ಸಂಗೀತದ ಮೇರು ಶಿಖರ ಎಸ್‌ಪಿಬಿಯವರ ಬದುಕು, ಸಂಗೀತ, ನಟನೆ..
ಗಾನ ಗಗನದ ಧ್ರುವತಾರೆ ಕಣ್ಮರೆಯಾಗಿದೆ. ಒಂದು ಯುಗಾಂತ್ಯವೇ ಘಟಿಸಿದೆ. ಗಾನಗಂಧರ್ವ ಎಸ್‌ಪಿಬಿ ತಮ್ಮ ಯಾನವನ್ನು ಮುಗಿಸಿ ಹೊರಟಿದ್ದಾರೆ. ಓದಿದ್ದು ಎಂಜಿನೀಯರಿಂಗ್, ಸಾಧನೆ ಮಾಡಿದ್ದು ಸಂಗೀತ ಕ್ಷೇತ್ರದಲ್ಲಿ. ಕೊಟ್ಟಿದ್ದು 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು.
ಬೆಂಗಳೂರು (ಸೆ. 26): ಗಾನ ಗಗನದ ಧ್ರುವತಾರೆ ಕಣ್ಮರೆಯಾಗಿದೆ. ಒಂದು ಯುಗಾಂತ್ಯವೇ ಘಟಿಸಿದೆ. ಗಾನಗಂಧರ್ವ ಎಸ್‌ಪಿಬಿ ತಮ್ಮ ಯಾನವನ್ನು ಮುಗಿಸಿ ಹೊರಟಿದ್ದಾರೆ. ಓದಿದ್ದು ಎಂಜಿನೀಯರಿಂಗ್, ಸಾಧನೆ ಮಾಡಿದ್ದು ಸಂಗೀತ ಕ್ಷೇತ್ರದಲ್ಲಿ.
ಎಸ್‌ಪಿಬಿ ಎಂಬ ಸ್ವರ ಮಾಂತ್ರಿಕನ 51 ದಿನಗಳ ಹೋರಾಟ ಹೀಗಿತ್ತು
ಕೊಟ್ಟಿದ್ದು 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು. ಬರೀ ಹಾಡುಗಳಷ್ಟೇ ಅಲ್ಲ, ಸಂಗೀತ ನಿರ್ದೇಶನ, ಹಾಗೂ ನಟನೆಯಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ತೆಲುಗಿನ 'ಶಂಕರಾಭರಣಂ' ಚಿತ್ರ ಅಂತರಾಷ್ಟ್ರೀಯ ಮಾನ್ಯತೆ ತಂದು ಕೊಟ್ಟಿತು. ಇದೇ ಚಿತ್ರದ ಗಾಯನಕ್ಕೆ ಅವರಿಗೆ ಮೊದಲ ರಾಷ್ಟ್ರ ಪ್ರಶಸ್ತಿಯೂ ಲಭಿಸಿದೆ. ಎಸ್‌ಪಿಬಿಯವರ ಬದುಕು, ಸಂಗೀತ, ನಟನೆ ಎಲ್ಲದರ ಬಗ್ಗೆ ಒಂದು ವರದಿ ನೋಡೋಣ ಬನ್ನಿ..!