Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟ ಮಾತ್ರ ಭರ್ಜರಿ ಮನರಂಜನೆ ನೀಡುತ್ತಿದ್ದಾರೆ. ಹೀಗಿರುವಾಗ ಇಲ್ಲಿರುವ ಸ್ಪರ್ಧಿಗಳು ದೊಡ್ಮನೆಗೆ ಬರಲು ಅಸಲಿ ಕಾರಣ ಬೇರೆ ಇದೆ ಎಂದು ಗಿಲ್ಲಿ ನಟ ಅವರು ಹೇಳಿದ್ದಾರೆ. ಹಾಗಾದರೆ ಏನದು?
- Home
- News
- State
- Karnataka News Live: ಗಂಭೀರವಾದ ಸಮಸ್ಯೆಯಿಂದಲೇ BBK 12 ಮನೆಗೆ ಬಂದಿರೋ ಚಂದ್ರಪ್ರಭ, ಸತೀಶ್; ಬಟಾ ಬಯಲು ಮಾಡಿದ ಗಿಲ್ಲಿ ನಟ
Karnataka News Live: ಗಂಭೀರವಾದ ಸಮಸ್ಯೆಯಿಂದಲೇ BBK 12 ಮನೆಗೆ ಬಂದಿರೋ ಚಂದ್ರಪ್ರಭ, ಸತೀಶ್; ಬಟಾ ಬಯಲು ಮಾಡಿದ ಗಿಲ್ಲಿ ನಟ

ಬೆಂಗಳೂರು: ಅಕ್ಟೋಬರ್ ಬಿಜೆಪಿಯಲ್ಲಿ ಕ್ರಾಂತಿ ಆಗಲಿದ್ದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಕುರ್ಚಿ ಅಲುಗಾಡಲಿದೆ. ಅವರ ವಿಪಕ್ಷ ಸ್ಥಾನದ ಕುರ್ಚಿಗಾಗಿ ಮಾಜಿ ಸಚಿವ ಸುನಿಲ್ ಕುಮಾರ್ ಅವರು ಕಾಯುತ್ತಿದ್ದಾರೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಟೀಕೆ ಮಾಡಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್.ಅಶೋಕ್ ಅವರು ಔಟ್ ಗೋಯಿಂಗ್ ವಿಪಕ್ಷ ನಾಯಕ ಆಗಿದ್ದು, ಸುನಿಲ್ ಕುಮಾರ್ ಅವರು ಇನ್ ಕಮಿಂಗ್ ವಿಪಕ್ಷ ನಾಯಕ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು. ವಿರೋಧ ಪಕ್ಷವಾಗಿರುವ ಬಿಜೆಪಿಯ ಮನೆ ಒಡೆದು ನೂರು ಬಾಗಿಲಾಗಿದೆ. ರಾಜ್ಯದಲ್ಲಿರುವ ಬಿಜೆಪಿಯ ನಾಯಕರಿಗೆ ಚೆಕ್ಮೇಟ್ ಇಟ್ಟು ಮುಖ್ಯಮಂತ್ರಿ ಅಭ್ಯರ್ಥಿ ಆಗಲೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಅಂಡರ್ ಕರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರದೀಪ್ ಈಶ್ವರ್ ಹೇಳಿದರು.
Karnataka News Live 5th October 2025ಗಂಭೀರವಾದ ಸಮಸ್ಯೆಯಿಂದಲೇ BBK 12 ಮನೆಗೆ ಬಂದಿರೋ ಚಂದ್ರಪ್ರಭ, ಸತೀಶ್; ಬಟಾ ಬಯಲು ಮಾಡಿದ ಗಿಲ್ಲಿ ನಟ
Karnataka News Live 5th October 2025BBK 12 - ಕಿಚ್ಚ ಸುದೀಪ್ ಹೇಳಿದಂತೆ ದೊಡ್ಡ ಸಂಖ್ಯೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ - ಯಾರು ಬರ್ತಾರೆ?
ಹಳೆಯ ಸೀಸನ್‌ಗಳಿಂದ ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ವಿಭಿನ್ನವಾಗಿರತ್ತೆ, ಇದೇ ಬೇರೆ ಲೆಕ್ಕ ಎಂದು ಕಿಚ್ಚ ಸುದೀಪ್ ಹೇಳಿದ್ದರು. ಎರಡು ಫಿನಾಲೆ, ಇಬ್ಬರು ವಿನ್ನರ್ ಕೂಡ ಇರಬಹುದು ಎಂದು ಅವರು ಹೇಳಿದ್ದರು. ಈಗ ಮತ್ತೊಂದು ಟ್ವಿಸ್ಟ್ ಕೊಟ್ಟಿದ್ದಾರೆ.
Karnataka News Live 5th October 2025ಚಿನ್ನವನ್ನು ಅತಿ ಹೆಚ್ಚು ಗಣಿಗಾರಿಕೆ ಮಾಡುವ ದೇಶ ಯಾವುದು? ಬೆಚ್ಚಿಬೀಳಿಸುತ್ತೆ ಅಂಕಿಅಂಶ!
World's largest gold mines: ವಿಶ್ವದ ಚಿನ್ನದ ಪೂರೈಕೆಯ ಕೀಲಿಕೈಯನ್ನು ಹೊಂದಿರುವ ಹತ್ತು ದೇಶಗಳ ಬಗ್ಗೆ ತಿಳಿದುಕೊಳ್ಳೋಣ.
Karnataka News Live 5th October 2025'ಪಿಒಕೆಭಾರತದ ಮನೆಯ ಒಂದು ಕೋಣೆ, ಅದನ್ನ ವಾಪಸ್ ಪಡೆಯಲೇಬೇಕು - ಭಾಗವತ್ ಸ್ಫೋಟಕ ಹೇಳಿಕೆ!
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಭಾರತದ ಮನೆಯ ಒಂದು ಕೋಣೆ ಎಂದು ಬಣ್ಣಿಸಿದ್ದಾರೆ. ಪಿಒಕೆಯಲ್ಲಿ ಪಾಕಿಸ್ತಾನಿ ಆಡಳಿತದ ವಿರುದ್ಧ ತೀವ್ರ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದು ದೇಶದಲ್ಲಿ ಚರ್ಚೆ ಹುಟ್ಟುಹಾಕಿದೆ.
Karnataka News Live 5th October 2025BBK 12 - ಕಿಚ್ಚ ಸುದೀಪ್‌ಗೆ ಸುಸ್ತು ಮಾಡಿ Bigg Boss ಮನೆಯಿಂದ ಹೊರಬಿದ್ದ ಕರಿಬಸಪ್ಪ-ಆರ್‌ಜೆ ಅಮಿತ್!
Bigg Boss Kannada 12 First Week Elimination: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಮೊದಲ ವಾರ ಒಂದು ಜಂಟಿ ಜೋಡಿ ಎಲಿಮಿನೇಟ್ ಆಗಿದೆ. ಒಂದು ವಾರಕ್ಕೆ ಇಬ್ಬರು ಬಿಗ್ ಬಾಸ್ ಪ್ರಯಾಣವನ್ನು ಮುಗಿಸಿದ್ದಾರೆ.
Karnataka News Live 5th October 2025ಹಳ್ಳಿಯ ಈ ಪದ್ಧತಿ ವಿರುದ್ಧ ಸಿಡಿದೆದ್ದ Bigg Boss ಸ್ಪರ್ಧಿಗಳು; ಬದಲಾಯಿಸಿಕೊಳ್ರೀ ಎಂದ ಕಿಚ್ಚ ಸುದೀಪ್
Bigg Boss Kannada 12: ಹಳ್ಳಿ ಪದ್ಧತಿ ಬಗೆ ಚರ್ಚೆ ಆಗಿತ್ತು. ಈ ಹಿಂದೆ ಎಪಿಸೋಡ್‌ವೊಂದರಲ್ಲಿ ನಮ್ಮ ಹಳ್ಳಿಯಲ್ಲಿ ಪುರುಷರು ಅಡುಗೆ ಕೆಲಸ ಮಾಡೋದಿಲ್ಲ, ಅಡುಗೆ ಕೆಲಸ ಮಾಡಿದರೆ ಹೆಂಡ್ತಿ ಗುಲಾಮ ಅಂತ ಕರೆಯುತ್ತಾರೆ ಎಂದು ಹೇಳುತ್ತಾರೆ ಎಂದಿದ್ದರು. ಈಗ ಸಂಡೇ ವಿಥ್ ಸುದೀಪ ಶೋನಲ್ಲಿ ಚರ್ಚೆಯಾಗಿತ್ತು.
Karnataka News Live 5th October 2025ದುರ್ಗಾ ವಿಗ್ರಹ ವಿಜರ್ಜನೆ ವೇಳೆ ಕಲ್ಲು ತೂರಾಟ, ಇಂಟರ್ನೆಟ್ ಸ್ಥಗಿತ, ವಿಎಚ್‌ಪಿ ಬಂದ್‌ಗೆ ಕರೆ!
Cuttack communal violence: ಒಡಿಶಾದ ಕಟಕ್ ದುರ್ಗಾ ವಿಗ್ರಹ ವಿಸರ್ಜನೆ ವೇಳೆ ಎರಡು ಸಮುದಾಯಗಳ ನಡುವೆ ಹಿಂಸಾಚಾರ ನಡೆದಿದೆ. ಈ ಘಟನೆಯಿಂದಾಗಿ ಉದ್ವಿಗ್ನತೆ ಹೆಚ್ಚಾಗಿದ್ದು, ಸರ್ಕಾರ ಇಂಟರ್ನೆಟ್ ಸ್ಥಗಿತಗೊಳಿಸಿದೆ. ವಿಶ್ವ ಹಿಂದೂ ಪರಿಷತ್ ಬಂದ್‌ಗೆ ಕರೆ ನೀಡಿದ್ದು, ಪೊಲೀಸರು ಹಲವರನ್ನು ಬಂಧಿಸಿದ್ದಾರೆ.
Karnataka News Live 5th October 2025Photos - ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣ ಮಗಳ ಜನ್ಮದಿನದಲ್ಲಿ ಗಣ್ಯಾತಿಗಣ್ಯರು; ಭರ್ಜರಿ ಉಡುಗೊರೆ, ಸರ್ಪ್ರೈಸ್
Tridevi Ponnakka Birthday: ನಟ ಭುವನ್ ಪೊನ್ನಣ್ಣ ಹಾಗೂ ಹರ್ಷಿಕಾ ಪೂಣಚ್ಚ ಅವರ ಮಗಳು ತ್ರಿದೇವಿ ಪೊನ್ನಕ್ಕ ಅವರ ಜನ್ಮದಿನವನ್ನು ಗ್ರ್ಯಾಂಡ್ ಆಗಿ ಆಚರಿಸಲಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ರಾಜಕೀಯ ವ್ಯಕ್ತಿಗಳು, ಸಿನಿಮಾ ತಾರೆಯರು, ಕ್ರಿಕೆಟ್ ಲೋಕದ ಸೆಲೆಬ್ರಿಟಿಗಳು ಕೂಡ ಭಾಗವಹಿಸಿದ್ದರು.
Karnataka News Live 5th October 2025ಬೆಂಗಳೂರಲ್ಲಿ ಸ್ಯಾಂಡಲ್‌ವುಡ್ ಪಂದ್ಯ ನೋಡಿ ಮರಳ್ತಿದ್ದ ಯುವತಿ ಮೇಲೆ ಬಿದ್ದ ಮರ, ಸ್ಥಳದಲ್ಲೆ ಸಾವು
ಬೆಂಗಳೂರಲ್ಲಿ ಸ್ಯಾಂಡಲ್‌ವುಡ್ ಪಂದ್ಯ ನೋಡಿ ಮರಳ್ತಿದ್ದ ಯುವತಿ ಮೇಲೆ ಬಿದ್ದ ಮರ, ಸ್ಥಳದಲ್ಲೆ ಸಾವು, 24ರ ಹರೆಯದ ಕೀರ್ತನ ಸ್ಕೂಟರ್ ಮೂಲಕ ಮರಳುತ್ತಿದ್ದ ವೇಳೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದ್ದ ಬೃಹತ್ ಮರ ಬಿದ್ದಿದೆ.
Karnataka News Live 5th October 2025'ಟ್ರೆಡ್ ಮಿಲ್ ಮೇಲೆ ಬಿದ್ದು ಪಾಠ ಕಲಿತೆ..' ಜನರಿಗೆ ಸಲಹೆ ನೀಡಿದ ರಾಜೀವ್ ಚಂದ್ರಶೇಖರ್ ಪೋಸ್ಟ್ ವೈರಲ್
ಕೇರಳ ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್, ಟ್ರೆಡ್‌ಮಿಲ್‌ನಲ್ಲಿ ವ್ಯಾಯಾಮ ಮಾಡುವಾಗ ಜಾರಿ ಬಿದ್ದು ಗಾಯಗೊಂಡ ಬಗ್ಗೆ ಹಂಚಿಕೊಂಡಿದ್ದಾರೆ. ಇದೇ ವೇಳೆ, ಶಬರಿಮಲೆ ವಿಚಾರದಲ್ಲಿ ಆಡಳಿತಾರೂಢ ಸಿಪಿಎಂ ಪಕ್ಷವು ಹಿಂದೂ ನಂಬಿಕೆಗಳಿಗೆ ದ್ರೋಹ ಬಗೆದಿದೆ ಎಂದು ಆರೋಪಿಸಿದ್ದಾರೆ.
Karnataka News Live 5th October 2025ಕಾಂತಾರಾ 1 ಸಿನಿಮಾ ವೀಕ್ಷಣೆ ವೇಳೆ ಬಾಲಕಿ ಮೈಮೇಲೆ ಬಂದ ದೈವ, ಬೆಚ್ಚಿ ಬಿದ್ದ ಪೋಷಕರು
ಕಾಂತಾರಾ 1 ಸಿನಿಮಾ ವೀಕ್ಷಣೆ ವೇಳೆ ಬಾಲಕಿ ಮೈಮೇಲೆ ಬಂದ ದೈವ, ಬೆಚ್ಚಿ ಬಿದ್ದ ಪೋಷಕರು, ಬಾಲಕಿಯನ್ನು ಪೋಷಕರು ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಆದರೆ ಸಾಧ್ಯವಾಗಿಲ್ಲ, ಆವೇಶದ ವರ್ತನೆ ನೋಡಿ ಸಿನಿಮಾ ಪ್ರೇಕ್ಷಕರು ಗಾಬರಿಯಾದ ಘಟನೆ ನಡೆದಿದೆ.
Karnataka News Live 5th October 2025ತಿಂಡಿಪೋತ ಟ್ರಂಪ್ ಮಧ್ಯಾಹ್ನ, ರಾತ್ರಿ ಊಟಕ್ಕೆ ಏನು ತಿಂತಾರೆ? ವೈಟ್‌ಹೌಸ್ ಬಾಣಸಿಗರ ಸಂಬಳ ತಿಳಿದರೆ ತಲೆತಿರುಗುತ್ತೆ!
Karnataka News Live 5th October 2025ಜಿಎಸ್‌ಟಿ ದರ ಕಡಿತದ ಬೆನ್ನಲ್ಲಿಯೇ ದಾಖಲೆ ಬರೆದ ನವರಾತ್ರಿ ಸೇಲ್; ಅತಿಹೆಚ್ಚು ಮಾರಾಟವಾದ ವಸ್ತುಗಳು ಇಲ್ಲಿವೆ!
Karnataka News Live 5th October 2025Myth or Truth - ಹಾವುಗಳು ನಿಜವಾಗಿಯೂ ಗರ್ಭಿಣಿಯರನ್ನು ಕಚ್ಚುವುದಿಲ್ಲವೇ?
ಹಾವುಗಳು ಗರ್ಭಿಣಿಯರನ್ನು ಕಚ್ಚುವುದಿಲ್ಲ ಮತ್ತು ಅವರನ್ನು ನೋಡಿದರೆ ಕುರುಡಾಗುತ್ತವೆ ಎಂಬುದು ಪುರಾಣದ ಕಥೆಯಿಂದ ಬಂದ ಜನಪ್ರಿಯ ನಂಬಿಕೆಯಾಗಿದೆ. ಆದರೆ, ವೈಜ್ಞಾನಿಕವಾಗಿ ಇದಕ್ಕೆ ಯಾವುದೇ ಆಧಾರವಿಲ್ಲ; ಹಾವುಗಳು ಯಾರನ್ನಾದರೂ ಕಚ್ಚಬಹುದು ಮತ್ತು ಗರ್ಭಿಣಿಯರಿಗೆ ಎಚ್ಚರಿಕೆಯಿಂದ ಇರಬೇಕು.
Karnataka News Live 5th October 2025ತಂಗಿಯ ಸಂಸಾರದ ಬಗ್ಗೆ ಪ್ರಶ್ನೆ ಮಾಡಿದ ಅಣ್ಣಂದಿರಿಗೆ ಚಾಕು ಇರಿದು ರಕ್ತದೋಕುಳಿ ಆಡಿದ ಭಾವ!
ಶಿವಮೊಗ್ಗದಲ್ಲಿ, ತನ್ನ ತಂಗಿಯನ್ನು ಮದುವೆಯಾದ ಒಂದು ವರ್ಷದೊಳಗೆ ತೊರೆದಿದ್ದನ್ನು ಪ್ರಶ್ನಿಸಿದ್ದಕ್ಕೆ, ವ್ಯಕ್ತಿಯೊಬ್ಬ ತನ್ನ ಇಬ್ಬರು ಭಾವಮೈದುನರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಘಟನೆಯಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದ್ದು, ಕೌಟುಂಬಿಕ ದ್ವೇಷವೇ ಈ ಕೃತ್ಯಕ್ಕೆ ಕಾರಣವೆಂದು ತಿಳಿದುಬಂದಿದೆ.
Karnataka News Live 5th October 2025ಇತ್ತ ಸುದೀಪ್, ಅತ್ತ Bigg Boss ಮಲ್ಲಮ್ಮ! ಈ ಪುಟಾಣಿಯ ಡಬಲ್ ರೋಲ್ಗೆ ನಕ್ಕೂ ನಕ್ಕೂ ಸುಸ್ತಾಗುವಿರಿ!
ಬಿಗ್ಬಾಸ್ 12ರ ಸ್ಪರ್ಧಿ, ಉತ್ತರ ಕರ್ನಾಟಕದ ಮಲ್ಲಮ್ಮ ತಮ್ಮ ಮುಗ್ಧತೆಯಿಂದ ಜನಪ್ರಿಯರಾಗಿದ್ದಾರೆ. ಇದೀಗ ಪುಟಾಣಿ ಸುದರ್ಶನ್ ಜೆ.ಕೆ., ಮಲ್ಲಮ್ಮ ಮತ್ತು ಸುದೀಪ್ ಅವರ ನಡುವಿನ ಸಂಭಾಷಣೆಯನ್ನು ಡಬಲ್ ರೋಲ್‌ನಲ್ಲಿ ನಟಿಸಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾನೆ.
Karnataka News Live 5th October 2025ನಾಳೆ ಚಿಕ್ಕಬಳ್ಳಾಪುರಕ್ಕೆ ಪವನ್ ಕಲ್ಯಾಣ್; ಕಾಲ್ತುಳಿತ ದುರಂತ ತಪ್ಪಿಸಲು ಭಾರೀ ಭದ್ರತೆ!
Pawan Kalyan Chikkaballapur visit: ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡರ ಹುಟ್ಟುಹಬ್ಬದ ಕಾರ್ಯಕ್ರಮಕ್ಕಾಗಿ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆ, ಅಹಿತಕರ ಘಟನೆ ತಡೆಯಲು ಜಿಲ್ಲಾ ಪೊಲೀಸರು 500ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಿ ಭಾರೀ ಭದ್ರತೆ
Karnataka News Live 5th October 2025ಬೆಂಗಳೂರು ನಮ್ಮ ಮೆಟ್ರೋಗೆ 'ಬಸವ ಮೆಟ್ರೋ' ಎಂದು ಮರುನಾಮಕರಣ - ಕೇಂದ್ರಕ್ಕೆ ಶಿಫಾರಸ್ಸು - ಸಿಎಂ ಸಿದ್ದರಾಮಯ್ಯ
ಬೆಂಗಳೂರಿನ ನಮ್ಮ ಮೆಟ್ರೋಗೆ 'ಬಸವ ಮೆಟ್ರೋ' ಎಂದು ನಾಮಕರಣ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಇದು ಕೇಂದ್ರ ಮತ್ತು ರಾಜ್ಯದ ಸಹಭಾಗಿತ್ವದ ಯೋಜನೆಯಾಗಿರುವುದರಿಂದ, ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ನಿರ್ಧರಿಸಲು ಸಾಧ್ಯವಿಲ್ಲ ಎಂದರು.
Karnataka News Live 5th October 2025ತುಮಕೂರು - ದನ ಮೇಯಿಸಲು ಹೋಗಿದ್ದ ಅಕ್ಕ-ತಂಗಿಯರು ಕೃಷಿ ಹೊಂಡದಲ್ಲಿ ಶವವಾಗಿ ಪತ್ತೆ!
sisters drown in farm pond: ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ದನ ಮೇಯಿಸಲು ಹೋಗಿದ್ದ ಗಂಗಮ್ಮ ಮತ್ತು ಶಕುಂತಲಾ ಎಂಬ ಅಕ್ಕ-ತಂಗಿಯರು ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಇಬ್ಬರ ಶವಗಳು ಪತ್ತೆಯಾಗಿದ್ದು, ಫೆನ್ಸಿಂಗ್ ಇಲ್ಲದ ಹೊಂಡದ ಬಳಿ ನಡೆದ ಈ ಘಟನೆ ಅನುಮಾನಕ್ಕೆ ಕಾರಣವಾಗಿದೆ.
Karnataka News Live 5th October 2025ಅಕ್ಟೋಬರ್ 11ರ ವರೆಗೆ ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರಿ ಮಳೆ, ಬೆಂಗಳೂರಿಗಿದೆಯಾ ರಿಲೀಫ್?
ಅಕ್ಟೋಬರ್ 11ರ ವರೆಗೆ ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರಿ ಮಳೆ, ಬೆಂಗಳೂರಿಗಿದೆಯಾ ರಿಲೀಫ್? ಹವಾಮಾನ ಇಲಾಖೆ ಮಹತ್ವದ ಮೂನ್ಸೂಚನೆ ನೀಡಿದೆ. ಪಶ್ಚಿಮ ಬಂಗಾಳದಲ್ಲಿನ ಪ್ರವಾಹ ಬೆನ್ನಲ್ಲೇ ಐಎಂಡಿ ಮುನ್ಸೂಚನೆ ನೀಡಿದೆ.