Asianet Suvarna News Asianet Suvarna News

Viral video: ಶೋಕಿಗಾಗಿ ಬೈಕ್ ಹಿಂದೆ-ಮುಂದೆ ಕುಳಿತ ಯುವತಿಯರು ಮುಂದಾಗಿದ್ದು ಘನಘೋರ!

* ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ಜಿಗಿದ ಮಹಿಳೆಯರು
* ಸ್ಕೂಟರ್ ನಲ್ಲಿ ಹೆಡೆಯೆತ್ತಿ ನಿಂತ ನಾಗರಹಾವು
* ಬೈಕ್ ನಲ್ಲಿ ಹಿಂದೆ-ಮುಂದೆ ಕುಳಿತು ಶೋಕಿ ಮಾಡಿದ ಮಹಿಳೆಯರಿಗೆ ಆಗಿದ್ದೇನು?

First Published Apr 28, 2022, 8:36 PM IST | Last Updated Apr 28, 2022, 8:36 PM IST

ಬೆಂಗಳೂರು (ಏ.28): ಬೈಕ್ (Bike Ride) ಸವಾರಿ ಮಾಡೋವಾಗ ವೀಲಿಂಗ್ ಮಾಡೋದು, ಇನಿಲ್ಲದ ಸಾಹಸ ಮಾಡೋದು ಒಂಥರಾ ಶೋಕಿ. ಅದರಂತೆ, ಇಲ್ಲೊಬ್ಬ ವ್ಯಕ್ತಿ ತನ್ನ ಬೈಕ್ ನ ಹಿಂದೆ ಹಾಗೂ ಮುಂದೆ ಹುಡುಗಿಯರನ್ನು ಕೂರಿಸಿಕೊಂಡು ಶೋಕಿ ಮಾಡೋಕೆ ಮುಂದಾಗಿದ್ದಾನೆ. ಈ ವೇಳೆ ಅಲ್ಲಿ ನಡೆದಿದ್ದು ಮಾತ್ರ ಘನಘೋರ ಅಪಘಾತ.

ಬೈಕ್ ಸ್ಟಂಟ್ (Bike Stunt) ಅನ್ನೋದು ಇತ್ತೀಚೆಗೆ ಎಲ್ಲಾ ಕಡೆ ಕ್ರೇಜ್. ಆದರೆ, ಇದರಿಂದಾಗಿ ಪ್ರಾಣಕ್ಕೆ ಕುತ್ತುತಂದುಕೊಂಡ ಸಾಕಷ್ಟು ಪ್ರಕರಣಗಳು ನಡೆದಿವೆ. ಅಂಥದ್ದೇ ಮತ್ತೊಂದು ಪ್ರಕರಣ ಇದು. ಬಹಳ ಜನ ಸೇರಿದ್ದ ರಸ್ತೆಯ ನಡುವೆ, ಶೋ ಆಫ್ ಮಾಡಲು ಯುವಕ ಮುಂದಾಗಿದ್ದ.

Suvarna Super Special: ಪುಟ್ಟ ಪೋರಿಯ ಜಾದು: 12 ವರ್ಷಕ್ಕೆ 70 ವಿಶ್ವ ದಾಖಲೆ

ಅದರಂತೆ ಬೈಕ್ ನ ಪೆಟ್ರೋಲ್ ಟ್ಯಾಕ್ ನ ಮೇಲೆ ಒಬ್ಬಳು ಯುವತಿ ಹಾಗೂ ಹಿಂದೆ ಇನ್ನೊಂದು ಯುವತಿಯನ್ನು ಕೂರಿಸಿಕೊಂಡು ಬೈಕ್ ಚಾಲನೆ ಮಾಡಿದ್ದ. ಬೈಕ್ ಸ್ಟಾರ್ಟ್ ಆದ ಬೆನ್ನಲ್ಲಿಯೇ ನಿಯಂತ್ರಣ ಕಳೆದುಕೊಂಡ ಯುವಕ ಎದುರಿದ್ದ ಹಲವು ಬೈಕ್ ಗಳಿಗೆ ಹೋಗಿ ಗುದ್ದಿದ್ದಾನೆ.

Video Top Stories