ಸಿನಿಮೀಯ ರೀತಿಯಲ್ಲಿ ಕ್ಯಾಂಟರ್ ವಾಹನವೊಂದನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಕಣ್ಣಿಗೆ ಖಾರದಪುಡಿ ಎರಚಿ ಅದರಲ್ಲಿದ್ದ ₹32 ಲಕ್ಷ ನಗದು ಹಣವನ್ನು ದುಷ್ಕರ್ಮಿಗಳು ದರೋಡೆ ಮಾಡಿರುವ ಘಟನೆ ಜಿಲ್ಲೆಯ ಕೊಲ್ಹಾರ ಪಟ್ಟಣದ ಹೊರ ಭಾಗದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
CRIME May 19, 2024, 6:28 PM IST
ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇರ ಕೊಲೆ ಪ್ರಕರಣ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಕೊಲೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ, ಎನ್ಕೌಂಟರ್ ಮಾಡುವಂತೆ ರಾಜ್ಯಾದ್ಯಂತ ಸಂಘ ಸಂಸ್ಥೆಗಳು, ನಾಗರಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಂಜಲಿ ಕುಟುಂಬಸ್ಥರಿಗೆ ಗಣ್ಯರು ಆರ್ಥಿಕ ಸಹಾಯ ನೀಡಿ ಸಾಂತ್ವನ ಹೇಳುತ್ತಿದ್ದಾರೆ. ಈ ನಡುವೆ ಹುಕ್ಕೇರಿ ಪಟ್ಟಣದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಸಹ ಅಂಜಲಿ ಕುಟುಂಬಸ್ಥರ ಬೆನ್ನಿಗೆ ನಿಂತಿದ್ದಾರೆ.
state May 19, 2024, 3:20 PM IST
ಹುಬ್ಬಳ್ಳಿ-ಧಾರವಾಡದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಪೊಲೀಸರು ವರ್ಗಾವಣೆಗೆ ದುಡ್ಡು ಕೊಟ್ಟು ಬರುವಂತಾಗಿದೆ. ಇಂಥವರು ದುಡ್ಡು ಎಲ್ಲಿಂದ ತೆಗಿಬೇಕು? ಕ್ರಿಮಿನಲ್ಗಳಿಂದ ಹಣ ವಸೂಲಿ ಮಾಡ್ತಾರೆ ಎಂದು ಶಾಸಕ ಅರವಿಂದ ಬೆಲ್ಲದ್ ಪೊಲೀಸರ ಕಾರ್ಯವೈಖರಿಗೆ ಕಿಡಿಕಾರಿದರು.
state May 19, 2024, 1:31 PM IST
ಕೃತ್ಯದ ಬಳಿಕ ಮನೆಯಿಂದ ಪರಾರಿಯಾಗಿ, ಗ್ರಾಮದ ಹೊರವಲಯದಲ್ಲಿ ರಾಗಿಮೆದೆಯ ಬಳಿ ಮಲಗಿದ್ದ ಕೃಷ್ಣಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.
CRIME May 19, 2024, 12:42 PM IST
ರೇವತಿ ನಕ್ಷತ್ರದಲ್ಲಿ ಮಂಗಳ ಗ್ರಹದ ಸಂಕ್ರಮಣ ನಡೆಯುತ್ತಿದ್ದು, ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ನಿರ್ದಿಷ್ಟವಾಗಿ ಪರಿಣಾಮ ಬೀರುತ್ತದೆ, ಆದರೆ 5 ರಾಶಿಚಕ್ರದ ಚಿಹ್ನೆಗಳು ಅದರಿಂದ ಹೆಚ್ಚು ಪರಿಣಾಮ ಬೀರುತ್ತವೆ.
Festivals May 19, 2024, 11:02 AM IST
ಸಾರ್ವಜನಿಕರ ತೆರಿಗೆ ಹಣ ಬಳಸಿ ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಿಸಲಾದ ಕಾಮಗಾರಿಗಳು ನಿಗದಿತ ಸಮಯಕ್ಕೆ ಪೂರ್ಣಗೊಳ್ಳದೆ ತೆರಿಗೆ ಹಣ ಯಾವ ರೀತಿಯಲ್ಲಿ ಪೋಲಾಗುತ್ತದೆ ಎನ್ನುವುದಕ್ಕೆ ಉದಾಹರಣೆ ಇಲ್ಲಿದೆ.
Karnataka Districts May 18, 2024, 9:59 PM IST
ದಿನ ನಿತ್ಯದ ಬೆಲೆ ಏರಿಕೆ ಬಡ ಹಾಗೂ ಮಧ್ಯಮ ವರ್ಗದ ಜನರು ಬೇಸತ್ತಿದ್ದಾರೆ. ಬೆಲೆ ಏರಿಕೆಯಿಂದಾಗಿ ಮಧ್ಯಮ ವರ್ಗದ ಜನರ ಉಳಿತಾಯ ಪ್ರಮಾಣ ಕಡಿಮೆಯಾಗುತ್ತಿದೆ. ಯಾವ ರಾಜ್ಯದಲ್ಲಿ ಹೆಚ್ಚು ಬೆಲೆ ಏರಿಕೆಯಾಗಿದೆ ಗೊತ್ತಾ?
BUSINESS May 18, 2024, 6:17 PM IST
ಸಾಮುದ್ರಿಕ ಶಾಸ್ತ್ರವು ಜ್ಯೋತಿಷ್ಯದ ಒಂದು ಪ್ರಮುಖ ಭಾಗವಾಗಿದೆ. ಇದರಲ್ಲಿ ವ್ಯಕ್ತಿಯ ದೇಹದ ಮೇಲಿರುವ ಮಚ್ಚೆಗಳು ತೆರೆದಿಡುವ ಅನೇಕ ರಹಸ್ಯಗಳ ಬಗ್ಗೆ ತಿಳಿಸಲಾಗಿದೆ. ದೇಹದ ಯಾವ ಮಚ್ಚೆಗಳು ವ್ಯಕ್ತಿಗೆ ಶುಭ ಚಿಹ್ನೆಗಳನ್ನು ನೀಡಬಹುದು ಎಂದು ತಿಳಿಯೋಣ.
Festivals May 18, 2024, 2:13 PM IST
‘ಬರ ಹಣ ರೈತರ ಸಾಲಕ್ಕೆ ಜಮೆ’ ಶೀರ್ಷಿಕೆಯಡಿ ‘ಕನ್ನಡಪ್ರಭ’ದಲ್ಲಿ ಮೇ. 15ರಂದು ಪ್ರಕಟಗೊಂಡಿದ್ದ ವರದಿಯಿಂದ ಎಚ್ಚೆತ್ತ ಜಿಲ್ಲಾಡಳಿತ, ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಬ್ಯಾಂಕುಗಳಿಗೆ ಆದೇಶಿಸಿತ್ತು.
Karnataka Districts May 18, 2024, 10:33 AM IST
ಮಾರಾಟಕ್ಕೆ ಇರಿಸಲಾಗಿರುವ ಕಾಂಪೋ ಪಟ್ಟಣದಲ್ಲಿ ಪ್ರಮುಖವಾಗಿ 20 ಕಟ್ಟಡಗಳು, ಅಪಾರ್ಟ್ಮೆಂಟ್ಗಳು, ಸಿಂಗಲ್ ಫ್ಯಾಮಿಲಿ ಮನೆಗಳು ಮತ್ತು ಕಮರ್ಷಿಯಲ್ ಆಸ್ತಿಗಳಿವೆ.
International May 17, 2024, 4:27 PM IST
ರೈತರಿಗೆ ನೀಡಿರುವ ಬರ ಪರಿಹಾರದ ಮೊತ್ತವನ್ನು ಬ್ಯಾಂಕುಗಳು ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ರಾಜ್ಯ ಸರ್ಕಾರ ತಾಕೀತು ಮಾಡಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
state May 17, 2024, 11:45 AM IST
ಓಲ್ಡ್ ಏಜ್ ಪೆನ್ಷನ್ (ಓಎಪಿ), ಅಂಗವಿಕಲರ ಮಾಸಾಶನ ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ದುಡಿದ ಕಾರ್ಮಿಕರಿಗೆ ನೀಡಬೇಕಾದ ಕೂಲಿ ಹಣವನ್ನೂ ಬ್ಯಾಂಕುಗಳು ಸಾಲದಲ್ಲಿ ಕಡಿತಗೊಳಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
Karnataka Districts May 17, 2024, 4:26 AM IST
ಫಸಲ್ ಬಿಮಾ ವಿಮೆ ಯೋಜನೆಯಲ್ಲಿ ಅನರ್ಹರು ಅಮಾಯಕ ರೈತರ ಹೆಸರಲ್ಲಿ ಹಣ ಗುಳಂ ಮಾಡಿರುವ ಪ್ರಕರಣದಲ್ಲಿ ಜಾಲಹಳ್ಳಿಯ 36 ಜನರ ಮೇಲೆ ಕ್ರಿಮಿನಲ್ ಪ್ರಕರಣ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ದಾಖಲಾಗಿದೆ.
Karnataka Districts May 16, 2024, 11:11 PM IST
ಭಾರತದಲ್ಲಿ ಪಿಎಫ್ ಇರುವಂತೆ ಆಸ್ಟ್ರೇಲಿಯಾದಲ್ಲಿರುವ ಯುನಿಸೂಪರ್ ಸಂಸ್ಥೆಯೂ ಪ್ರಮುಖ ಹಣಕಾಸು ನಿಧಿ ಸಂಸ್ಥೆಯಾಗಿದ್ದು, ಗೂಗಲ್ ಕ್ಲೌಡ್ ಜೊತೆಗಿನ ಅದರ ಪಾಲುದಾರಿಕೆ ಹೊಗೆ ಹಾಕಿದಂತಾಗಿದ್ದು, ಅನೇಕ ಪಿಂಚಣಿದಾರರ ಖಾತೆಗಳು ಡಿಲೀಟ್ ಆಗಿವೆ. ಪರಿಣಾಮ ಪೆನ್ಸನ್ದಾರರು ಸಂಕಷ್ಟಕ್ಕೀಡಾಗಿದ್ದಾರೆ.
International May 16, 2024, 3:51 PM IST
ಈ ಭ್ರಷ್ಟಾಚಾರ ಸರ್ಕಾರಕ್ಕೆ ಏನಾದರೂ ಬುದ್ಧಿ ಕಲಿಸಲೇಬೇಕು. ಚೆಕ್ಪೋಸ್ಟ್ ಇಡಬೇಕು. ಕಾಂಗ್ರೆಸ್ನವರು ಅಧಿಕಾರಕ್ಕೆ ಬಂದ ನಂತರ ಬಹಳ ಮೆರೆಯುತ್ತಿದ್ದಾರೆ ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದರು.
Politics May 16, 2024, 3:41 PM IST