Asianet Suvarna News Asianet Suvarna News

ಬೆಂಗಳೂರು: ಯುವತಿಗೆ ಮೆಸೇಜ್, ಪ್ರಿಯಕರನಿಂದ ಯುವಕನ ಕೊಲೆಗೆ ಸ್ಕೆಚ್

Oct 5, 2021, 10:44 AM IST
  • facebook-logo
  • twitter-logo
  • whatsapp-logo

ಬೆಂಗಳೂರು (ಸೆ. 05): ಇನ್ಸ್ಟಾಗ್ರಾಂನಲ್ಲಿ ಯುವತಿಗೆ ಮೆಸೆಜ್ ಮಾಡಿದ್ದಕ್ಕೆ, ಆ ಯುವಕನ ಕೊಲೆಗೆ ಸ್ಕೆಚ್ ಹಾಕಲಾಗಿದೆ. ಯುವತಿಯ ಪ್ರಿಯಕರ ಪ್ರಜ್ವಲ್, ಮೆಸೆಜ್ ಮಾಡಿದ ಯುವಕ ನವೀನ್‌ಗೆ ವಾರ್ನ್ ಮಾಡಿದ್ದಾನೆ. ವಾರ್ನ್ ಬಳಿಕ ಟ್ರೋಲ್ ಪೇಜ್‌ನಲ್ಲಿ ಯುವತಿಯನ್ನು ಟ್ರೋಲ್ ಮಾಡಲಾಗಿದೆ.

ಒಂದೇ ಕುಟುಂಬದ ಐವರ ಆತ್ಮಹತ್ಯೆ: 10 ಲಕ್ಷ ಆಫರ್, ಅಪ್ಪನ ಕೊಲೆಗೆ ಮಗನಿಂದಲೇ ಸ್ಕೆಚ್..?

ನವೀನ್ ಟ್ರೋಲ್ ಮಾಡಿಸಿದ್ದಾನೆಂದು ಪ್ರಿಯಕರ ಪ್ರಜ್ವಲ್, ನವೀನ್ ಕೊಲೆಗೆ ಸ್ಕೆಚ್ ಹಾಕಿದ್ದಾನೆ. ಪುಂಡರ ಗುಂಪು ಕಟ್ಟಿಕೊಂಡು, ಲಾಂಗು, ಮಚ್ಚು ಸಮೇತ ಬಂದು ದಾಳಿಗೆ ಯತ್ನಿಸಿದ್ದಾರೆ. ಆ ವೇಳೆ ನವೀನ್ ಜೊತೆಗಿದ್ದ ಹರೀಶ್ ಎಂಬಾತನ ಹೊಟ್ಟೆ, ತಲೆಯ ಭಾಗಕ್ಕೆ ಏಟು ಮಾಡಿ ಓಡಿ ಹೋಗಿದ್ದಾರೆ. ಪ್ರಜ್ವಲ್, ಕಿರಣ, ಮನೋಜ್, ಮೂರ್ತಿ ಹಾಗೂ ಸಂದೀಪ್‌ರನ್ನು ಅರೆಸ್ಟ್ ಮಾಡಲಾಗಿದೆ.