ಲಾಹೋರ್(ಆ.23): ಬಾಲಿವುಡ್ ನಟ -ನಟಿಯರನ್ನ ಇಷ್ಟಪಡುವರು ವಿಶ್ವದೆಲ್ಲಡೆ ಇದ್ದಾರೆ. ಇದೀಗ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫಾರ್ಜ್ ಅಹಮ್ಮದ್‌ ನೆಚ್ಚಿನ ಬಾಲಿವುಡ್ ನಟಿ ಕತ್ರಿನಾ ಕೈಫ್ ಎಂದಿದ್ದಾರೆ.

ಖಾಸಗಿ ವಾಹಿನಿ ನಡೆಸಿದ ಕಾರ್ಯಕ್ರಮದಲ್ಲಿ ಸರ್ಫರಾಜ್ ಅಹಮ್ಮದ್ ನೆಚ್ಚಿನ ಹೀರೋಯಿನ್ ಪ್ರಶ್ನೆ ಕೇಳಲಾಗಿತ್ತು. ಈ ವೇಳೆ ಸರ್ಫರಾಜ್ ಕತ್ರಿನಾ ಕೈಫ್ ನೆಚ್ಚಿನ ನಟಿ ಎಂದಿದ್ದಾರೆ. ಜೊತೆಗೆ ಸಲ್ಮಾನ್ ಖಾನ್ ತುಂಬಾ ಇಷ್ಟ ಎಂದಿದ್ದಾರೆ.

ಮೂವಿಯಲ್ಲಿ ಅವಕಾಶ ಸಿಕ್ಕರೆ ಸಲ್ಮಾನ್ ಖಾನ್ ಅಭಿನಯದ ದಬಾಂಗ್ ಚಿತ್ರದ ಪಾತ್ರಗಳನ್ನ ಮಾಡಲು ಇಷ್ಟಪಡುತ್ತೇನೆ ಎಂದಿದ್ದಾರೆ. ಆದರೆ ನಟನೆ ಕಷ್ಟ ಎಂದಿದ್ದಾರೆ.  ಜೊತೆಗೆ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಚಿತ್ರಗಳು ಹೆಚ್ಚು ಖುಷಿ ನೀಡಿದೆ ಎಂದಿದ್ದಾರೆ.