Asianet Suvarna News Asianet Suvarna News

Makara Sankranti ದೇಗುಲದಲ್ಲಿ ಕೌತುಕ, ಶಿವ-ಸೂರ್ಯ ಮುಖಾಮುಖಿಯ ಅಪರೂಪದ ಕ್ಷಣ ಕಣ್ತುಂಬಿಕೊಳ್ಳಿ

ಮಕರ ಸಂಕ್ರಮಣದ ದಿನವಾದ ಇಂದು(ಶುಕ್ರವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಪ್ರಸಿದ್ಧ ದೇವಾಲಯವಾದ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ (Gavi Gangadhareshwara Temple) ದೇವರನ್ನು ಸೂರ್ಯರಶ್ಮಿ ಸ್ಪರ್ಶಿಸಿದೆ. 

ಬೆಂಗಳೂರು, (ಜ.14): ಮಕರ ಸಂಕ್ರಮಣದ ದಿನವಾದ ಇಂದು(ಶುಕ್ರವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಪ್ರಸಿದ್ಧ ದೇವಾಲಯವಾದ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ (Gavi Gangadhareshwara Temple) ದೇವರನ್ನು ಸೂರ್ಯರಶ್ಮಿ ಸ್ಪರ್ಶಿಸಿದೆ. ) ಸಂಜೆ 5.17 ರಿಂದ 5.37ರ ನಡುವೆ ಸೂರ್ಯನ ಕಿರಣಗಳು ಗವಿ ಗಂಗಾಧರ ಸ್ವಾಮಿಯನ್ನು ಸ್ಪರ್ಶಿಸಿದೆ. 

Makara Sankranti: ಸಂಕ್ರಾಂತಿಯಲ್ಲಿ ಎಳ್ಳು-ಬೆಲ್ಲ ಹಂಚೋದ್ಯಾಕೆ.? ಹಬ್ಬದ ಮಹತ್ವವೇನು.?

ಪ್ರತಿ ವರ್ಷ ಸಂಕ್ರಾಂತಿಯಂದು (Makar Sankranti) ನಡೆಯುವ ಪ್ರಕೃತಿಯ ಈ ವಿಸ್ಮಯದ ವೀಕ್ಷಣೆಗೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅವಕಾಶವಿರಲಿಲ್ಲ. ಮೊದಲು ನಂದಿಯನ್ನು ಹಾದು ಹೋದ ಸೂರ್ಯನ ಕಿರಣಗಳು ನಂತರ ಪಾಣಿ ಪೀಠದ ಮೂಲಕ ಶಿವಲಿಂಗದ ಮೇಲೆ ಪ್ರಕಾಶಮಾನವಾಗಿ ಬೆಳಗಿತು. 

Video Top Stories