Asianet Suvarna News Asianet Suvarna News

Chitradurga: ನಾರಾಯಣಪುರ ರಂಗನಾಥಸ್ವಾಮಿ ದೇವಾಲಯಕ್ಕೆ ಧರ್ಮಸ್ಥಳ ಟ್ರಸ್ಟ್ ನೆರವು

ಚಿತ್ರದುರ್ಗ(Chitradurga) ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಬೆಳಗೆರೆ-ನಾರಾಯಣಪುರದಲ್ಲಿ ಸುಮಾರು 500 ವರ್ಷಗಳ ಹಿಂದೆ ಹೊಯ್ಸಳ(Hoysala)ರ ಕಾಲದಲ್ಲಿ ನಿರ್ಮಿಸಿದ್ದ ದೇವಾಲಯದ ಜೀರ್ಣೋದ್ಧಾರವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ನೆರವೇರಿಸಿಕೊಟ್ಟಿದೆ. 

ಚಿತ್ರದುರ್ಗ(Chitradurga) ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಬೆಳಗೆರೆ-ನಾರಾಯಣಪುರದಲ್ಲಿ ಸುಮಾರು 500 ವರ್ಷಗಳ ಹಿಂದೆ ಹೊಯ್ಸಳ(Hoysala)ರ ಕಾಲದಲ್ಲಿ ಶ್ರೀ ರಂಗನಾಥಸ್ವಾಮಿ ಅರ್ಥಾತ್ ಮಿನಿ ತಿರುಪತಿ ತಿಮ್ಮಪ್ಪನ ದೇವಸ್ಥಾನ ನಿರ್ಮಾಣವಾಗಿತ್ತು. ಆದರೆ ಅಲ್ಲಿ ಸುಮಾರು ವರ್ಷಗಳಿಂದ ಪೂಜೆ ಪುರಸ್ಕಾರಗಳು ನಿಂತು ಹೋಗಿದ್ದವು. ಇದೀಗ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ದೇವಸ್ಥಾನದ ಜೀರ್ಣೋದ್ಧಾರವಾಗುತ್ತಿದ್ದು, ಇದಕ್ಕೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. 

ನಾರಾಯಣಪುರ(Narayanapura)ದಲ್ಲಿದ್ದ ರಂಗನಾಥಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಮಾತ್ರ ಕಳೆದ ನೂರಾರು ವರ್ಷಗಳ ಹಿಂದೆ ರಾಜ ಮಹಾರಾಜರು ಮಾಡಿದ್ದೇ ಕೊನೆ. ಮತ್ತೆ ಅಷ್ಟಾಗಿ ಈ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಪೂಜೆ ಪುರಸ್ಕಾರಗಳು ನಡೆಯುತ್ತಿರಲಿಲ್ಲ. ಆದ್ರೆ ಬೆಳಗೆರೆ-ನಾರಾಯಣಪುರ ಗ್ರಾಮದ ಜನರು ಕೂಡಲೇ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ತಮ್ಮ ಗ್ರಾಮದಲ್ಲಿರುವ ದೇವಸ್ಥಾನವನ್ನು ಅಭಿವೃದ್ಧಿ ಪಡಿಸಿ, ನೀವೆ ಜೀರ್ಣೋದ್ಧಾರ ಮಾಡಿ ಕೊಡಬೇಕು ಎಂದು ಮನವಿ ಮಾಡಿಕೊಂಡರು. 

ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್ ನಿಭಾಯಿಸೋದ್ರಲ್ಲಿ ಈ ರಾಶಿಗಳು ನಿಸ್ಸೀಮರು!

ನಂತರದಲ್ಲಿ ಧರ್ಮಸ್ಥಳ(Dharmastala)ದ ಧರ್ಮಾಧಿಕಾರಿಯಾದ ವಿರೇಂದ್ರ ಹೆಗ್ಗಡೆಯವರು ತಮ್ಮ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಮೂಲಕ ಹಾಗೂ ಸರ್ಕಾರದ ಸಹಯೋಗದೊಂದಿಗೆ ಸುಮಾರು 20 ಲಕ್ಷಕ್ಕೂ ಅಧಿಕ ಹಣವನ್ನು ಶ್ರೀ ರಂಗನಾಥಸ್ವಾಮಿಯ ದೇಗುಲದ ಜೀರ್ಣೋದ್ಧಾರಕ್ಕೆ ಅನುವು ಮಾಡಿಕೊಟ್ಟರು.  ಅದರಂತೆ ಇಂದು ವಿರೇಂದ್ರ ಹೆಗ್ಗಡೆ ಅವರ ಸಹೋದರರಾದ ಶ್ರೀ ಸುರೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಉದ್ಘಾಟನೆ ನೆರವೇರಿತು. ಈ ದೇವರ ವಿಶೇಷತೆ ಎಂದ್ರೆ, ಗೊಲ್ಲ ಸಮುದಾಯದ ಜನರು ಈ ದೇವಸ್ಥಾನದ ಪೂರ್ವಿಕ ಅರ್ಚಕರು.‌ ಸಂತಾನ, ಕೆಲಸ, ಅರೋಗ್ಯ ವಿಚಾರ ಹೀಗೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ. 

ಬೆಳಗೆರೆ-ನಾರಾಯಣಪುರಕ್ಕೆ ಇಂದು ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ(Veerendra heggade) ಅವರ ಸಹೋದರ ಸುರೇಂದ್ರ ಕುಮಾರ್ ಆಗಮಿಸಿ ಸ್ವಾಮಿಯ ದೇವಾಲಯದ ಉದ್ಘಾಟನೆ ನೆರವೇರಿಸಿದರು.  ನಂತರ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಮಾತನಾಡಿದ ಅವರು, ಈ ದೇವಾಲಯಕ್ಕೆ ಸುಮಾರು ಸಾವಿರಾರು ವರ್ಷಗಳ ಪುರಾತನವಾದ ಇತಿಹಾಸವಿದೆ. ನಮ್ಮ ಧರ್ಮೋತ್ಥಾನ‌ ಟ್ರಸ್ಟ್ ನ ಮೂಲ ಉದ್ದೇಶ 15ನೇ ಶತಮಾನದಲ್ಲಿ ದೇವಸ್ಥಾನಗಳು ಯಾವ ರೀತಿ ಇದ್ದವೋ ಅದೇ ರೀತಿ ಕಟ್ಟಿಸುವುದು ಎಂದರು. 

Vastu Tips: ಒಡೆದ ಗಾಜು ಅಪಾಯದ ಮುನ್ಸೂಚನೆ, ಹೀಗೆ ಮಾಡಿ..

ಸದ್ಯ ರಾಜ್ಯದಲ್ಲಿ ‌ಪೂಜ್ಯರ ಮಾರ್ಗದರ್ಶನದಲ್ಲಿ 280ಕ್ಕೂ ಅಧಿಕ‌ ದೇವಸ್ಥಾನಗಳನ್ನು ಕರ್ನಾಟಕದಲ್ಲಿ ಪುನರ್ ಜೀರ್ಣೋದ್ಧಾರ ಮಾಡಲಾಗಿದೆ.  ಬೆಳಗೆರೆಯ ಶ್ರೀ‌ರಂಗನಾಥಸ್ವಾಮಿಯ ಕಳಸಾರೋಹಣ ಹಾಗೂ ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ತುಂಬಾ ಅಚ್ಚುಕಟ್ಟಾಗಿ ನಡೆಯಿತು. ಅಲ್ಲದೇ ಭಕ್ತರು ರಾಜ್ಯದ ನಾನಾ ಭಾಗಗಳಿಂದ ಆಗಮಿಸಿ ಸ್ವಾಮಿಯ ದರ್ಶನ ಪಡೆದು ಪುನೀತರಾದರು.

Video Top Stories