- Home
- Entertainment
- TV Talk
- ಗಂಭೀರವಾದ ಸಮಸ್ಯೆಯಿಂದಲೇ BBK 12 ಮನೆಗೆ ಬಂದಿರೋ ಚಂದ್ರಪ್ರಭ, ಸತೀಶ್; ಬಟಾ ಬಯಲು ಮಾಡಿದ ಗಿಲ್ಲಿ ನಟ
ಗಂಭೀರವಾದ ಸಮಸ್ಯೆಯಿಂದಲೇ BBK 12 ಮನೆಗೆ ಬಂದಿರೋ ಚಂದ್ರಪ್ರಭ, ಸತೀಶ್; ಬಟಾ ಬಯಲು ಮಾಡಿದ ಗಿಲ್ಲಿ ನಟ
Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟ ಮಾತ್ರ ಭರ್ಜರಿ ಮನರಂಜನೆ ನೀಡುತ್ತಿದ್ದಾರೆ. ಹೀಗಿರುವಾಗ ಇಲ್ಲಿರುವ ಸ್ಪರ್ಧಿಗಳು ದೊಡ್ಮನೆಗೆ ಬರಲು ಅಸಲಿ ಕಾರಣ ಬೇರೆ ಇದೆ ಎಂದು ಗಿಲ್ಲಿ ನಟ ಅವರು ಹೇಳಿದ್ದಾರೆ. ಹಾಗಾದರೆ ಏನದು?

ಸತೀಶ್ ಉದ್ದೇಶ ಏನು?
ಸತೀಶ್ ಅವರು ನಾಲ್ಕು ಸಿನಿಮಾಗಳನ್ನು ಮಾಡಿದ್ದೇನೆ. ಡ್ಯಾನ್ಸ್, ಹಾಡು ಗೊತ್ತು ಎಂದರು. 125 ದೇಶದಲ್ಲಿ ಇಂಟರ್‌ವ್ಯೂ ಆಗಿದೆ ಎಂದರು, ಒಂದೂ ಟೆಲಿಕಾಸ್ಟ್ ಆಗಿಲ್ವಂತೆ. ಬಾತ್‌ರೂಮ್‌ನಲ್ಲಿ ಸತೀಶ್ ಎನ್ನುವ ಮೆಡಿಕಲ್ ಶಾಪ್ ಇಟ್ಟಿದ್ದಾರೆ. ತಲೆ, ಚರ್ಮ ಎಂದು ಅವರು ಫುಲ್ ಕೇರ್ ಮಾಡುತ್ತಾರೆ. ಆದರೆ ರಾತ್ರಿ ಕೆಮ್ಮುತ್ತಾರೆ, ಆರೋಗ್ಯಕ್ಕೆ ಗಮನ ಕೊಡಬೇಕು. ಹಳೇ ಗಾಡಿಗೆ ಪೇಂಟ್ ಮಾಡಿರೋ ಥರ ಕಾಣ್ತಾರೆ. ಔಟರ್ ಲುಕ್ ಚೆನ್ನಾಗಿ ಕಾಣಿಸಬೇಕು ಅಂತ ಅವರು ಹೇಳ್ತಾರೆ. ಸತೀಶ್ ಅವರು ಮಟನ್ ತಿಂದು ಕೊಲೆಸ್ಟ್ರಾಲ್ 400 ಆಗಿದೆಯಂತೆ, ಕರಗಿಸಬೇಕು ಅಂತ ಇಲ್ಲಿಗೆ ಬಂದಿದ್ದಾರೆ. ನಾನು ಸೋಲಬೇಕು ಅಂತ ಬಿಗ್ ಬಾಸ್ ಮನೆಗೆ ಬಂದಿದ್ದೀನಿ ಅಂತ ಹೇಳ್ತಾರೆ.
ಚಂದ್ರಪ್ರಭ
ಚಂದ್ರಪ್ರಭ ಅವರು ಎಣ್ಣೆ ಬಿಡಬೇಕು, ಅದಿಕ್ಕೆ ಬಿಗ್ ಬಾಸ್ ಮನೆಗೆ ಬಂದೆ ಎಂದು ಹೇಳಿದ್ದಾರೆ. ಇದು ಮದ್ಯವ್ಯಸನ ಚಿಕಿತ್ಸಾ ಕೇಂದ್ರವೇ? ಎಂದು ಗಿಲ್ಲಿ ನಟ ಪ್ರಶ್ನೆ ಮಾಡಿದ್ದಾರೆ. ಗಿಲ್ಲಿ ನಟ ಹೀಗೆ ಹೇಳಿದ್ದಕ್ಕೆ ಚಂದ್ರಪ್ರಭ ಅವರು ಸಿಟ್ಟು ಮಾಡಿಕೊಂಡಿದ್ದರು. ವೈಯಕ್ತಿಕ ವಿಷಯ ರಿವೀಲ್ ಆಯ್ತು ಎಂದು ಅವರು ಬೇಸರ ಮಾಡಿಕೊಂಡ ಹಾಗಿದೆ.
ಚಂದ್ರಪ್ರಭ ಅವರು ಕಾಮಿಡಿ ರಿಯಾಲಿಟಿ ಶೋಗಳಿಂದಲೇ ಫೇಮಸ್ ಆಗಿದ್ದಾರೆ.
ಅಭಿಷೇಕ್ ಶ್ರೀಕಾಂತ್, ಅಶ್ವಿನಿ
ಇನ್ನು ಅಭಿಷೇಕ್ ಶ್ರೀಕಾಂತ್ ಹಾಗೂ ಅಶ್ವಿನಿ ಮೇಕಪ್ ರೂಮ್‌ನಿಂದ ಹೊರಗಡೆ ಬರುತ್ತಿಲ್ಲ ಎಂದು ಗಿಲ್ಲಿ ನಟ ಹೇಳಿದ್ದಾರೆ.
ಅಭಿಷೇಕ್ ಶ್ರೀಕಾಂತ್ ಹಾಗೂ ಅಶ್ವಿನಿ ಅವರು ಈ ಮನೆಯಲ್ಲಿ ಜಂಟಿಯಾಗಿದ್ದಾರೆ. ಅಶ್ವಿನಿ ಅವರು ಮಢಕಪ್ ಮಾಡಿಕೊಳ್ಳೋದಕ್ಕೆ ಅಭಿಷೇಕ್ ಕೂಡ ಅವರ ಜೊತೆ ಇರಬೇಕಾಗುತ್ತದೆ.
ಅಂದಹಾಗೆ ಇವರಿಬ್ಬರು ಬೇರೆ ಬೇರೆ ಧಾರಾವಾಹಿಗಳಲ್ಲಿ ನಟಿಸಿದ್ದರು.
ಕರಿಬಸಪ್ಪ
ಕರಿಬಸಪ್ಪ ಅವರು ಬಾಡಿ ಬರಿಸಲು ಇಲ್ಲಿಗೆ ಬಂದಿದ್ದಾರೆ ಎಂದು ಹೇಳಿದ್ದಾರೆ. ಇದು ಜಿಮ್? ಎಂದು ಗಿಲ್ಲಿ ನಟ ಪ್ರಶ್ನೆ ಮಾಡಿದ್ದಾರೆ.
ಕರಿಬಸಪ್ಪ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಾಡಿ ಬಿಲ್ಡಿಂಗ್ ಮಾಡಿ ಹೆಸರು ಮಾಡಿದ್ದಾರೆ. ಕೆಲ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು. ಅಂದಹಾಗೆ ಕರಿಬಸಪ್ಪ ಎಲಿಮಿನೇಶನ್ ಆಗಿದೆ.
ಧನುಷ್ ಗೌಡ
ಧನುಷ್ ಗೌಡ ಅವರು ನಾನು ಗೆಲ್ಲೋಕೆ ಬಂದಿದ್ದೇನೆ, ಯಾರ ಜೊತೆ ಸಂಬಂಧ ಬೆಳೆಸಿಕೊಳ್ಳೋದಿಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ, ಇದನ್ನು ನಾನು ಮೆಚ್ಚುವೆ ಎಂದಿದ್ದಾರೆ.
ಧನುಷ್ ಗೌಡ ಅವರು ಗೀತಾ, ನೂರು ಜನ್ಮಕೂ ಧಾರಾವಾಹಿಯಲ್ಲಿ ನಟಿಸಿದ್ದರು.