Asianet Suvarna News Asianet Suvarna News

ಕೊರ್ಟ್‌ ಮೆಟ್ಟಿಲೇರಿದ ವಿಶ್ವವಿಖ್ಯಾತ ತಾಜ್‌ಮಹಲ್ ವಿವಾದ!

ವಿಶ್ವ ವಿಖ್ಯಾತ ತಾಜ್ ಮಹಲ್ ಆಗ್ರಾದಲ್ಲಿದ್ದು, ಜಗತ್ತಿನ 7 ಅದ್ಭುತಗಳಲ್ಲಿ ತಾಜ್​​ ಮಹಲ್​​ ಒಂದಾಗಿದೆ.  ವಿಶ್ವವಿಖ್ಯಾತ ತಾಜ್‌ಮಹಲ್ ವಿವಾದ ಕೋರ್ಟ್ ಮೆಟ್ಟಿಲೇರಿದೆ.

ಲಕ್ನೋ, (ಮೇ.12): ವಿಶ್ವ ವಿಖ್ಯಾತ ತಾಜ್ ಮಹಲ್ ಆಗ್ರಾದಲ್ಲಿದ್ದು, ಜಗತ್ತಿನ 7 ಅದ್ಭುತಗಳಲ್ಲಿ ತಾಜ್​​ ಮಹಲ್​​ ಒಂದಾಗಿದೆ. ಇದೀಗ ತಾಜ್​ ಮಹಲ್​​ ತೇಜೋ ಮಹಲ್​ ಆಗಿತ್ತು ಅನ್ನೋ ವಿವಾದವಿದೆ. 

ತಾಜ್‌ ಮಹಲ್ ವಿವಾದಕ್ಕೆ ಸ್ಫೋಟಕ ತಿರುವು: ನಮ್ಮ ಜಮೀನು, ದಾಖಲೆ ಕೊಡಲು ಸಿದ್ಧ ಎಂದ ಬಿಜೆಪಿ ಸಂಸದೆ!

ರಹಸ್ಯ ಕೊಠಡಿಗಳ ಬೀಗ ತೆಗೆಸುವಂತೆ ಅಯೋಧ್ಯೆ ಬಿಜೆಪಿ ಮುಖಂಡ ರಜನೀಶ್ ಅಲಹಾಬಾದ್ ಹೈಕೋರ್ಟ್​ನ ಲಕ್ನೊ ಪೀಠಕ್ಕೆ ಅರ್ಜಿ ಸಲ್ಲಿಸಲಾಗಿದೆ. ಈ ರಹಸ್ಯ ಕೋಣೆಗಳಲ್ಲಿ ಹಿಂದೂ ದೇವರು, ಧರ್ಮಗ್ರಂಥ ಇರುವ ಶಂಕೆ ವ್ಯಕ್ತವಾಗಿದೆ. ಇದೇ ಕಾರಣಕ್ಕಾಗಿ 22 ಕೋಣೆಗಳನ್ನು ಮುಚ್ಚಲಾಗಿದೆ ಎಂಬ ಆರೋಪ ಮಾಡಲಾಗಿದೆ.