ಪ್ರಿನ್ಸ್ ಮ್ಯಾಸ್ಸಿವ್ ಲುಕ್: ಮಹೇಶ್ ಬಾಬು ಹೊಸ ಲುಕ್​​ಗೆ ಕಾರಣ ರಾಜಮೌಳಿ!

ಮಾರುದ್ದ ತಲೆ ಕೂದಲು, ಮುಖದ ತುಂಬಾ ಗಡ್ಡ ಬಿಟ್ಟುಕೊಂಡು ಪ್ರಿನ್ಸ್ ದರ್ಶನ ಕೊಟ್ಟಿದ್ದಾರೆ. RRR ಗ್ಲೋಬಲ್ ಸಕ್ಸಸ್ ನಂತರ ರಾಜಮೌಳಿ, ಮಹೇಶ್ ಬಾಬು ಜೊತೆಗೆ ಸಿನಿಮಾ ಮಾಡ್ತಾರೆ ಅನ್ನೋ ಸಂಗತಿ ಗೊತ್ತೇ ಇದೆ. 
 

First Published Sep 27, 2024, 4:14 PM IST | Last Updated Sep 27, 2024, 4:37 PM IST

ಟಾಲಿವುಡ್​​ ಪ್ರಿನ್ಸ್​ ಮಹೇಶ್​ ಬಾಬು ತಲೆಯಲ್ಲಿ ಕೂದಲೇ ಇಲ್ಲ. ವಿಗ್ ಹಾಕಿಕೊಂಡು ಓಡಾಡ್ತಾರೆ ಅನ್ನೋ ಟಾಕ್​ ತೆಲುಗು ಚಿತ್ರರಂಗದಲ್ಲಿ ಮಹೇಶ್ ಬಾಬು ಚಿತ್ರರಂಗ ಪ್ರವೇಶ ಮಾಡಿದಾಗಿನಿಂದಲೂ ಇದೆ. ಆದ್ರೆ ಮಹೇಶ್ ಬಾಬು ಮಾತ್ರ ಇದುವರೆಗೂ ಎಲ್ಲೂ ಬೋಳುತಲೆಯಲ್ಲಿ ಕಾಣಿಸಿಕೊಂಡೇ ಇಲ್ಲ. ಒಂದೇ ತರದ ಹೇರ್​ಸ್ಟೈಲ್​​ನಲ್ಲಿ ಮಹೇಶ್​ ಮಾಬು ಫ್ಯಾನ್ಸ್​ ಮನಸ್ಸಲ್ಲಿ ಅಚ್ಚೊತ್ತಿದ್ದಾರೆ. ಇದೀಗ ಮಹೇಶ್ ಬಾಬು ಉದ್ದ ಕೂದಲು ಬಿಟ್ಟು ತೇರ್​ ರಾಮನ ಹಾಗೆ ಕಾಣಿಸುತ್ತಿದ್ದಾರೆ. ಈ ಲುಕ್​ ಹಿಂದಿನ ಗುಟ್ಟೇನು ಅಂತ ನೋಡೋಣ ಬನ್ನಿ. ತೆಲುಗು ಸಿನಿ ಜಗತ್ತಿನ ಕೆಲವೇ ಕೆಲವು ಹ್ಯಾಂಡ್ಸಮ್ ಹೀರೋಗಳಲ್ಲಿ ಮಹೇಶ್​ ಬಾಬು ಕೂಡ ಒಬ್ರು. ಟಾಲಿವುಡ್​ನ ಪ್ರಿನ್ಸ್ ಅಂತಲೇ ಕರೆಸಿಕೊಳ್ಳೋ ಮಹೇಶ್ ಬಾಬು, ವಿಗ್​​ ಹಾಕುತ್ತಾರಾ.? ಹೀಗೊಂದು ಡೌಟ್ ಹತ್ತಾರು ವರ್ಷಗಳಿಂದಲೂ ಇದೆ. 

ಆದ್ರೆ ಅದು ಸುಳ್ಳು ಅಂತ ಹೇಳೋಕೆ ಮಹೇಶ್ ಬಾಹು ಹೊಸ ಲುಕ್​ ಒಂದು ಸಿಕ್ಕಿದೆ. ಮಾರುದ್ದ ತಲೆ ಕೂದಲು, ಮುಖದ ತುಂಬಾ ಗಡ್ಡ ಬಿಟ್ಟುಕೊಂಡು ಪ್ರಿನ್ಸ್ ದರ್ಶನ ಕೊಟ್ಟಿದ್ದಾರೆ. RRR ಗ್ಲೋಬಲ್ ಸಕ್ಸಸ್ ನಂತರ ರಾಜಮೌಳಿ, ಮಹೇಶ್ ಬಾಬು ಜೊತೆಗೆ ಸಿನಿಮಾ ಮಾಡ್ತಾರೆ ಅನ್ನೋ ಸಂಗತಿ ಗೊತ್ತೇ ಇದೆ. ಸೂಪರ್ ಸ್ಟಾರ್ ಮಹೇಶ್ ಬಾಬು 29ನೇ ಚಿತ್ರವಾಗಿರೋ ಈ ಪ್ರಾಜೆಕ್ಟ್ ನತ್ತ ಇಡೀ ವಿಶ್ವದ ಕಣ್ಣು ನೆಟ್ಟಿದೆ. ಈ ಸಿನಿಮಾದಲ್ಲಿ ಮಹೇಶ್ ಬಾಬು ಲುಕ್ ಹೇಗಿರುತ್ತೆ ಅನ್ನೋ ಬಗ್ಗೆಯೂ ಕುತೂಹಲ ಇದೆ. ಮತ್ತೀಗ ಆ ಕುತೂಹಲಕ್ಕೆ ಉತ್ತರವೂ ಸಿಕ್ಕಿದೆ. ಯಾಕಂದ್ರೆ ಮಹೇಶ್ ಬಾಬು ಈ ಹೊಸ ಲುಕ್​​ ಮೌಳಿ ಜೊತೆಗಿನ ಸಿನಿಮಾಗಾಗಿ. 

ಮಹೇಶ್ ಬಾಬು ಮುಂದಿನ ಸಿನಿಮಾವನ್ನ ಬಾಹುಬಲಿಯ ಮೇಕರ್ ಎಸ್ ಎಸ್ ರಾಜಮೌಳಿ ನಿರ್ದೇಶನ ಮಾಡ್ತಾ ಇದ್ದಾರೆ. ಇದು ಇದೂವರೆಗಿನ ಭಾರತೀಯ ಸಿನಿಮಾಗಳಿಗಿಂತ ಅತಿ ದೊಡ್ಡ ಬಜೆಟ್ ಸಿನಿಮಾ ಆಗುತ್ತೆ ಅನ್ನೋ ಮಾತುಗಳಿವೆ. ಇಂಡಿಯಾನಾ ಜೋನ್ಸ್ ಶೈಲಿಯ ಜಂಗಲ್ ಆಕ್ಷನ್ ಅಡ್ವೆಂಚರ್ ಸಿನಿಮಾ SSMB29, ಆಫ್ರಿಕನ್ ಫಾರೆಸ್ಟ್ನಲ್ಲಿ ಚಿತ್ರಿತಗೊಳ್ಳಲಿದೆಯಂತೆ.  ಮಹೇಶ್ ಅಂದ್ರೆ ಕ್ಲೀನ್ ಶೇವ್ ಲುಕ್ ನಲ್ಲಿ ಮಿಂಚ್ತಾ ಇದ್ರು. ಇದೀಗ ಇದೇ ಮೊದಲ ಬಾರಿಗೆ ಈ ಲಾಂಗ್ ಹೇರ್, ಬೀಯರ್ಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಾವಿರ ಕೋಟಿ  ಬಜೆಟ್ ನ  ಪ್ಯಾನ್ ವರ್ಲ್ಡ್ ಮೂವಿ ಇದಾಗಲಿದ್ದು, ಸುಮಾರು 30ಕ್ಕೂ ಅಧಿಕ ವಿದೇಶಿ ಭಾಷೆಗಳಲ್ಲಿ ತಯಾರಾಗಲಿದೆಯಂತೆ. 

ಮಹೇಶ್​ ಬಾಬು ಹಿಂದೆಂದೂ ನೋಡಿರದ ಗೆಟಪ್​ನಲ್ಲಿ ರಾಜಮೌಳಿ ತೋರಿಸುತ್ತಿದ್ದಾರೆ. ಈ ಹಿಂದೆ ಮಹೇಶ್ ಬಾಬು ಫ್ಯಾಮಿಲಿ ಜೊತೆ  ಫಾರಿನ್ ಟ್ರಿಪ್ ಹೋದಾಗಲೂ ಅವರ ಲುಕ್ ಗಮನ ಸೆಳೆದಿತ್ತು. ಮತ್ತೀಗ ಒನ್ಸ್ ಅಗೈನ್ ಮಹೇಶ್ ಅವತಾರ ಕ್ಯಾಮರಾ ಕಣ್ಣಿಗೆ ಬಿದ್ದಿದೆ. ಇತ್ತೀಚಿಗೆ ತೆಲಂಗಾಣದಲ್ಲಿ ಪ್ರವಾಹದಿಂದ ಹಾನಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಿಎಂ ರಿಲೀಫ್ ಫಂಡ್ ಗೆ ಮಹೇಶ್ ಬಾಬು 50 ಲಕ್ಷ  ಚೆಕ್ ನೀಡಿದ್ದಾರೆ. ಪತ್ನಿ ಜೊತೆಗೆ ಸಿಎಂ ರೇವಂತ್ ರೆಡ್ಡಿಯವರನ್ನ ಭೇಟಿ ಮಾಡಿ ಚೆಕ್ ನೀಡಿದ್ದಾರೆ. ಇದೇ ಸಮಯದಲ್ಲಿ ಕ್ಕಿಕ್ಕಿಸಿರೋ ಫೋಟೋ ವೀಡಿಯೋ ಸಖತ್ ವೈರಲ್ ಆಗಿದೆ.