ಪ್ರಚೋದನಕಾರಿ ಭಾಷಣ, ವಿಚಾರಣೆಗೆ ಹಾಜರಾಗಲು ಕಲ್ಕಡ್ಕ ಪ್ರಭಾಕರ ಭಟ್‌ಗೆ ನೋಟೀಸ್ ಜಾರಿ ಮಾಡಲಾಗಿದೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಭಾಕರ್ ಭಟ್ ವಿರುದ್ಧ ದೂರು ದಾಖಲಾಗಿತ್ತು. ಇದೀಗ ಪೊಲೀಸರು 31ಕ್ಕೆ ವಿಚಾರಣೆ ಹಾಜರಾಗಲು ಸೂಚಿಸಿದ್ದಾರೆ.
- Home
- News
- State
- Karnataka News Live: ಪ್ರಚೋದನಕಾರಿ ಭಾಷಣ, ವಿಚಾರಣೆಗೆ ಹಾಜರಾಗಲು ಕಲ್ಕಡ್ಕ ಪ್ರಭಾಕರ ಭಟ್‌ಗೆ ನೋಟೀಸ್ ಜಾರಿ
Karnataka News Live: ಪ್ರಚೋದನಕಾರಿ ಭಾಷಣ, ವಿಚಾರಣೆಗೆ ಹಾಜರಾಗಲು ಕಲ್ಕಡ್ಕ ಪ್ರಭಾಕರ ಭಟ್‌ಗೆ ನೋಟೀಸ್ ಜಾರಿ

ಮಂಡ್ಯ: ಮಳವಳ್ಳಿ ತಾಲೂಕಿನ ಬೊಪ್ಪೇಗೌಡನಪುರ (ಬಿಜಿಪುರ) ಹೋಬಳಿಯ ಕಗ್ಗಲೀಪುರ ಗ್ರಾಮದಲ್ಲಿ ರೈತರೊಬ್ಬರ ಹಳ್ಳಿಕಾರ್ ಎತ್ತುಗಳು ಬರೋಬರಿ 9.01 ಲಕ್ಷಕ್ಕೆ ಮಾರಾಟವಾಗಿ ಗಮನ ಸೆಳೆದಿದೆ. ಗ್ರಾಮದ ಯುವ ರೈತ ಮನು ಅವರು ನಾಗಮಂಗಲದ ಹೂವಿನಹಳ್ಳಿಯ ಜಿಪಂ ಮಾಜಿ ಸದಸ್ಯ ಚಂದ್ರಣ್ಣ ಅವರಿಗೆ 9.01 ಲಕ್ಷ ರು.ಗೆ ಒಂದು ಜೊತೆ ಹಳ್ಳಿಕಾರ್ ಎತ್ತುಗಳನ್ನು ಮಾರಾಟ ಮಾಡಿದ್ದಾರೆ.
ಮನು ಕಳೆದ ಐದು ತಿಂಗಳ ಹಿಂದೆ ಕನಕಪುರದ ಹಾರೋಹಳ್ಳಿ ತಾಲೂಕಿನ ಸೋಮನಹಳ್ಳಿ ಶ್ರೀನಿವಾಸ್ ಅವರಿಂದ 5.90 ಲಕ್ಷ ರು.ಗೆ ಖರೀದಿಸಿದ್ದರು. ಹಳ್ಳಿಕಾರ್ ರಾಸುಗಳ ಸಾಕಾಣಿಕೆಯನ್ನು ರೂಢಿಸಿಕೊಂಡಿದ್ದ ಮನು ಅವರು ಎತ್ತುಗಳನ್ನು ಹೂವಿನಹಳ್ಳಿ ಚಂದ್ರಣ್ಣರಿಗೆ 9.01 ಲಕ್ಷ ರು.ಗೆ ಮಾರಾಟ ಮಾಡಿದ್ದಾರೆ.
Karnataka News Live 26 October 2025ಪ್ರಚೋದನಕಾರಿ ಭಾಷಣ, ವಿಚಾರಣೆಗೆ ಹಾಜರಾಗಲು ಕಲ್ಕಡ್ಕ ಪ್ರಭಾಕರ ಭಟ್‌ಗೆ ನೋಟೀಸ್ ಜಾರಿ
Karnataka News Live 26 October 2025ಕಿತ್ತೂರು ಉತ್ಸವದಲ್ಲಿ ಬಿಗ್‌ಬಾಸ್ ವಿನ್ನರ್ ಹನುಮಂತ್‌ಗೆ ಅವಮಾನ? ವಿಡಿಯೋ ವೈರಲ್
ಕಿತ್ತೂರು ಉತ್ಸವದಲ್ಲಿ ಗಾಯಕ ಹಾಗೂ ಬಿಗ್‌ಬಾಸ್ ವಿನ್ನರ್ ಹನುಮಂತ್ ಅವರಿಗೆ ಅವಮಾನವಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಸಂಬಂಧಿತ ವಿಡಿಯೋ ವೈರಲ್ ಆಗಿದೆ. ಸಮಯಾವಕಾಶ ಮೀರಿದರೂ ಹನುಮಂತ್ ಹಾಡಲು ಅವಕಾಶ ನೀಡಿದ್ದಕ್ಕೆ ಇಬ್ಬರು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.
Karnataka News Live 26 October 2025ತಾವರೆಕೆರೆ ಬಳಿ 300 ಎಕರೆಯಲ್ಲಿ ಡೇಟಾ ಸೆಂಟರ್ ನಿರ್ಮಾಣ, ಮಹತ್ವದ ಹೆಜ್ಜೆ ಇಟ್ಟ ಕರ್ನಾಟಕ
ತಾವರೆಕೆರೆ ಬಳಿ 300 ಎಕರೆಯಲ್ಲಿ ಡೇಟಾ ಸೆಂಟರ್ ನಿರ್ಮಾಣ, ಮಹತ್ವದ ಹೆಜ್ಜೆ ಇಟ್ಟ ಕರ್ನಾಟಕ, ಹೊಸಕೋಟೆ -ಕೋಲಾರ ಕೈಗಾರಿಕಾ ವಲಯದಲ್ಲಿ ಈ ಡೇಟಾ ಪಾರ್ಕ್ ತಲೆ ಎತ್ತಲಿದೆ. ಇದಕ್ಕಾಗಿ 1,000 ಏಕರೆ ಪ್ರದೇಶ ಕೈವಶ ಮಾಡಲು ತಯಾರಿ ನಡೆದಿದೆ.
Karnataka News Live 26 October 2025ಆನೆ ಬೇಕು ಅಂತಾ ಬಂದಿದ್ದಲ್ಲ ದಾರಿ ತಪ್ಪಿ ಬಂದಿದ್ದು, ಆದ್ರೆ ಹೊಸೂರು ಜನ ದಾರಿ ಮಾಡಿಕೊಡಲೇ ಇಲ್ಲ
ಆನೆ ಬೇಕು ಅಂತಾ ಬಂದಿದ್ದಲ್ಲ ದಾರಿ ತಪ್ಪಿ ಬಂದಿದ್ದು, ಆದ್ರೆ ಹೊಸೂರು ಜನ ದಾರಿ ಮಾಡಿಕೊಡಲೇ ಇಲ್ಲ, ಆನೆ ಮರಿಯನ್ನು ಆಟ್ಟಾಡಿಸಿಕೊಂಡು ಹೋದ ಅತ್ಯಂತ ನೀಚ ಘಟನೆ ನಡೆದಿದೆ. ಸ್ಥಳೀಯರು ಇದಕ್ಕೆ ಸಾಥ್ ನೀಡುವುದು ಮತ್ತೊಂದು ದುರಂತ.
Karnataka News Live 26 October 2025ಕಾರವಾರದ ಗುಡ್ಡೆಹಳ್ಳಿಯಲ್ಲಿ ಪತ್ತೆಯಾದ ಪ್ರಪಂಚದ ಅತಿದೊಡ್ಡ ಪತಂಗ ಅಟ್ಲಾಸ್ ಮೋತ್!
ಕಾರವಾರ ತಾಲೂಕಿನ ಗುಡ್ಡೆಹಳ್ಳಿಯ ಅರಣ್ಯ ಪ್ರದೇಶದಲ್ಲಿ, ಪ್ರಪಂಚದ ಅತಿದೊಡ್ಡ ಪತಂಗವಾದ “ಅಟ್ಲಾಸ್ ಮೋತ್” ಪತ್ತೆಯಾಗಿದೆ. ಈ ಪತಂಗವು ತನ್ನ ದೈತ್ಯಾಕಾರ, ಬಾಯಿಯಿಲ್ಲದ ವಿಶಿಷ್ಟ ಜೀವನಕ್ರಮ ಮತ್ತು ಅಲ್ಪಾವಧಿಯ ಜೀವನಚಕ್ರದಿಂದಾಗಿ ರೋಚಕವಾಗಿದೆ.
Karnataka News Live 26 October 2025ನೆಲಮಂಗಲ ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ ಗುಂಡಿನ ದಾಳಿ, ಆಸ್ಪತ್ರೆ ದಾಖಲು
ನೆಲಮಂಗಲ ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ ಗುಂಡಿನ ದಾಳಿ, ಆಸ್ಪತ್ರೆ ದಾಖಲು ಮಾಡಲಾಗಿದೆ. ಇಬ್ಬರು ಅಪರಿಚಿತರು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಗಾಯಗೊಂಡಿರುವ ಪಂಚಾಯಿತಿ ಸದಸ್ಯನಿಗೆ ಚಿಕಿತ್ಸೆ ಮುಂದುವರಿದೆ.
Karnataka News Live 26 October 2025ಬೆಳಗಾವಿ ಸಹಕಾರಿ ಸಂಘಗಳ ಚುನಾವಣೆಯಲ್ಲಿ ಜಾರಕಿಹೊಳಿ ಬ್ರದರ್ಸ್‌ಗೆ ಸೋಲು; ಖದರ್ ತೋರಿಸಿದ ಸವದಿ ಸಹೋದರರು!
ಬೆಳಗಾವಿ ಜಿಲ್ಲೆಯ ಅಥಣಿ ಮತ್ತು ಚಿಕ್ಕೋಡಿ ಸಹಕಾರಿ ಸಂಘಗಳ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಅಥಣಿ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ, ಶಾಸಕ ಲಕ್ಷ್ಮಣ ಸವದಿ ಬೆಂಬಲಿತ ಪ್ಯಾನೆಲ್ ಜಾರಕಿಹೊಳಿ ಸಹೋದರರ ಬೆಂಬಲಿತ ಪ್ಯಾನೆಲ್ ವಿರುದ್ಧ ಕ್ಲೀನ್ ಸ್ವೀಪ್ ಸಾಧಿಸಿದೆ.
Karnataka News Live 26 October 2025ತಿಲಕನಗರ ಮಹಿಳೆಯ ಕೊಲೆ ರಹಸ್ಯ ಬಯಲು, ಅನೈತಿಕ ಸಂಬಂಧವಿದ್ದ ಸುಬ್ರಹ್ಮಣಿ ಸೇರಿ ಇಬ್ಬರಿಂದ ಹತ್ಯೆ, ಆಟೋದಲ್ಲಿ ಹೆಣವಿಟ್ಟು ಪರಾರಿ
ಬೆಂಗಳೂರಿನ ತಿಲಕನಗರದಲ್ಲಿ ಸಲ್ಮಾ ಎಂಬ ಮಹಿಳೆಯ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಸಲ್ಮಾ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಇಬ್ಬರು, ಆಕೆ ಬೇರೊಬ್ಬರೊಂದಿಗೆ ಸಂಪರ್ಕದಲ್ಲಿದ್ದಾಳೆಂಬ ಅನುಮಾನದಿಂದ ಕೊಲೆ ಮಾಡಿ, ಶವವನ್ನು ಆಟೋದಲ್ಲಿ ಸಾಗಿಸಿರುವುದು ತನಿಖೆಯಿಂದ ದೃಢಪಟ್ಟಿದೆ.
Karnataka News Live 26 October 2025BBK 12 - ಗಿಲ್ಲಿ ನಟನ ದಶಾವತಾರದಲ್ಲಿ 3 ಅವತಾರ ರಿಲೀಸ್ ಮಾಡಿದ ಸುದೀಪ್; ಆದ್ರೆ ಕಾವ್ಯಾಳ ಒಪ್ಪಿಗೆ ಕೇಳಿದ್ದೇಕೆ?
ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿ ಗಿಲ್ಲಿ ನಟ, ಕಾವ್ಯಾಳ ಮಾತಿನಂತೆ ಮೀಸೆ ತೆಗೆಸಿಕೊಂಡಿದ್ದಾರೆ. ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್, ಗಿಲ್ಲಿಯನ್ನು ಟ್ರೋಲ್ ಮಾಡಿದ ಫೋಟೋಗಳನ್ನು ತೋರಿಸಿ ತಮಾಷೆ ಮಾಡಿದ್ದಲ್ಲದೆ, ಸ್ವಂತ ನಿರ್ಧಾರ ತೆಗೆದುಕೊಳ್ಳುವಂತೆ ಪರೋಕ್ಷವಾಗಿ ಸಲಹೆ ನೀಡಿದ್ದಾರೆ.
Karnataka News Live 26 October 2025ರಾಜಣ್ಣ ಹೇಳಿರೋದು ನನಗೆ ಗೊತ್ತಿಲ್ಲ, ಪಕ್ಷದ ಆಂತರಿಕ ವಿಚಾರ ಸಾರ್ವಜನಿಕವಾಗಿ ಚರ್ಚಿಸುವಂತಿಲ್ಲ - ಸಚಿವ ಗುಂಡೂರಾವ್
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ, ಬೆಂಗಳೂರಿನ ಗಾಂಧಿನಗರದಲ್ಲಿ ಕಾಂಗ್ರೆಸ್ 'ವೋಟ್ ಚೋರಿ' ವಿರುದ್ಧ ಬೃಹತ್ ಸಹಿ ಸಂಗ್ರಹ ಅಭಿಯಾನ ನಡೆಸಿತು. ಈ ಅಭಿಯಾನದ ಮೂಲಕ ಮತದಾರರ ಹಕ್ಕುಗಳ ರಕ್ಷಣೆ ಮತ್ತು ಚುನಾವಣಾ ಅಕ್ರಮಗಳ ವಿರುದ್ಧ ಜಾಗೃತಿ ಮೂಡಿಸುವ ಗುರಿ ಹೊಂದಲಾಗಿದೆ.
Karnataka News Live 26 October 2025ಆಗ್ರಾದ ತಾಜ್‌ಮಹಲ್ ನೋಡಲು ಬಂದವಳೇ ಸ್ಟಾರ್! ಲೋಕಲ್ ಬಾಯ್ಸ್ ಮಾಡಿದ ಕೆಲಸವೇನು ನೋಡಿ!
Karnataka News Live 26 October 2025ಮಗಳ ಮೇಲೆ ಅತ್ಯಾ*ಚಾರ - ಸಲಿಂಗಿ ಸಂಗಾತಿಯ ಮರ್ಮಾಂಗಕ್ಕೆ ಇರಿದ ವ್ಯಕ್ತಿ
male partner: ತನ್ನ ಆರು ವರ್ಷದ ಮಗಳ ಮೇಲೆ ಬಲತ್ಕಾರಕ್ಕೆ ಯತ್ನಿಸಿದ ತನ್ನ ಸಲಿಂಗಿ ಸಂಗಾತಿಯ ಮರ್ಮಾಂಗಕ್ಕೆ ಇರಿದಂತಹ ಘಟನೆ ಉತ್ತರ ಪ್ರದೇಶದ ದಿಯೋರಿಯಾದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಆರು ವರ್ಷದ ಮಗಳ ಜೊತೆ ತನ್ನ ಸಲಿಂಗಿ ಸಂಗಾತಿ ಜೊತೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದ.
Karnataka News Live 26 October 2025ಸೌದಿ ಜೈಲಿನಲ್ಲಿದ್ದ ಜಾಕೀರನನ್ನು ಭಾರತಕ್ಕೆ ಕರೆತಂದು ಮರುಜೀವ ನೀಡಿದ ಮಲೆಯಾಳಿ ನರ್ಸ್ ಮೋನಿಷಾ!
ಸೌದಿಯಲ್ಲಿ ಗುತ್ತಿಗೆ ಅವಧಿ ಮುಗಿದು ಜೈಲುಪಾಲಾಗಿ, ಪಾರ್ಶ್ವವಾಯುವಿಗೆ ತುತ್ತಾಗಿದ್ದ ಆಂಧ್ರಪ್ರದೇಶದ ವ್ಯಕ್ತಿಗೆ ಮಲಯಾಳಿ ನರ್ಸ್ ಮತ್ತು ಭಾರತೀಯ ರಾಯಭಾರ ಕಚೇರಿ ಸಹಾಯ ಮಾಡಿವೆ. ಮಾನವೀಯ ನೆಲೆಯಲ್ಲಿ, ನರ್ಸ್ ಮೋನಿಷಾ ಸದಾಶಿವಂ ಅವರು ರೋಗಿಯೊಂದಿಗೆ ಬಂದು ಕುಟುಂಬಕ್ಕೆ ಒಪ್ಪಿಸಿದ್ದಾರೆ.
Karnataka News Live 26 October 2025ಕಾಸರಗೋಡಿನಿಂದ ಕೇರಳಕ್ಕೆ ಕನ್ನಡಿಗರ ಎಚ್ಚರಿಕೆ ಕರೆಗಂಟೆ, ನ.1ರಂದು ಕಾಸರಗೋಡು ಡಿಸಿ ಕಚೇರಿ ಎದುರು ಕನ್ನಡಿಗರ ಧರಣಿ
ನ.1 ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ, ಕಾಸರಗೋಡಿನ ಕನ್ನಡಪರ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಲಿವೆ. ಈ ಸಂದರ್ಭದಲ್ಲಿ, ಮಲೆಯಾಳ ಭಾಷಾ ಹೇರಿಕೆ ವಿರೋಧ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ಸೇರಿದಂತೆ 18 ಪ್ರಮುಖ ಬೇಡಿಕೆಯನ್ನು ಕೇರಳ ಸಿಎಂಗೆ ಸಲ್ಲಿಸಲಾಗುವುದು.
Karnataka News Live 26 October 2025Bigg Boss - ಪಕ್ಕದಲ್ಲಿ ನೋಡಿದ್ರೂ ಕಾವ್ಯಾ ಇದ್ರು, ಎದುರಲ್ಲೂ ಅವ್ರೇ, ಏನ್ಮಾಡ್ಲಿ? ಸುದೀಪ್ ಮುಂದೆ ಗಿಲ್ಲಿ ಫುಲ್ ಕನ್ಫ್ಯೂಷನ್
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಅವರ ಬಾಂಧವ್ಯ ಗಮನ ಸೆಳೆಯುತ್ತಿದೆ. ಕಾವ್ಯಾ ಮಾತಿಗೆ ಕ್ಲೀನ್ ಶೇವ್ ಮಾಡಿಸಿಕೊಂಡ ಗಿಲ್ಲಿಯನ್ನು, ದೀಪಾವಳಿ ದಿನ ಕಾವ್ಯಾಳನ್ನೇ ನೋಡುತ್ತಿದ್ದ ವಿಚಾರವಾಗಿ ಸುದೀಪ್ ತಮಾಷೆ ಮಾಡಿ ಕಾಲೆಳೆದಿದ್ದಾರೆ.
Karnataka News Live 26 October 2025Bigg Boss ಮನೆಯ ಈ ಜಗಳವೇ ಈಗ ನಂಬರ್ 1 ಟ್ರೆಂಡಿಂಗ್! ಇಡೀ ಇಂಟರ್ನೆಟ್ ಸೌಂಡ್ ಮಾಡ್ತಿದೆ ಈ ಒಂದು ಸೀನ್!
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಜಗಳಗಳು, ಕಾಮಿಡಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಚಿಕ್ಕ ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಇದನ್ನು ರೀಲ್ಸ್ ಮಾಡುತ್ತಿದ್ದಾರೆ, ಡ್ಯಾನ್ಸ್ ಮಾಡುತ್ತಿದ್ದಾರೆ.
Karnataka News Live 26 October 2025ಉತ್ತರ ಕನ್ನಡ - ಗೋವಾ ಆಳ ಸಮುದ್ರದಲ್ಲಿ ಸಂಪರ್ಕಕ್ಕೆ ಸಿಗದೆ ಮಿಸ್ ಆಗಿದ್ದ ಹಡಗು ಸಹಿತ 31 ಮೀನುಗಾರರ ರಕ್ಷಣೆ
ಆಳ ಸಮುದ್ರದಲ್ಲಿ ತಾಂತ್ರಿಕ ದೋಷದಿಂದ ತೂಫಾನಿಗೆ ಸಿಲುಕಿದ್ದ ಗೋವಾದ “ಐಎಫ್‌ಬಿ ಸಂತ ಆಂಟನಿ” ಬೋಟ್‌ನಲ್ಲಿದ್ದ 31 ಮೀನುಗಾರರನ್ನು ಭಾರತೀಯ ತಟ ರಕ್ಷಣಾ ಪಡೆ ಯಶಸ್ವಿಯಾಗಿ ರಕ್ಷಿಸಿದೆ. ಮೀನುಗಾರರನ್ನು ರಕ್ಷಿಸಿದ ನಂತರ ಹಾನಿಗೊಳಗಾದ ಬೋಟ್‌ನ್ನು ಹೊನ್ನಾವರ ಬಂದರಿಗೆ ಎಳೆದು ತರಲಾಯಿತು.
Karnataka News Live 26 October 2025ಮೆಜೆಸ್ಟಿಕ್ ಹತ್ತಿರಕ್ಕೆ ಹೈಕೋರ್ಟ್ ಶಿಫ್ಟ್; ದೊಡ್ಡ ಜಾಗದಲ್ಲಿರುವ ರೇಸ್ ಕೋರ್ಸ್ ಹೊರವಲಯಕ್ಕೆ ಕಿಕ್ ಔಟ್!
ಹೈಕೋರ್ಟ್ ಸ್ಥಳಾಂತರಕ್ಕೆ ರೇಸ್ ಕೋರ್ಸ್ ಜಾಗ ಬಳಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಬ್ಬನ್ ಪಾರ್ಕ್ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಬ್ಬನ್ ಪಾರ್ಕ್ ಅಭಿವೃದ್ಧಿಗೆ 5 ಕೋಟಿ, ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ ಘೋಷಿಸಿದರು.
Karnataka News Live 26 October 2025Naa Ninna Bidalaare ಸೀರಿಯಲ್ ಬಿಡಲು ಕಾರಣ ಕೊಟ್ಟ ಮಾಯಾ! ತೆರೆಯ ಮೇಲೆ ಅಬ್ಬರದಿಂದ ಕಮ್ಬ್ಯಾಕ್
Karnataka News Live 26 October 2025ನಾನು ಪ್ರತಿ ತಿಂಗಳು ಒಂದು ಯುದ್ಧ ನಿಲ್ಲಿಸಿದ್ದೇನೆ, ಈಗ ಪಾಕ್-ಅಫ್ಘಾನ್ ಸಮಸ್ಯೆ ಶೀಘ್ರ ಬಗೆಹರಿಸುತ್ತೇನೆ - ಟ್ರಂಪ್
Donald Trump on Pakistan-Afghanistan conflict: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪಾಕಿಸ್ತಾನ- ಅಫ್ಘಾನಿಸ್ತಾನ ಸಂಘರ್ಷ ಶೀಘ್ರದಲ್ಲೇ ಕೊನೆಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಮಲೇಷ್ಯಾದಲ್ಲಿ ಮಾತನಾಡಿದ ಅವರು, ತಮ್ಮ ಆಡಳಿತವು ಈಗಾಗಲೇ 8 ಯುದ್ಧ ನಿಲ್ಲಿಸಿದೆ ಎಂದು ಹೇಳಿಕೊಂಡಿದ್ದಾರೆ.