Asianet Suvarna News Asianet Suvarna News

ಹತ್ತೇ ಹತ್ತು ಸೆಕೆಂಡ್‌, ನಡೀತು ಘನಘೋರ ದುರಂತ..25 ಅಡಿ ಕಟೌಟ್ ನಿಲ್ಲುವ ಮೊದಲೇ ಬಿತ್ತು 3 ಹೆಣ!

ಗೋವಾದಿಂದ ನೇರಾ ಮೃತರ ಮನೆಗಳಿಗೆ ಬಂದ ಯಶ್..!
ಯಾಕಾದ್ರೂ ಬರ್ತಡೇ ಬರುತ್ತೋ ಅಂದರಲ್ಲಾ ಯಶ್..!
ನೊಂದವರನ್ನ ಕಂಡು ಕಣ್ಣೀರಿಟ್ಟ ರಾಕಿಂಗ್ ಸ್ಟಾರ್..! 

ಅವರೆಲ್ಲಾ 21-22 ವರ್ಷದ ಹುಡುಗರು. ತಮ್ಮ ನೆಚ್ಚಿನ ನಾಯಕ ನಟನ ಬರ್ತಡೇ(Birthday) ಸೆಲಬ್ರೇಷನ್ ಅನ್ನ ಅದ್ಧೂರಿಯಾಗಿ ಆಚರಿಸಬೇಕು ಅನ್ನೋ ಆಸೆಯಿಂದ, 25 ಅಡಿ ಕಟೌಟ್ ಮಾಡಿಸಿ, ಊರಿನವರಿಗೆ ಸರ್ಪ್ರೈಸ್ ಕೊಡಲು ಹೊರಟಿದ್ರು. ಆದ್ರೆ ವಿಧಿಯ ಯೋಚನೆ ಬೇರಯದ್ದೇ ಇತ್ತು. 25 ಅಡಿ ಕಟೌಟ್(Cutout) ನಿಲ್ಲುವ ಮೊದಲೇ ಅಲ್ಲಿ ಮೂರು ಹೆಣಗಳು ಬಿದ್ದಿದ್ವು. ಊರಿನವರಿಗೆ ಸರ್‌ಪ್ರೈಸ್‌ ಕೊಡಲು ಹೋದ ಹುಡುಗರು ಹೆಣವಾಗಿ ಹೋಗಿದ್ದಾರೆ. ಇನ್ನೂ ಹೀಗೆ ಯಶ್(Yash) ಬರ್ತಡೇ ಸೆಲಬ್ರೇಟ್ ಮಾಡಲು ಹೋಗಿ ದುರಂತ ಅಂತ್ಯ ಕಂಡ ಸುದ್ದಿ ಬೆಳಗಾಗುತ್ತಿದ್ದಂತೆ ಇಡೀ ರಾಜ್ಯಕ್ಕೆ ಹರಡಿತ್ತು. ಗೋವಾದಲ್ಲಿದ್ದ ಯಶ್ರಿಗೂ ಗೊತ್ತಾಗಿತ್ತು. ತಡ ಮಾಡದೇ ಯಶ್ ಮೃತರ ಗ್ರಾಮಕ್ಕೆ ಹೊರಟು ನಿಂತ್ರು. ಅವರೆಲ್ಲಾ ಕೂಲಿ ನಾಲಿ ಮಾಡಿ ತಮ್ಮ ಕುಟುಂಬಕ್ಕೆ ನೆರವಾಗಿದ್ದ ಹುಡುಗರು. ಯಶ್‌ ಅಪ್ಪಟ ಅಭಿಮಾನಿಗಳಾಗಿದ್ರಿಂದ(Fans) ರಾತ್ರಿ ಊಟ ಮಾಡಿ ಒಂದೊಂದು ನೆಪ ಹೇಳಿ ಮನೆಯಿಂದ ಹೊರಬಂದಿದ್ರು. ಆದ್ರೆ ಮಕ್ಕಳು ಮಲಗಿದ್ದಾರೆ ಅಂತ ತಿಳಿದು ನಿದ್ದೆ ಮಾಡ್ತಿದ್ದ ಹೆತ್ತವರಿಗೆ ಕೆಲವೇ ಗಂಟೆಗಳಲ್ಲಿ ಮಕ್ಕಳ ಸಾವಿನ ಸುದ್ದಿ ಬಂದಿತ್ತು. ಇನ್ನೂ ಹುಟ್ಟುಹಬ್ಬದ ದಿನ ಬೆಳಗ್ಗೆ ಎದ್ದು ವಿಶಸ್ ನೋಡಬೇಕಿದ್ದ ಯಶ್. ಅಭಿಮಾನಿಗಳ ಸಾವಿನ ಸುದ್ದಿ ಕೇಳಿ ನಿರಾಸೆಗೊಂಡಿದ್ರು. ನಟರ ಮೇಲೆ ಅಭಿಮಾನ ಇರಲಿ ಆದ್ರೆ ಅದೇ ಜೀವಕ್ಕೆ ಆಪತ್ತು ಆಗಬಾರದು.

ಇದನ್ನೂ ವೀಕ್ಷಿಸಿ:  Maldives: ಲಕ್ಷದ್ವೀಪಕ್ಕೆ ಭೇಟಿ ಕೊಟ್ಟಿದ್ದ ಮೋದಿ..! ಮಾಲ್ಡೀವ್ಸ್ ದೇಶಕ್ಕೆ ಬೆಂಕಿ ಬಿದ್ದಿದ್ದೇಕೆ..?

Video Top Stories