಯನ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿ 5 ವಿಕೆಟ್ ಕಳೆದುಕೊಂಡು 195 ರನ್ ಕಲೆ ಹಾಕಿತ್ತು. ರೋಹಿತ್ ಶರ್ಮಾ(80), ಸೂರ್ಯಕುಮಾರ್ ಯಾದವ್(47) ಉಪಯುಕ್ತ ಜತೆಯಾಟವಾಡಿ ತಂಡಕ್ಕೆ ನೆರವಾಗಿದ್ದರು.

IPL 2020: ಪಂಜಾಬ್ ವಿರುದ್ಧದ ಪಂದ್ಯಕ್ಕೆ RCB ತಂಡದಲ್ಲಿ ಒಂದು ಬದಲಾವಣೆ..?

ಇನ್ನು ಬೃಹತ್ ಮೊತ್ತ ಬೆನ್ನತ್ತಿದ ಕೆಕೆಆರ್ ತಂಡಕ್ಕೆ ಮುಂಬೈ ಇಂಡಿಯನ್ಸ್ ವೇಗಿಗಳು ಹೊಡೆತದ ಮೇಲೆ ಹೊಡೆತ ನೀಡಿದರು. ದಿನೇಶ್ ಕಾರ್ತಿಕ್, ನಿತೀಶ್ ರಾಣಾ ಕೆಲಕಾಲ ಪ್ರತಿರೋಧ ತೋರಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಕೆಕೆಆರ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಮುಗ್ಗರಿಸಿದ್ದು ಹೇಗೆ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

Video Top Stories