11:54 PM (IST) Sep 21

karnataka news live 21st sept 2025ನಾಲ್ಕು ವರ್ಷದ ಮಗುವನ್ನ ಕಲ್ಲಿನಿಂದ ಜಜ್ಜಿ ಕೊಂದ 15 ವರ್ಷದ ಬಾಲಕ!

ದೆಹಲಿ ಕ್ರೈಂ ಅಲರ್ಟ್: ಆನಂದ್ ಪರ್ವತ್‌ನಲ್ಲಿ 15 ವರ್ಷದ ಹುಡುಗನೊಬ್ಬ 4 ವರ್ಷದ ಮಗುವನ್ನು ಕಲ್ಲಿನಿಂದ ಹೊಡೆದು ಕೊಂದಿದ್ದೇಕೆ? ಸೇಡಿನ ಕಿಚ್ಚು ಇಷ್ಟು ಭಯಾನಕವೇ? ಮಗು ಐಸಿಯುನಲ್ಲಿದ್ದು ನಂತರ ಸಾವನ್ನಪ್ಪಿದೆ. ಆರೋಪಿಯನ್ನು ಬಾಲಾಪರಾಧಿ ತಿದ್ದುಪಡಿ ಕೇಂದ್ರಕ್ಕೆ ಕಳುಹಿಸಲಾಗಿದೆ. 

Read Full Story
11:17 PM (IST) Sep 21

karnataka news live 21st sept 2025ಫ್ರೆಂಚ್ ಮಹಿಳೆಯರು ಚಾಕೊಲೇಟ್, ಬಟರ್ ತಿಂದ್ರೂ ದಪ್ಪವಾಗುವುದಿಲ್ಲ ಏಕೆ? ಪ್ರಸಿದ್ಧ ಲೇಖಕಿ ರಿವೀಲ್

ಬ್ರೆಡ್, ಚೀಸ್, ವೈನ್‌ನಂತಹ ಆಹಾರಗಳನ್ನು ಸೇವಿಸಿದರೂ ಫ್ರೆಂಚ್ ಮಹಿಳೆಯರು ತೆಳ್ಳಗಿರುವುದರ ಹಿಂದಿನ ಕಾರಣವನ್ನು ಲೇಖಕಿ ಮಿರೆಲ್ಲೆ ಗಿಲಿಯಾನೊ ವಿವರಿಸಿದ್ದಾರೆ. ಅವರ ಪ್ರಕಾರ, ಸಂತೋಷಕ್ಕಾಗಿ, ನಿಧಾನವಾಗಿ ಮತ್ತು ಸರಿಯಾದ ಪ್ರಮಾಣದಲ್ಲಿ ತಿನ್ನುವುದೇ ಅವರ ತೆಳ್ಳಗಿನ ದೇಹದ ರಹಸ್ಯವಾಗಿದೆ.
Read Full Story
09:40 PM (IST) Sep 21

karnataka news live 21st sept 2025ಎರಡು ತಿಂಗಳ ಕಂದಮ್ಮ ಕಾಣೆಯಾದ ಬಗ್ಗೆ ತಾಯಿ ದೂರು, ತನಿಖೆ ವೇಳೆ ಬೆಚ್ಚಿಬಿದ್ದ ಪೊಲೀಸರು!

ಬಳ್ಳಾರಿಯ ತೋರಣಗಲ್ಲಿನಲ್ಲಿ, ಹೆಣ್ಣು ಮಗು ಹುಟ್ಟಿತೆಂಬ ಕಾರಣಕ್ಕೆ ತಾಯಿಯೊಬ್ಬಳು ತನ್ನ ಎರಡು ತಿಂಗಳ ಶಿಶುವನ್ನು ಕಾಲುವೆಗೆ ಎಸೆದು ಕೊಲೆ ಮಾಡಿದ್ದಾಳೆ. ಮಗು ಕಾಣೆಯಾಗಿದೆ ಎಂದು ನಾಟಕವಾಡಿದ ಆರೋಪಿ ತಾಯಿಯನ್ನು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಬಂಧಿಸಿದ್ದಾರೆ.

Read Full Story
09:22 PM (IST) Sep 21

karnataka news live 21st sept 2025ಯುವ ದಸರಾದಲ್ಲಿ ಧೂಳೆಬ್ಬಿಸಿದ ಚಿಪ್ಸ್ ಮಾರೋ ಹುಡುಗನ ಡಾನ್ಸ್.. ಸಾಥ್ ಕೊಟ್ಟ ಮೈಸೂರ್ ಹುಡ್ಗಿ... ವೀಡಿಯೋ ಭಾರಿ ವೈರಲ್

ಮೈಸೂರಿನ ಯುವ ದಸರಾ ವೇದಿಕೆ ಹೊರಗೆ, ಚಿಪ್ಸ್ ಮಾರುವ ಯುವಕ ಮತ್ತು ಕಾಲೇಜು ಯುವತಿಯೊಬ್ಬರು 'ಹಂಗೆ ಕುಣಿರೋ ಹಿಂಗೆ ಕುಣಿರೋ' ಹಾಡಿಗೆ ಹಾಕಿದ ಬಿಂದಾಸ್ ಡಾನ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಅನಿರೀಕ್ಷಿತ ನೃತ್ಯ ಜುಗಲ್ಬಂದಿಯ ವೀಡಿಯೋಗೆ ಜನರಿಂದ ಶ್ಲಾಘನೆ ವ್ಯಕ್ತವಾಗಿದೆ.

Read Full Story
09:11 PM (IST) Sep 21

karnataka news live 21st sept 2025Asia Cup ಭಾರತ ಪಾಕಿಸ್ತಾನ ಪಂದ್ಯದಲ್ಲಿ ವಿವಾದ, ಅಂಪೈರ್ ವಿರುದ್ಧ ಸಿಡಿದೆದ್ದ ಫಕಾರ್, ವಿಡಿಯೋ

Asia Cup ಭಾರತ ಪಾಕಿಸ್ತಾನ ಪಂದ್ಯದಲ್ಲಿ ವಿವಾದ, ಅಂಪೈರ್ ವಿರುದ್ಧ ಸಿಡಿದೆದ್ದ ಫಕಾರ್, ನೀಡಿದ ತೀರ್ಪಿನ ವಿರುದ್ದ ಆಕ್ರೋಶ ಹೊರಹಾಕಿದ್ದು ಮಾತ್ರವಲ್ಲ, ಭಾರಿ ವಿವಾದವಾಗಿ ಮಾರ್ಪಟ್ಟಿದೆ, ಅಷ್ಟಕ್ಕೂ ಏನಿದು ವಿವಾದ, ವಿಡಿಯೋದಲ್ಲಿ ಏನಿದೆ?

Read Full Story
09:09 PM (IST) Sep 21

karnataka news live 21st sept 2025ವಿಶ್ವವಿಖ್ಯಾತ ಮೈಸೂರು ದಸರಾ ಆರಂಭ, ನಾಳೆ ಎಲ್ಲೆಲ್ಲಿ ಏನೇನು? ಕಾರ್ಯಕ್ರಮದ ವಿವರ ಇಲ್ಲಿದೆ

Mysuru Dasara 2025: 415ನೇ ನಾಡಹಬ್ಬ ಮೈಸೂರು ದಸರಾಕ್ಕೆ ಲೇಖಕಿ ಬಾನು ಮುಸ್ತಾಕ್ ಚಾಮುಂಡಿ ಬೆಟ್ಟದಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಮತ್ತೊಂದೆಡೆ, ಮೈಸೂರು ಅರಮನೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರತ್ನಖಚಿತ ಸಿಂಹಾಸನ ಏರಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ.

Read Full Story
09:02 PM (IST) Sep 21

karnataka news live 21st sept 2025ಬಲ್ ನನ್ಮಗ ಈ ಆಕಾಶ್; ತಂದೆಯನ್ನೇ ಬಾಡಿಗೆ ಅಪ್ಪನಾಗಿ ಮಾಡ್ಕೊಂಡ! ಗೌತಮ್ ಭಾವುಕ ನಟನೆಗೆ ವೀಕ್ಷಕರ ಕಣ್ಣೀರು!

ಅಮೃತಧಾರೆ ಧಾರಾವಾಹಿಯ ಇತ್ತೀಚಿನ ಸಂಚಿಕೆಯಲ್ಲಿ, ಗೌತಮ್ ತನ್ನ ಮಗ ಆಕಾಶ್‌ನನ್ನು ಅನಿರೀಕ್ಷಿತವಾಗಿ ಭೇಟಿಯಾಗುತ್ತಾನೆ. ತನ್ನೊಂದಿಗಿದ್ದ ಹುಡುಗನೇ ತನ್ನ ಮಗ ಎಂದು ತಿಳಿದು ಗೌತಮ್ ಭಾವುಕನಾಗಿದ್ದು, ತಂದೆ-ಮಗನ ಈ ಭಾವುಕ ಮಿಲನದ ದೃಶ್ಯ ವೀಕ್ಷಕರ ಮನಗೆದ್ದಿದೆ.

Read Full Story
08:10 PM (IST) Sep 21

karnataka news live 21st sept 2025ಪಾಕಿಸ್ತಾನಕ್ಕೆ ಹೋಗು ಅಂದವರಿಗೆ ದಿಟ್ಟ ಉತ್ತರ ನೀಡಿದ್ದ ಸುಹಾನಾ ಸೈಯದ್ ಹಿಂದಿನ ಕಥೆ; ಹಳೆ ಪೋಸ್ಟ್ ವೈರಲ್

ಪೌರತ್ವ ತಿದ್ದುಪಡಿ ಕಾಯ್ದೆ ಹೋರಾಟದ ವೇಳೆ 'ಪಾಕಿಸ್ತಾನಕ್ಕೆ ಹೋಗು' ಎಂದವರಿಗೆ, ತಮ್ಮ ಜಾತ್ಯತೀತ ನಿಲುವು ಮತ್ತು ಭಾರತೀಯತೆಯ ಬಗ್ಗೆ ಸುದೀರ್ಘವಾಗಿ ಉತ್ತರಿಸಿದ್ದರು. ಆ ದಿಟ್ಟ ಉತ್ತರ ಹಾಗೂ ಅವರ ಭಾವನೆಗಳ ಸಂಪೂರ್ಣ ವಿವರ ಇಲ್ಲಿದೆ.

Read Full Story
08:02 PM (IST) Sep 21

karnataka news live 21st sept 2025ಕೂಡಲಸಂಗಮ ಸ್ವಾಮೀಜಿ ವಿರುದ್ಧ ಸಿಡಿ ಬಾಂಬ್ ಹಾಕಿದ ಕಾಶೆಪ್ಪನವರ್!

ಕೂಡಲಸಂಗಮ ಪಂಚಮಸಾಲಿ ಪೀಠದಿಂದ ಬಸವ ಜಯ ಮೃತ್ಯುಂಜಯ ಸ್ವಾಮೀಜಿಯನ್ನು ಉಚ್ಚಾಟಿಸಲಾಗಿದೆ ಎಂದು ವಿಜಯಾನಂದ ಕಾಶಪ್ಪನವರ ಘೋಷಿಸಿದ್ದಾರೆ. ಸ್ವಾಮೀಜಿಗಳ ಸಿಡಿ ಹಾಗೂ ಆಸ್ತಿಗಳ ಬಗ್ಗೆ ಸಮಯ ಬಂದಾಗ ದಾಖಲೆ ಸಮೇತ ಬಯಲು ಮಾಡುವುದಾಗಿ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ. 

Read Full Story
07:56 PM (IST) Sep 21

karnataka news live 21st sept 2025ನಿತಿನ್‌ ಶಿವಾಂಶ್‌ ಜೊತೆ ಈಗ ಲವ್;‌ ಸರಿಗಮಪದಿಂದ ಕುಂಕುಮದವರೆಗೆ ಸುಹಾನಾ ಸೈಯದ್ ಎದುರಿಸಿದ ಕಾಂಟ್ರವರ್ಸಿಗಳಿವು

Suhaana Syed Saregamapa Controversy:‌ ಸರಿಮಗಪ ರಿಯಾಲಿಟಿ ಶೋನಲ್ಲಿ ಹಾಡಿದ ಮೊದಲ ಹಾಡಿನಿಂದ ಹಿಡಿದು, ಇಲ್ಲಿಯವರೆಗೆ ಸಾಕಷ್ಟು ಕಾಂಟ್ರವರ್ಸಿಗಳು ಬೆನ್ನು ಬಿದ್ದಿದ್ದರೂ ಕೂಡ ಅವುಗಳಿಗೆ ಸವಾಲಾಗಿ ನಿಂತ ಸುಹಾನಾ ಸೈಯದ್‌ ಈಗ ಲವ್‌ನಲ್ಲಿದ್ದಾರೆ. ಹಾಗಾದರೆ ಅವರು ಎದುರಿಸಿದ ಕಾಂಟ್ರವರ್ಸಿಗಳು ಯಾವುವು?

Read Full Story
07:50 PM (IST) Sep 21

karnataka news live 21st sept 2025ಬೇಲೂರಿನಲ್ಲಿ ಗಣಪತಿಗೆ ಚಪ್ಪಲಿ ಇಟ್ಟ ಲೀಲಮ್ಮನನ್ನ ಬಂಧಿಸಿದ ಪೊಲೀಸರು; ನಾಳೆ ಬೇಲೂರು ಬಂದ್‌ಗೆ ಕರೆ!

ಬೇಲೂರಿನ ವರಸಿದ್ಧಿ ವಿನಾಯಕನ ಮೂರ್ತಿಗೆ ಚಪ್ಪಲಿ ಇಟ್ಟು ಅಪಮಾನ ಮಾಡಿದ ಪ್ರಕರಣದಲ್ಲಿ, ಪೊಲೀಸರು ಲೀಲಮ್ಮ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ. ಆರೋಪಿಯು ಮಾನಸಿಕವಾಗಿ ಅಸ್ವಸ್ಥಳಾಗಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರೆದಿದೆ. ಈ ಘಟನೆ ಖಂಡಿಸಿ ಹಿಂದೂ ಸಂಘಟನೆಗಳು ಬೇಲೂರು ಬಂದ್‌ಗೆ ಕರೆ ನೀಡಿವೆ.

Read Full Story
07:10 PM (IST) Sep 21

karnataka news live 21st sept 2025'ನನ್ನೊಬ್ಬನ ನಿರ್ಣಯ ಅಲ್ಲ..' ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ, ಕಾಶೆಪ್ಪನವರ್ ಸ್ಫೋಟಕ ಹೇಳಿಕೆ!

ಬಸವ ಜಯ ಮೃತ್ಯುಂಜಯ ಸ್ವಾಮೀಜಿಯನ್ನು ಕೂಡಲಸಂಗಮ ಪೀಠದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಉಚ್ಚಾಟನೆಗೆ ಕಾರಣಗಳೇನು ತಿಳಿಯಿರಿ

Read Full Story
07:08 PM (IST) Sep 21

karnataka news live 21st sept 2025ಸರಿಗಮಪ ಖ್ಯಾತಿಯ ಸುಹಾನಾ ಪ್ರೀತಿಯ ಪೋಸ್ಟ್‌ಗೆ ನೆಟ್ಟಿಗರು ಮಾಡಿದ ಕಮೆಂಟ್ ಏನು?

ಸುಹಾನಾ ಪ್ರೀತಿಯ ಪೋಸ್ಟ್‌: ಸರಿಗಮಪ ಸೀಸನ್ 13ರ ಖ್ಯಾತಿಯ ಗಾಯಕಿ ಸುಹಾನಾ ಸೈಯದ್, 'ಶ್ರೀಕಾರ' ಹಾಡಿನ ಮೂಲಕ ಚರ್ಚೆಗೆ ಗ್ರಾಸವಾಗಿದ್ದರು. ಇದೀಗ ತಮ್ಮ ಬದುಕಿನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದು, ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಜೊತೆಗಿನ ತಮ್ಮ ಪ್ರೇಮವನ್ನು ಜಗತ್ತಿಗೆ ಸಾರಿದ್ದಾರೆ.

Read Full Story
07:06 PM (IST) Sep 21

karnataka news live 21st sept 2025ಮೈಸೂರು ದಸರಾ ಆನೆಗಳು ಆನೆ ಲದ್ದಿ ಹಾಕಿದಾಕ್ಷಣ ಜನರು ಬರಿಗಾಲಲ್ಲಿ ತುಳಿಯೋದೇಕೆ? ಆರೋಗ್ಯಕ್ಕೂ ಉಂಟಾ ಆನೆಲದ್ದಿ ನಂಟು!

ಮೈಸೂರು ದಸರಾದಲ್ಲಿ ಆನೆ ಲದ್ದಿ ತುಳಿಯುವ ವಿಡಿಯೋ ವೈರಲ್ ಆಗಿದ್ದು, ಅದರ ಆರೋಗ್ಯ ಪ್ರಯೋಜನಗಳ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಈ ಲೇಖನವು ಕಾಲು ನೋವು ನಿವಾರಣೆ, ದೇಹದ ಉಷ್ಣಾಂಶ ಕಡಿಮೆ ಮಾಡುವಂತಹ ಜಾನಪದ ನಂಬಿಕೆಗಳನ್ನು ಮತ್ತು ಇದರ ಹಿಂದಿನ ವೈಜ್ಞಾನಿಕ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತದೆ.
Read Full Story
06:39 PM (IST) Sep 21

karnataka news live 21st sept 2025ಇದಪ್ಪಾ ಸಾಧನೆ ಅಂದ್ರೆ.. ಹಿಂದಿ ಸೀರಿಯಲ್‌ ಹೀರೋಯಿನ್‌ ಆದ ಉಡುಪಿ ಮೂಲದ ನಟಿ! ಯಾರದು?

ಉಡುಪಿ ಮೂಲದ ನಟಿ ಈಗ ಹಿಂದಿ ಧಾರಾವಾಹಿಯಲ್ಲಿ ಹೀರೋಯಿನ್‌ ಆಗುವ ಅವಕಾಶವನ್ನು ಪಡೆದಿದ್ದಾರೆ. ಈ ಮೂಲಕ ಅವರ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳು ಸೀರಿಯಲ್‌ಗಳಲ್ಲಿ ಕೂಡ ಆ ನಟಿ ನಟಿಸಿದ್ದಾರೆ, ಹಾಗಾದರೆ ಅವರು ಯಾರು?

Read Full Story
06:27 PM (IST) Sep 21

karnataka news live 21st sept 2025Mahanati ವೇದಿಕೆಯಲ್ಲಿ ಪ್ರೇಮಾ-ಮಾಲಾಶ್ರೀ ಇತಿಹಾಸ ಸೃಷ್ಟಿ! ಬಿಟ್ಟ ಕಣ್ಣುಗಳಿಂದ ನೋಡಿದ ವೀಕ್ಷಕರು

36 ವರ್ಷಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಸಕ್ರಿಯರಾಗಿರುವ ನಟಿ ಮಾಲಾಶ್ರೀ ಮತ್ತು 'ಓಂ' ಖ್ಯಾತಿಯ ನಟಿ ಪ್ರೇಮಾ ಅವರ ವೃತ್ತಿಜೀವನದ ಬಗ್ಗೆ ಈ ಲೇಖನ ವಿವರಿಸುತ್ತದೆ. ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿಲ್ಲವಾದರೂ,'ಮಹಾನಟಿ' ರಿಯಾಲಿಟಿ ಶೋ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡು ಹೊಸ ದಾಖಲೆ ಸೃಷ್ಟಿಸಿದ್ದಾರೆ.

Read Full Story
06:11 PM (IST) Sep 21

karnataka news live 21st sept 2025ಟೆಂಪೋ ಡ್ರೈವರ್ ಕೊಲೆ ಯತ್ನ ಪ್ರಕರಣ - 24 ಗಂಟೆಯೊಳಗೆ ಐವರು ಆರೋಪಿಗಳನ್ನ ಬಂಧಿಸಿದ ಮಲ್ಲೇಶ್ವರಂ ಪೊಲೀಸರು!

ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಟೆಂಪೋ ಡ್ರೈವರ್ ಜಾವೀದ್ ಮೇಲೆ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಐವರು ದುಷ್ಕರ್ಮಿಗಳು ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಘಟನೆ ನಡೆದ 24 ಗಂಟೆಯೊಳಗೆ ಮಲ್ಲೇಶ್ವರಂ ಪೊಲೀಸರು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Read Full Story
05:50 PM (IST) Sep 21

karnataka news live 21st sept 2025ಚಿಕ್ಕಮಗಳೂರಿನಿಂದ ಬಂದು ಬೇಲೂರು ಗಣಪನಿಗೆ ಚಪ್ಪಲಿ ಹಾಕಿಹೋದ ಮಾನಸಿಕ ಅಸ್ವಸ್ಥೆ, ಈಗ ಪೊಲೀಸರಿಗೆ ಲಾಕ್!

ಬೇಲೂರಿನ ಪ್ರಸಿದ್ಧ ಚೆನ್ನಕೇಶವ ದೇವಾಲಯದ ಗಣಪತಿ ವಿಗ್ರಹಕ್ಕೆ ಚಪ್ಪಲಿ ಹಾಕಿ ಅಪಮಾನ ಮಾಡಿದ್ದ ಚಿಕ್ಕಮಗಳೂರಿನ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪತ್ತೆಯಾದ ಈ ಮಹಿಳೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರಬಹುದು ಎನ್ನಲಾಗುತ್ತಿದೆ.

Read Full Story
05:43 PM (IST) Sep 21

karnataka news live 21st sept 2025ಜನ್ಮ ದಿನಕ್ಕೆ ಅನುಗುಣವಾಗಿ ನಾಳೆಯಿಂದ ನಿಮ್ಮ ಭವಿಷ್ಯ ಹೇಗಿದೆ? ಯಾವ ಕಾರ್ಯ ಆರಂಭಿಸಬಹುದು?

ಈ ಲೇಖನವು ಸಂಖ್ಯಾಶಾಸ್ತ್ರದ ಆಧಾರದ ಮೇಲೆ ನಿಮ್ಮ ಜನ್ಮದಿನಾಂಕಕ್ಕೆ ಅನುಗುಣವಾಗಿ ಸೆಪ್ಟೆಂಬರ್ 22 ರಿಂದ 28ರವರೆಗಿನ ವಾರ ಭವಿಷ್ಯವನ್ನು ನೀಡುತ್ತದೆ. ಸಂಖ್ಯೆ 1 ರಿಂದ 9 ರವರೆಗಿನ ಜನರಿಗೆ ವೃತ್ತಿ, ಆರೋಗ್ಯ, ಮತ್ತು ಆರ್ಥಿಕ ಜೀವನದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಇಲ್ಲಿ ವಿವರವಾದ ಮಾಹಿತಿ ಇದೆ.
Read Full Story
05:28 PM (IST) Sep 21

karnataka news live 21st sept 2025ನಿತಿನ್ ಜೊತೆಗಿನ ಪ್ರೇಮ ಪಯಣದ ಗುಟ್ಟು ಹಂಚಿಕೊಂಡ ಸರಿಗಮಪ ಶೋ ಗಾಯಕಿ ಸುಹಾನಾ ಸೈಯದ್

 'ಸರಿಗಮಪ' ವೇದಿಕೆಯಲ್ಲಿ ಸಂಚಲನ ಸೃಷ್ಟಿಸಿದ್ದ ಗಾಯಕಿ ಸುಹಾನಾ ಸೈಯದ್, ಇದೀಗ ತಮ್ಮ ಪ್ರೀತಿಯ ವಿಷಯವನ್ನು ಬಹಿರಂಗಪಡಿಸಿದ್ದಾರೆ. ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಅವರೊಂದಿಗೆ ತಮ್ಮ ಮುಂದಿನ ಜೀವನವನ್ನು ಕಳೆಯುವ ನಿರ್ಧಾರವನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

Read Full Story