ಸಂಧ್ಯಾಕಾಲದಲ್ಲಿ ಈ ಕೆಲಸಗಳನ್ನು ಮಾಡಲೇಬಾರದು ಎನ್ನುತ್ತದೆ ಭಾಗವತ; ಯಾಕಾಗಿ ಗೊತ್ತಾ?

ಕಶ್ಯಪ ಮಹರ್ಷಿಗಳ ಮಗನಾದ ಹಿರಣ್ಯಾಕ್ಷ ಯಾಕೆ ಭೂಮಿಯನ್ನು ಮುಳುಗಿಸಿದ ಅನ್ನುವುದಕ್ಕೆ ಒಂದು ಕಥೆಯಿದೆ. ಒಂದು ದಿನ ಕಶ್ಯಪ ಮಹರ್ಷಿಗಳು ಸಂಧ್ಯಾವಂದನೆ ಮಾಡುತ್ತಿರುತ್ತಾರೆ. ಆ ಸಮಯದಲ್ಲಿ ಅವರ ಪತ್ನಿ ದ್ವಿತಿ ದೇವಿ ಬಂದು ತನಗೆ ಪುತ್ರ ಭಿಕ್ಷೆ ಬೇಕು ಎಂದು ಕೇಳುತ್ತಾರೆ. 

First Published Dec 3, 2020, 5:55 PM IST | Last Updated Dec 3, 2020, 5:55 PM IST

ಕಶ್ಯಪ ಮಹರ್ಷಿಗಳ ಮಗನಾದ ಹಿರಣ್ಯಾಕ್ಷ ಯಾಕೆ ಭೂಮಿಯನ್ನು ಮುಳುಗಿಸಿದ ಅನ್ನುವುದಕ್ಕೆ ಒಂದು ಕಥೆಯಿದೆ. ಒಂದು ದಿನ ಕಶ್ಯಪ ಮಹರ್ಷಿಗಳು ಸಂಧ್ಯಾವಂದನೆ ಮಾಡುತ್ತಿರುತ್ತಾರೆ. ಆ ಸಮಯದಲ್ಲಿ ಅವರ ಪತ್ನಿ ದ್ವಿತಿ ದೇವಿ ಬಂದು ತನಗೆ ಪುತ್ರ ಭಿಕ್ಷೆ ಬೇಕು ಎಂದು ಕೇಳುತ್ತಾರೆ.

'ಇದು ಪೂಜಾ ಸಮಯ. ಸಂಧ್ಯಾಕಾಲ. ಈ ಸಮಯದಲ್ಲಿ ಗಂಡ- ಹೆಂಡತಿ ಸೇರುವುದು ಪ್ರಶಸ್ತವಲ್ಲ' ಎಂದು ಹೇಳುತ್ತಾರೆ. ಅದರೂ ಪತ್ನಿ ಬಿಡುವುದಿಲ್ಲ. ವಿಧಿಯಿಲ್ಲದೇ ಕಶ್ಯಪ ಮಹರ್ಷಿಗಳು ಆಕೆಯನ್ನು ಸ್ಪರ್ಶಿಸುತ್ತಾರೆ. ಆಕೆ ಗರ್ಭವತಿಯಾಗುತ್ತಾಳೆ. ಮೂರು ಲೋಕವನ್ನೂ ಬೀಳಿಸುವಂತಹ ಮಗು ಇದಾಗುತ್ತದೆ ಎಂದು ಕಶ್ಯಪರು ಹೇಳುತ್ತಾರೆ. ಆಗ ದ್ವಿತಿ ದೇವಿಗೆ ತಪ್ಪಿನ ಅರಿವಾಗುತ್ತದೆ. ಆಗ ಆಕೆ ಹರಿಯನ್ನು ಪ್ರಾರ್ಥಿಸುತ್ತಾಳೆ. ಮುಂದೇನಾಗುತ್ತದೆ? ಕೇಳೋಣ ಬನ್ನಿ..!