- Home
- Entertainment
- TV Talk
- BBK 12: ಕಿಚ್ಚ ಸುದೀಪ್ ಹೇಳಿದಂತೆ ದೊಡ್ಡ ಸಂಖ್ಯೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ: ಯಾರು ಬರ್ತಾರೆ?
BBK 12: ಕಿಚ್ಚ ಸುದೀಪ್ ಹೇಳಿದಂತೆ ದೊಡ್ಡ ಸಂಖ್ಯೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ: ಯಾರು ಬರ್ತಾರೆ?
ಹಳೆಯ ಸೀಸನ್‌ಗಳಿಂದ ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ವಿಭಿನ್ನವಾಗಿರತ್ತೆ, ಇದೇ ಬೇರೆ ಲೆಕ್ಕ ಎಂದು ಕಿಚ್ಚ ಸುದೀಪ್ ಹೇಳಿದ್ದರು. ಎರಡು ಫಿನಾಲೆ, ಇಬ್ಬರು ವಿನ್ನರ್ ಕೂಡ ಇರಬಹುದು ಎಂದು ಅವರು ಹೇಳಿದ್ದರು. ಈಗ ಮತ್ತೊಂದು ಟ್ವಿಸ್ಟ್ ಕೊಟ್ಟಿದ್ದಾರೆ.

ವೈಲ್ಡ್ ಕಾರ್ಡ್ ಎಂಟ್ರಿ ಸಂಖ್ಯೆ
ಬಿಗ್ ಬಾಸ್ ಶುರುವಾಗಿ ಐವತ್ತು ದಿನಕ್ಕೆ ವೈಲ್ಡ್‌ಕಾರ್ಡ್ ಎಂಟ್ರಿ ಆಗುತ್ತಿತ್ತು. ಈ ಬಾರಿ ಮಾಸ್ ಎಲಿಮಿನೇಶನ್ ನಡೆದು, ಮಾಸ್ ಎಂಟ್ರಿ ಆಗಬಹುದು ಎಂದು ಹೇಳಲಾಗಿದೆ. ಹೌದು, ಈ ಬಾರಿ ದೊಡ್ಡ ಸಂಖ್ಯೆಯಲ್ಲಿ ಎಲಿಮಿನೇಶನ್ ಆಗಿ, ಅಷ್ಟೇ ವೈಲ್ಡ್‌ಕಾರ್ಡ್ ಎಂಟ್ರಿ ಆಗಬಹುದು ಎಂದು ಕಿಚ್ಚ ಸುದೀಪ್ ಅವರು ಕಿಚ್ಚನ ಪಂಚಾಯಿತಿ ಹಾಗೂ ಸಂಡೇ ವಿಥ್ ಸುದೀಪ ಶೋನಲ್ಲಿ ಹೇಳಿಕೊಂಡಿದ್ದಾರೆ.
ನಾಲ್ಕು ಎಲಿಮಿನೇಶನ್
ಹೌದು, ಮೂರನೇ ವಾರಕ್ಕೆ ಫಿನಾಲೆ ನಡೆಯಲಿದೆ. ಈಗಾಗಲೇ ಮೊದಲ ವಾರಕ್ಕೆ ಜಂಟಿ ಎಲಿಮಿನೇಶನ್ ಆಗಿದೆ. ಇನ್ನು ಎರಡು ವಾರಗಳಲ್ಲಿ ನಾಲ್ಕು ಎಲಿಮಿನೇಶನ್ ಆಗಬಹುದು ಎನ್ನಲಾಗುತ್ತಿದೆ.
ಹೆಚ್ಚು ವೈಲ್ಡ್‌ಕಾರ್ಡ್ ಎಂಟ್ರಿ
ಹೌದು, ಎಲಿಮಿನೇಶನ್ ಆದಷ್ಟು ವೈಲ್ಡ್‌ಕಾರ್ಡ್ ಎಂಟ್ರಿ ಆಗಲೂಬಹುದು. ಆರಕ್ಕಿಂತ ಹೆಚ್ಚು ವೈಲ್ಡ್‌ಕಾರ್ಡ್ ಎಂಟ್ರಿ ಆದರೂ ಆಶ್ಚರ್ಯವಿಲ್ಲ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಈ ಬಾರಿ ಬಿಗ್ ಬಾಸ್ ಡಬಲ್ ಧಮಾಕಾ ಎನ್ನಬಹುದು.
ಮತ್ಯಾರು ಬರ್ತಾರೆ?
ಕೆಲವು ತಿಂಗಳುಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ಶೋನಲ್ಲಿ ಯಾರು ಬರಬಹುದು ಎಂದು ಒಂದು ಚರ್ಚೆ ಆಗಿತ್ತು. ಇವರೆಲ್ಲರೂ ಮತ್ತೆ ಬಿಗ್ ಬಾಸ್‌ಗೆ ಬರಬಹುದಾ ಎಂಬ ಸಂದೇಹ ಶುರುವಾಗಿದೆ.
ಸೌಂಡ್ ಮಾಡ್ತಿದವರು ಯಾರು?
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ, ಚಂದ್ರಪ್ರಭ, ಅಶ್ವಿನಿ ಗೌಡ, ಅಭಿಷೇಕ್ ಶ್ರೀಕಾಂತ್, ಮಲ್ಲಮ್ಮ ಮಾತ್ರ ಸೌಂಡ್ ಮಾಡುತ್ತಿದ್ದಾರೆ. ಉಳಿದರು ಮಾತ್ರ ಆಗಾಗ ಮಾತನಾಡುತ್ತಾರೆ ಅಷ್ಟೇ.