Asianet Suvarna News Asianet Suvarna News

ಜಗತ್ತಿನ ಸಮಸ್ಯೆಗಳಿಗೆಲ್ಲಾ ಮೋದಿ ಬಳಿ ಇದೆಯೇ ಪರಿಹಾರ ಮಾರ್ಗ?

ಉನ್ನತ ಆಯೋಗವು ಪೋಪ್ ಫ್ರಾನ್ಸಿಸ್, ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಮತ್ತು ಪಿಎಂ ನರೇಂದ್ರ ಮೋದಿ ಅವರನ್ನು ಒಳಗೊಂಡಿರಬೇಕು ಎಂದು ಮೆಕ್ಸಿಕನ್ ಅಧ್ಯಕ್ಷರು ಪ್ರಸ್ತಾಪ ಮಾಡಿದ್ದಾರೆ.
 

ಬೆಂಗಳೂರು (ಆ.12): ಪೋಪ್ ಫ್ರಾನ್ಸಿಸ್+ಯುಎನ್ ಸೆಕ್ರೆಟರಿ ಜನರಲ್+ ಮೋದಿ. ಇವರೆಲ್ಲರೂ ಸೇರಿದರೆ ವಿಶ್ವಶಾಂತಿ.. ಏನಿದು ಸೂತ್ರ..? ಇದರ ಹಿಂದಿರೋ ಕತೆ ಏನು..? ವಿಶ್ವಕದನಕ್ಕೆ ಅಂತ್ಯ ಹಾಡಲು.. ಮೋದಿ ಒಬ್ಬರಿಗೇ ಸಾಧ್ಯ ಅನ್ನೋ  ಗಟ್ಟಿ ನಂಬಿಕೆ ಬಂದಿದ್ದು ಯಾರಲ್ಲಿ.? ಯಾಕಾಗಿ..?ಜಗತ್ತಿನ ಸಮಸ್ಯೆಗಳಿಗೆಲ್ಲಾ ಮೋದಿ ಬಳಿ ಇದೆಯಾ  ಪರಿಹಾರ ಮಾರ್ಗ..?

ಜಗತ್ತಿನಲ್ಲಿ ಶಾಂತಿ ಕದಡುತ್ತಿರುವ ಸಂಗತಿಗಳನ್ನು ನಿಯಂತ್ರಿಸುವ ಸಲುವಾಗಿ ಯುದ್ಧಗಳೇ ಇಲ್ಲದೆ ಐದು ವರ್ಷಗಳನ್ನು ಕಳೆಯುವ ಪ್ರಸ್ತಾಪವನ್ನು ವಿಶ್ವಸಂಸ್ಥೆಯ ಮುಂದಿಡಲು ಮೆಕ್ಸಿಕೋ ಅಧ್ಯಕ್ಷ ನಿರ್ಧರಿಸಿದ್ದಾರೆ. ಇದರ ನಡುವೆ ವಿಶ್ವಶಾಂತಿಗಾಗಿ ಉನ್ನತ ಆಯೋಗವನ್ನು ರಚಿಸುವ ಪ್ರಸ್ತಾಪವನ್ನೂ ಮಾಡಿದ್ದು, ಇದರಲ್ಲಿ ಪ್ರಧಾನಿ ಮೋದಿ, ವಿಶ್ವಸಂಸ್ಥೆಯ ಮಹಾನಿರ್ದೇಶಕ ಹಾಗೂ ಪೋಪ್‌ ಫ್ರಾನ್ಸಿಸ್‌ ಇರಬೇಕು ಎಂದು ಹೇಳಿದ್ದಾರೆ.

ವಿಶ್ವಸಂಸ್ಥೆಯ ಸಂಭಾವ್ಯ ಜಾಗತಿಕ ಆಯೋಗಕ್ಕೆ ಪ್ರಧಾನಿ ಮೋದಿ ಹೆಸರು ಪ್ರಸ್ತಾಪಿಸಿದ ಮೆಕ್ಸಿಕೋ ಅಧ್ಯಕ್ಷ!

ವಿಶ್ವಸಂಸ್ಥೆಯಲ್ಲಿ, ಆ ಮೂವರು ಒಂದಾದರೆ, ಯುದ್ಧ ಕಾರ್ಮೋಡ ತಾನೇ ತಾನಾಗಿ ಸರಿಯುತ್ತೆ ಅಂತ ಹೇಳಿದ್ದಾರೆ.. ಜಗತ್ತನ್ನೇ ಸುಧಾರಿಸಬಲ್ಲವರ ಪಟ್ಟಿಯಲ್ಲಿ, ವಿಶ್ವಶಾಂತಿ ಮೂಡಿಸುವ ಸಾಮರ್ಥ್ಯವಿರೋ ನಾಯಕರ ಲಿಸ್ಟ್‌ನಲ್ಲಿ  ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ  ಅವರಿಂದಲೇ ವಿಶ್ವಶಾಂತಿ ಸಾಧ್ಯ ಅಂತ, ಮೆಕ್ಸಿಕೋ ಅಧ್ಯಕ್ಷರು ಹೇಳಿಕೆ ಕೊಡ್ತಾರೆ.. ಹಾಗಾದ್ರೆ, ಅವರು ಈ ನಿಲುವಿಗೆ ಬರೋಕೆ ಅದೇನಿತ್ತು ಕಾರಣ..? ಅದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.

Video Top Stories