ಅಗ್ನಿವೀರರು ಅಂದ್ರೆ ಯಾರು ? ಏನೆಲ್ಲಾ ಸೌಲಭ್ಯ ಸಿಗುತ್ತವೆ ? ರಾಹುಲ್ ಗಾಂಧಿ ಆರೋಪಗಳಿಗೆ..ಸೈನ್ಯವೇ ಕೊಟ್ಟಿತು ಉತ್ತರ..!
ಮೊದಲಿಗೆ ನಮಗೆ ಹಣ ಬಂದಿಲ್ಲ ಎಂದು ಹುತಾತ್ಮ ಯೋಧನ ತಂದೆ..!
ರಾಹುಲ್ ಗಾಂಧಿ, ರಾಜನಾಥ್ ಸಿಂಗ್ ಮಧ್ಯೆ ‘ಅಗ್ನಿವೀರ’ ಸಂಘರ್ಷ..!
ಏನಿದು ಅಗ್ನಿಪಥ್ ಯೋಜನೆ? ಅಗ್ನಿವೀರರಿಗೆ ಸಿಗುವ ಸೌಲಭ್ಯಗಳೇನು?
ದೇಶ ಕಾಯುವ ಕಾಯಕದ ವೇಳೆ ಮಡಿದ ಅಗ್ನಿವೀರರಿಗೆ(Agniveer) ಒಂದು ಕೋಟಿ ರೂ. ಪರಿಹಾರ(Compensation) ನೀಡಲಾಗಿದೆ ಎಂಬ ರಕ್ಷಣಾ ಸಚಿವ ರಾಜನಾಥ್ ಸಿಂಗ್(Rajnath Singh) ಅವರ ಹೇಳಿಕೆ ಸುಳ್ಳು ಎಂದೆಲ್ಲಾ ಆರೋಪ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಆರೋಪಕ್ಕೆ ಸೇನೆ ತಿರುಗೇಟು ನೀಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದೆ. ಭಾರತೀಯ ಸೇನೆಯ(Indian Army) ಎಡಿಜಿಪಿಗೆ ಸೇರಿದ ಅಧಿಕೃತ ಟ್ವಿಟ್ಟರ್ ಖಾತೆಯಿಂದ ರಾಹುಲ್ ಆರೋಪಕ್ಕೆ ಸಂಬಂಧಿಸಿದಂತೆ ಪ್ರತ್ಯುತ್ತರ ನೀಡಲಾಗಿದೆ. ಸೇನಾ ಕಾರ್ಯಾಚರಣೆ ವೇಳೆ ಮಡಿದ ಅಗ್ನಿವೀರ್ ಅಜಯ್ ಕುಮಾರ್ ಎಂಬವರ ಕುಟುಂಬಕ್ಕೆ 98.39 ಲಕ್ಷ ರೂಪಾಯಿಯನ್ನು ಪಾವತಿ ಮಾಡಲಾಗಿದೆ. ಅಗ್ನಿವೀರ್ ಅಜಯ್ ಕುಮಾರ್ ಅವರ ಶ್ರೇಷ್ಠ ತ್ಯಾಗಕ್ಕೆ ಭಾರತೀಯ ಸೇನೆ ಗೌರವ ಸಲ್ಲಿಸುತ್ತದೆ. ಅವರ ಅಂತಿಮ ಕಾರ್ಯಗಳನ್ನು ಸಕಲ ಸೇನಾ ಗೌರವಗಳೊಂದಿಗೆ ಮಾಡಲಾಯ್ತು. ಅವರ ಕುಟುಂಬಕ್ಕೆ 98.39 ಲಕ್ಷವನ್ನು ಪರಿಹಾರವಾಗಿ ನೀಡಲಾಗಿದೆ. ಅಗ್ನಿವೀರ್ ಯೋಜನೆಯ ನಿಯಮಗಳ ಪ್ರಕಾರ, 67 ಲಕ್ಷದ ಹೆಚ್ಚಿನ ( Ex - Gratia and other benefits)ಹಣ ಹಾಗೂ ಸೌಲಭ್ಯಗಳನ್ನು ಕೆಲ ಪೊಲೀಸ್ ಪರಿಶೀಲನೆಯ ನಂತರ ಶೀಘ್ರದಲ್ಲೇ ಸೆಟಲ್‌ಮೆಂಟ್ ಮಾಡಲಾಗುತ್ತದೆ. ಇದೆಲ್ಲ ಸೇರಿ ಒಟ್ಟು ಅಂದಾಜು 1.65 ಕೋಟಿ ಹಣ ಅಗ್ನಿವೀರ್ ಅಜಯ್ ಕುಮಾರ್ ಸಂಬಂಧಿಗಳಿಗೆ ಸೇರುತ್ತದೆ.
ಇದನ್ನೂ ವೀಕ್ಷಿಸಿ: ಟ್ರೆಂಡಿಂಗ್ ಆಯ್ತು ದರ್ಶನ್ ಕೈದಿ ನಂಬರ್ 6106..! ಚಡ್ಡಿ ಹಾಕ್ಕೊಂಡು ಪೋಸ್ ಕೊಟ್ಟ ಅಭಿಮಾನಿ..!