ಜಕರ್ತಾ(ಆ.27): ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಮತ್ತೊಂದು ಬೆಳ್ಳಿ ಪದಕ ಗೆದ್ದುಕೊಂಡಿದೆ. ಮಹಿಳೆಯ ಸ್ಟೀಪಲ್‌ಚೇಸ್ 300 ಮೀಟರ್ ಓಟದಲ್ಲಿ ಭಾರತದ ಸುಧಾ ಸಿಂಗ್ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.

ಸುಧಾ ಸಿಂಗ್ 09:40:03 ಅಂತರದಲ್ಲಿ ದ್ವಿತೀಯ ಸ್ಥಾನಿಯಾಗಿ ಗುರಿ ತಲುಪೋ ಮೂಲಕ  ಬೆಳ್ಳಿ ಪದಕ ಗೆದ್ದುಕೊಂಡರು. ಈ ಮೂಲಕ ಭಾರತ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ 12ನೇ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿತು. 

 

 

ಭಾರತ ಪದಕ ಪಟ್ಟಿಯಲ್ಲಿ 7 ಚಿನ್ನ, 12 ಬೆಳ್ಳಿ ಹಾಗೂ 20 ಕಂಚಿನೊಂದಿಗೆ ಒಟ್ಟು 39 ಪದಕದೊಂದಿಗೆ 9ನೇ ಸ್ಥಾನದಲ್ಲಿದೆ. ಇನ್ನು ಮೊದಲ ಸ್ಥಾನದಲ್ಲಿರುವ ಚೀನಾ 84 ಚಿನ್ನ, 60 ಬೆಳ್ಳಿ ಹಾಗೂ 40 ಕಂಚಿನೊಂದಿಗೆ ಒಟ್ಟು 184 ಪದಕ ಪಡೆದುಕೊಂಡಿದೆ.