ಏಷ್ಯಾಡ್‌ ಆಯ್ಕೆ ಟ್ರಯ​ಲ್ಸ್‌​: ಅಭ್ಯಾಸ ಆರಂಭಿಸಿದ ರೆಸ್ಲ​​ರ್ಸ್‌

ದೇಶದ ಅಗ್ರ ಕುಸ್ತಿ​ಪ​ಟು​ಗಳು ಮತ್ತೆ ಕುಸ್ತಿ ಅಖಾ​ಡದಲ್ಲಿ ಕಾಣಿ​ಸಿ​ಕೊಂಡಿದ್ದಾರೆ
ಏಷ್ಯನ್‌ ಗೇಮ್ಸ್‌ ಆಯ್ಕೆ ಟ್ರಯ​ಲ್ಸ್‌ನ ಸಿದ್ಧ​ತೆ​ಗಾಗಿ ಸಾಯ್‌ನಲ್ಲಿ ಅಭ್ಯಾಸ ಆರಂಭ
ಸೋನಿ​ಪ​ತ್‌ನ ಭಾರ​ತೀಯ ಕ್ರೀಡಾ ಪ್ರಾಧಿ​ಕಾ​ರ​ದಲ್ಲಿ ಪ್ರಾಕ್ಟೀಸ್ ಶುರು

Protesting wrestlers return to training at Sonepat SAI Centre as Asian Games trials kvn

ನವ​ದೆ​ಹ​ಲಿ(ಜೂ.20): ಭಾರ​ತೀಯ ಕುಸ್ತಿ ಫೆಡ​ರೇ​ಶ​ನ್‌​(​ಡ​ಬ್ಲ್ಯು​ಎ​ಫ್‌​ಐ) ನಿರ್ಗ​ಮಿತ ಅಧ್ಯಕ್ಷ ಬ್ರಿಜ್‌​ಭೂ​ಷಣ್‌ ವಿರುದ್ಧ ಹಲವು ತಿಂಗ​ಳು​ಗ​ಳಿಂದ ಪ್ರತಿ​ಭ​ಟ​ನೆ​ಯಲ್ಲಿ ನಿರ​ತ​ರಾ​ಗಿದ್ದ ದೇಶದ ಅಗ್ರ ಕುಸ್ತಿ​ಪ​ಟು​ಗಳು ಮತ್ತೆ ಕುಸ್ತಿ ಅಖಾ​ಡದಲ್ಲಿ ಕಾಣಿ​ಸಿ​ಕೊ​ಳ್ಳು​ತ್ತಿದ್ದು, ಏಷ್ಯನ್‌ ಗೇಮ್ಸ್‌ ಆಯ್ಕೆ ಟ್ರಯ​ಲ್ಸ್‌ನ ಸಿದ್ಧ​ತೆ​ಗಾಗಿ ಸೋನಿ​ಪ​ತ್‌ನ ಭಾರ​ತೀಯ ಕ್ರೀಡಾ ಪ್ರಾಧಿ​ಕಾ​ರ​(​ಸಾ​ಯ್‌) ಕೇಂದ್ರ​ದಲ್ಲಿ ಅಭ್ಯಾಸ ಆರಂಭಿ​ಸಿ​ದ್ದಾರೆ. 

ಪ್ರತಿ​ಭ​ಟ​ನೆ​ಯಲ್ಲಿ ಮುಂಚೂ​ಣಿ​ಯ​ಲ್ಲಿದ್ದ ಭಜ​ರಂಗ್‌ ಪೂನಿಯಾ ಈಗಾ​ಗಲೇ ಅಭ್ಯಾಸದಲ್ಲಿ ತೊಡ​ಗಿ​ಸಿ​ಕೊಂಡಿ​ದ್ದರು. ಇನ್ನು, ಕಾಮ​ನ್‌​ವೆಲ್ತ್‌ ಗೇಮ್ಸ್‌ ಚಾಂಪಿ​ಯ​ನ್‌ ವಿನೇಶ್‌ ಫೋಗಟ್‌, ಗೀತಾ ಫೋಗಟ್‌ ಹಾಗೂ ಭಜ​ರಂಗ್‌ರ ಪತ್ನಿ ಸಂಗೀತಾ ಫೋಗಟ್‌ ಕೇಂದ್ರ​ದಲ್ಲಿ ತರ​ಬೇ​ತಿ​ಯಲ್ಲಿ ನಿರ​ತ​ರಾ​ಗಿ​ದ್ದಾರೆ. ಈ ಬಗ್ಗೆ ಸಾಯ್‌ ಕೇಂದ್ರದ ಅಧಿ​ಕಾ​ರಿ​ಗಳು ಹೇಳಿಕೆ ನೀಡಿದ್ದು, ಕುಸ್ತಿ​ಪ​ಟು​ಗಳು ದೀರ್ಘ ಸಮ​ಯದ ಬಳಿಕ ಎಂದಿ​ನಂತೆ ಅಭ್ಯಾಸ ನಡೆ​ಸು​ತ್ತಿ​ದ್ದಾರೆ ಎಂದಿ​ದ್ದಾರೆ.

ಇಂದಿ​ನಿಂದ ತೈಪೆ ಓಪ​ನ್‌ ಬ್ಯಾಡ್ಮಿಂಟನ್‌ ಟೂರ್ನಿ; ಎಚ್‌.​ಎ​ಸ್‌.​ಪ್ರ​ಣಯ್‌ ಮೇಲೆ ಕಣ್ಣು

ಲೈಂಗಿಕ ಕಿರು​ಕುಳ ಪ್ರಕ​ರ​ಣ​ದಲ್ಲಿ ಭಾರ​ತೀಯ ಕುಸ್ತಿ ಫೆಡ​ರೇ​ಶ​ನ್‌​(​ಡ​ಬ್ಲ್ಯು​ಎ​ಫ್‌​ಐ) ನಿರ್ಗ​ಮಿತ ಅಧ್ಯಕ್ಷ ಬ್ರಿಜ್‌​ಭೂ​ಷಣ್‌ ಸಿಂಗ್‌ ವಿರುದ್ಧ ಹೋರಾಟ ನಡೆ​ಸು​ತ್ತಲೇ ಕೇಂದ್ರ ಸರ್ಕಾ​ರದ ವಿರು​ದ್ಧವೂ ತೊಡೆ ತಟ್ಟಿದ್ದ ಕುಸ್ತಿ​ಪ​ಟು​ಗಳು ಸದ್ಯ ಸರ್ಕಾ​ರದ ವಿರು​ದ್ಧದ ತಮ್ಮ ಧೋರ​ಣೆ​ಯನ್ನು ಸಡಿ​ಲ​ಗೊ​ಳಿ​ಸಿ​ದಂತಿದೆ. ಹಲ​ವು ಗೊಂದಲ, ಟೀಕೆ ಹಾಗೂ ರಾಜ​ಕೀಯ ಪ್ರೇರಿ​ತ​ವೆಂಬ ಆರೋ​ಪ​ಗ​ಳಿಗೆ ಕಾರ​ಣ​ವಾ​ಗಿದ್ದ ತಮ್ಮ ಹೋರಾ​ಟದ ಬಗ್ಗೆ ಸ್ಪಷ್ಟೀ​ಕ​ರಣ ನೀಡು​ವು​ದರ ಜೊತೆಗೆ, ತಮ್ಮ ಪ್ರತಿ​ಭ​ಟನೆ ಕೇಂದ್ರ ಸರ್ಕಾರದ ವಿರುದ್ಧ ಅಲ್ಲ, ಬ್ರಿಜ್‌ ವಿರುದ್ಧ ಮಾತ್ರ​ ಎಂದೂ ಹೇಳಿ​ದ್ದಾರೆ. ಅಲ್ಲದೇ, ಈ ಹೋರಾ​ಟಕ್ಕೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧ​ವಿಲ್ಲ ಎಂದೂ ಸ್ಪಷ್ಟ​ಪ​ಡಿ​ಸಿ​ದ್ದಾರೆ.

ಏಪ್ರಿಲ್‌ ತಿಂಗ​ಳಾಂತ್ಯ​ದಲ್ಲಿ ಕುಸ್ತಿ​ಪ​ಟು​ಗಳು ಜಂತ​ರ್‌​ಮಂತ​ರ್‌​ನಲ್ಲಿ ಪ್ರತಿ​ಭ​ಟನೆ ಆರಂಭಿ​ಸಿ​ದಾಗ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ, ದೆಹಲಿ ಮುಖ್ಯ​ಮಂತ್ರಿ ಅರ​ವಿಂದ್‌ ಕೇಜ್ರಿ​ವಾಲ್‌, ಜಮ್ಮು-ಕಾಶ್ಮೀರ ಮಾಜಿ ರಾಜ್ಯ​ಪಾಲ ಸತ್ಯ​ಪಾಲ್‌ ಮಲಿಕ್‌ ಹಾಗೂ ಇತರ ಕೆಲ ಕಾಂಗ್ರೆಸ್‌ ನಾಯ​ಕರು ಕುಸ್ತಿ​ಪ​ಟು​ಗ​ಳ ಬೆಂಬ​ಲಕ್ಕೆ ನಿಂತಿ​ದ್ದರು. ಇದು ಪ್ರತಿ​ಭ​ಟನೆ ರಾಜ​ಕೀಯ ಬಣ್ಣ ಪಡೆ​ಯಲು ಪ್ರಮುಖ ಕಾರ​ಣ​ವಾ​ಗಿತ್ತು. ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ ನೂತನ ಸಂಸ​ತ್‌ ಉದ್ಘಾ​ಟಿ​ಸುವ ದಿನವೇ ಅಲ್ಲಿಗೆ ಮುತ್ತಿಗೆ ಹಾಕಲು ಯತ್ನಿ​ಸಿ​ದ್ದು ಕೂಡಾ ಪ್ರತಿ​ಭ​ಟ​ನೆ ರಾಜ​ಕೀಯ ಪ್ರೇರಿ​ತವೆಂಬ ಚರ್ಚೆ ಹುಟ್ಟು​ಹಾ​ಕಿ​ತ್ತು.

ನಾನು ಯುಎಸ್‌ ಓಪನ್‌ ಗೆಲ್ಲ​ಬಾ​ರ​ದಿ​ತ್ತು: ಎಮ್ಮಾ!

ಲಂಡ​ನ್‌: ಟೆನಿ​ಸ್‌ನ ಯುವ ತಾರೆ, ತಮ್ಮ 18ನೇ ವಯ​ಸ್ಸಲ್ಲೇ 2021ರ ಯುಎಸ್‌ ಓಪ​ನ್‌ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದಿದ್ದ ಬ್ರಿಟ​ನ್‌ನ ಎಮ್ಮಾ ರಾಡು​ಕಾನು, ತಾವು ಯುಎಸ್‌ ಓಪ​ನ್‌​ನಲ್ಲಿ ಗೆಲ್ಲಬಾ​ರ​ದಿತ್ತು ಎಂದು ಹಲವು ಬಾರಿ ಯೋಚಿ​ಸು​ವಂತಾ​ಗಿದೆ ಎಂದು ಅಚ್ಚ​ರಿಯ ಹೇಳಿಕೆ ನೀಡಿ​ದ್ದಾರೆ. 

ಈ ಬಗ್ಗೆ ಮಾತ​ನಾ​ಡಿ​ರುವ ಅವರು, ‘ನಾನು ದೈಹಿ​ಕ​ವಾಗಿ ಹಲವು ಬಾರಿ ಗಾಯ​ಗೊಂಡಿ​ದ್ದೇನೆ. ಆದ​ರೆ ಮಾನ​ಸಿ​ಕ​ವಾಗಿ ಉಂಟಾ​ಗುವ ನೋವು ಸಹಿ​ಸ​ಲಾ​ಗು​ತ್ತಿ​ಲ್ಲ. ನನ್ನ ಸಾಧನೆಯನ್ನೇ ಹೆಚ್ಚಾಗಿ ಹಚ್ಚಿ​ಕೊಂಡಿ​ದ್ದೇನೆ. ಪ್ರೇಕ್ಷ​ಕ​ರಲ್ಲೂ ನನ್ನ ಬಗ್ಗೆ ಹೆಚ್ಚಿನ ನಿರೀಕ್ಷೆ ಇದೆ. ಹೀಗಾಗಿ ಕೆಲ​ವೊಮ್ಮೆ ಸೋತಾಗ ನಾನು ಸಂಪೂರ್ಣ ಕುಗ್ಗಿ ಹೋಗು​ತ್ತೇನೆ. ಯುಎಸ್‌ ಓಪನ್‌ ಗೆದ್ದ ಬಳಿಕ ನಾನು ತುಂಬಾ ಕಷ್ಟಅನು​ಭ​ವಿ​ಸಿ​ದ್ದೇ​ನೆ​’ ಎಂದಿ​ದ್ದಾ​ರೆ.

Latest Videos
Follow Us:
Download App:
  • android
  • ios