ಮ್ಯಾಂಚೆಸ್ಟರ್(ಆ.03]: ಭಾರತ ತಂಡದ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಭುಜದ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಇಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾದರು ಎಂದು ಬಿಸಿಸಿಐ ತನ್ನ ಟ್ವೀಟರ್ ಖಾತೆಯಲ್ಲಿ ತಿಳಿಸಿದೆ.

‘ಬಿಸಿಸಿಐ ವೈದ್ಯಕೀಯ ತಂಡದ ನೆರವಿನಲ್ಲಿ ಭುಜದ ಶಸ್ತ್ರ ಚಿಕಿತ್ಸೆಗೆಗೊಳಗಾಗಿರುವ ಸಾಹ ಶೀಘ್ರ ಚೇತರಿಸಿಕೊಳ್ಳಲಿ’ ಎಂದು ಬಿಸಿಸಿಐ ಹಾರೈಸಿದೆ.

ವೃದ್ಧಿಮಾನ್, ಐಪಿಎಲ್‌ನಲ್ಲಿ ಹೆಬ್ಬೆರಳಿನ ಗಾಯಕ್ಕೆ ಒಳಗಾಗಿದ್ದರು. ಆದರೆ ದ.ಆಫ್ರಿಕಾ ಪ್ರವಾಸದ ವೇಳೆ ಭುಜಕ್ಕೆ ಗಾಯಮಾಡಿಕೊಂಡಿದ್ದ ಸಾಹ, ಎನ್‌ಸಿಎ ಫಿಸಿಯೋಗಳ ನಿರ್ಲಕ್ಷ್ಯದಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾದ ಪರಿಸ್ಥಿತಿ
ಎದುರಾಯಿತು ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು. ಸಾಹ ಅನುಪಸ್ಥಿತಿಯಲ್ಲಿ ದಿನೇಶ್ ಕಾರ್ತಿಕ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಸೇರ್ಪಡೆಗೊಂಡಿದ್ದಾರೆ.