ಅಪ್ಪು ಮಾಲೆ ಧರಿಸಿ ಬಂದ ಹೊಸಪೇಟೆ ಫ್ಯಾನ್..
ಪುನೀತ್ ಜನ್ಮದಿನಕ್ಕೆ ಅಭಿಮಾನಿಗಳಿಂದ ಹಲವಾರು ವಿಶೇಷ ಸೇವೆಗಳನ್ನು ಹಮ್ಮಿಕೊಳ್ಳಲಾಗಿದೆ.ಅಪ್ಪು ಮಾಲೆಧರಿಸಿ ಅಭಿಮಾನಿ ಹೊಸಪೇಟೆಯಿಂದ ಕಾಲ್ನಡಿಗೆಯಲ್ಲಿ ಬಂದಿದ್ದಾರೆ.
ಕರ್ನಾಟಕ ರತ್ನ, ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅಪ್ಪು ಸಮಾಧಿ ಬಳಿಗೆ ಅಭಿಮಾನಿಗಳ ದಂಡೇ ಆಗಮಿಸುತ್ತಿದೆ.ಪುನೀತ್ ಜನ್ಮದಿನಕ್ಕೆ ಅಭಿಮಾನಿಗಳಿಂದ ಹಲವಾರು ವಿಶೇಷ ಸೇವೆಗಳನ್ನು ಹಮ್ಮಿಕೊಳ್ಳಲಾಗಿದೆ.ಅಪ್ಪು ಮಾಲೆಧರಿಸಿ ಅಭಿಮಾನಿ ಹೊಸಪೇಟೆಯಿಂದ ಕಾಲ್ನಡಿಗೆಯಲ್ಲಿ ಬಂದಿದ್ದಾರೆ. ಮೂರುದಿನಗಳು ಪಾದಯಾತ್ರೆಯ ಮೂಲಕ ಕಂಠೀರವ ಸಮಾಧಿ ಬಳಿ ಬಂದಿರುವ ಅಪ್ಪು ಅಭಿಮಾನಿ ಅಪ್ಪು ನೆನಪಲ್ಲಿ ಹಗಲು ರಾತ್ರಿ ಪಾದಯಾತ್ರೆ ಮಾಡಿದ್ದಾರೆ. ದಿನ ನಿತ್ಯ ಅಪ್ಪುವಿಗೆ ಪೂಜೆ ಮಾಡುತ್ತೆನೆ ಇದು ಪುಣ್ಯಸ್ಥಳ, ಪ್ರತಿ ವರ್ಷ ಮಾಲೆ ಧರಿಸಿ ಬರ್ತೀನಿ ಎಂದು ಅಭಿಮಾನಿ ಹೇಳಿದ್ದಾರೆ