Asianet Suvarna News Asianet Suvarna News

Relationship Tips: ಸಂಭೋಗದ ಬಗ್ಗೆ ಸರಿಯಾದ ಮಾಹಿತಿ ಸಿಗ್ಬೇಕೆಂದ್ರೆ ಈ ಪುಸ್ತಕ ಓದಿ

ಲೈಂಗಿಕತೆ ಎಂಬ ವಿಷ್ಯ ಬರ್ತಿದ್ದಂತೆ ಜನರು ಮುಚ್ಚಿಡುವ ಪ್ರಯತ್ನ ನಡೆಸ್ತಾರೆ. ಅದ್ರ ಬಗ್ಗೆ ಮಾಹಿತಿ ಇಲ್ಲದೆ ತಪ್ಪು ಹೆಜ್ಜೆ ಇಡುವ  ಜೊತೆಗೆ ಆರೋಗ್ಯ ಹಾಳುಮಾಡಿಕೊಳ್ತಾರೆ. ನಮಗೆ ಅಗತ್ಯ ಎನ್ನುವ ಸಂಗತಿ ಬಗ್ಗೆ ಸೂಕ್ತ ಮಾಹಿತಿ ಪಡೆಯುವುದು ಬಹಳ ಮುಖ್ಯ. 
 

Books To Understand Physical Pleasure
Author
First Published May 22, 2023, 2:22 PM IST

ಸೆಕ್ಸ್.. ಇದು ಗುಪ್ತ ವಿಷ್ಯ. ಇದ್ರ ಬಗ್ಗೆ ತಿಳಿದಿರಲಿ ಇಲ್ಲ ತಿಳಿಯದೆ ಇರಲಿ ಜನರು ಇದ್ರ ಬಗ್ಗೆ ಮಾತನಾಡಲು ಮನಸ್ಸು ಮಾಡೋದಿಲ್ಲ. ಇದನ್ನು ರಹಸ್ಯವಾಗಿ ಆನಂದಿಸುವ ಸಂತೋಷ ಎಂದೇ ಪರಿಗಣಿಸುವ ಜನರು ಟಿವಿ, ಪುಸ್ತಕ, ವಿಡಿಯೋ ಮೂಲಕ ಇದ್ರ ಬಗ್ಗೆ ಮಾಹಿತಿ ಪಡೆಯಲು ಮುಂದಾಗ್ತಾರೆ.

ಸಂಭೋಗ (Intercourse) ನೈಸರ್ಗಿಕ ಕ್ರಿಯೆ. ಇದ್ರ ಬಗ್ಗೆ ಪ್ರತಿಯೊಬ್ಬರೂ ತಿಳಿದಿರೋದು ಅಗತ್ಯ. ಹದಿಹರೆಯದ ಮಕ್ಕಳಿಗೆ ಕೂಡ ಲೈಂಗಿಕ ಸಂತೋಷ (Happiness) ದ ಬಗ್ಗೆ ಸರಿಯಾದ ಮಾಹಿತಿ ನೀಡಿದ್ರೆ ಅವರು ದಾರಿ ತಪ್ಪೋದಿಲ್ಲ ಎನ್ನುವ ಮಾತನ್ನು ತಜ್ಞರು ಆಗಾಗ ಹೇಳ್ತಾನೆ ಇರ್ತಾರೆ. ಈಗಿನ ದಿನಗಳಲ್ಲಿ ಸೆಕ್ಸ್ ಗೆ ಸಂಬಂಧಿಸಿದಂತೆ ಅನೇಕ ವಿಡಿಯೋಗಳು ಬಂದಿವೆ. ಆದ್ರೆ ಕೆಲ ವಿಡಿಯೋಗಳಲ್ಲಿ ತಪ್ಪು ಮಾಹಿತಿ ರವಾನೆಯಾಗ್ತಿರುತ್ತದೆ. ನೀವು ಪುಸ್ತಕ (Book ) ಪ್ರೇಮಿಗಳಾಗಿದ್ದರೆ ಲೈಂಗಿಕ ಸಂತೋಷದ ಬಗ್ಗೆ ನಿಮ್ಮಲ್ಲೂ ಅನೇಕ ಗೊಂದಲವಿದೆ ಎಂದಾದ್ರೆ ಅಥವಾ ಅದ್ರ ಬಗ್ಗೆ ಹೆಚ್ಚು ಮಾಹಿತಿ ಸಿಗಬೇಕು ಎನ್ನುವವರು ನೀವಾಗಿದ್ದರೆ ಕೆಲ ಪುಸ್ತಕಗಳನ್ನು ಓದ್ಬಹುದು. ದೈಹಿಕ ಸಂಬಂಧದ ಶಿಕ್ಷಣ ನೀಡುವ ಪುಸ್ತಕಗಳ ಬಗ್ಗೆ ಮಾಹಿತಿ ಇಲ್ಲಿದೆ.

ಅಧಿಕ ತೂಕದಿಂದ ಲೈಂಗಿಕ ಜೀವನ ಕಷ್ಟವಾಗಿದ್ಯಾ? ಈ ಟಿಪ್ಸ್ ಫಾಲೋ ಮಾಡಿ

Come As You Are : ಲೈಂಗಿಕ ಸಂಶೋಧನೆಗಾಗಿ ವಿಶ್ವದಾದ್ಯಂತ ಜನಪ್ರಿಯತೆಗಳಿಸಿದ ವ್ಯಕ್ತಿ ಈ ಪುಸ್ತಕದ ಲೇಖಕರು. ಈ ಪುಸ್ತಕದ ಮುಖಪುಟವೇ ಎಲ್ಲವನ್ನೂ ಹೇಳುತ್ತದೆ. ಕಮ್ ಎಸ್ ಯು ಆರ್ ಪುಸ್ತಕವನ್ನು ಪ್ರಾಕ್ಟಿಕಲ್ ಗೈಡ್ ಎಂದೇ ಕರೆಯಬಹುದಾಗಿದೆ. ಎಲ್ಲ ಲಿಂಗದವರಿಗೆ, ಎಲ್ಲಾ ವರ್ಗದವರಿಗೆ, ಸೆಕ್ಸ್ ಜೀವನ ಬಯಸುವ ಎಲ್ಲರಿಗೂ ಇದೊಳ್ಳೆ ಪುಸ್ತಕ ಎಂದು ನಂಬಲಾಗಿದೆ.   

Changing Reality : ಚೇಂಜಿಂಗ್ ರಿಯಾಲಿಡಿ ಪುಸ್ತಕ ಕಲೆಯಂತೆ ಇದೆ. ಸರ್ಜ್ ಕಹ್ಲಿ ಕಿಂಗ್ ಈ ಪುಸ್ತಕದ ಲೇಖಕರಾಗಿದ್ದಾರೆ. ಲೈಂಗಿಕತೆಯ ಸಾಂಪ್ರದಾಯಿಕ ವಿಧಾನವನ್ನು ಲೇಖಕರು ಇದ್ರಲ್ಲಿ ಬರೆದಿದ್ದಾರೆ. ಇದ್ರಲ್ಲಿ ಆರೋಗ್ಯದ ಬಗ್ಗೆ ಮಾತ್ರವಲ್ಲದೆ ಸಂತೋಷದ ಬಗ್ಗೆಯೂ ಮಾಹಿತಿ ಲಭ್ಯವಿದೆ. ಹುನಾ ಬುಡಕಟ್ಟಿನ ಸಾಂಪ್ರದಾಯಿಕ ಜೀವನ ಮತ್ತು ಸಂಬಂಧಗಳನ್ನು ಸುಧಾರಿಸುವ ವಿಧಾನವನ್ನು ಇದ್ರಲ್ಲಿ ವಿವರಿಸಲಾಗಿದೆ.

ದೈಹಿಕ ಸಂಬಂಧದ ನಂತರ ಕಾಲೆತ್ತಿ ಮಲಗಿದರೆ ಬೇಗ ಕನ್ಸೀವ್ ಆಗ್ತಾರಾ?

 Richer Together ರಿಚರ್ ಟುಗೆದರ್ : ಈ ಪುಸ್ತಕದಲ್ಲಿ 23 ಜೋಡಿಗಳನ್ನು ಸಂದರ್ಶಿಸಿ ಬರೆಯಲಾಗಿದೆ. ಯಶಸ್ವಿ ಸಂಬಂಧಕ್ಕೆ ಸಂಬಂಧಿಸಿದಂತೆ ಅವರು ತಮ್ಮ ಸಲಹೆಗಳನ್ನು ಹಂಚಿಕೊಂಡಿದ್ದಾರೆ. ಸಂಬಂಧವನ್ನು ಹೇಗೆ ಸುಧಾರಿಸಬೇಕು ಮತ್ತು ನಿಮ್ಮ ಕೆಲಸದ ಬಗ್ಗೆ ಹೇಗೆ ಎಚ್ಚರವಾಗಿರಬೇಕು ಎನ್ನುವ ಬಗ್ಗೆ ಪುಸ್ತಕದಲ್ಲಿ ಹೇಳಲಾಗಿದೆ. ಇಬ್ಬರೂ ಪಾಲುದಾರರು ಈ ಪುಸ್ತಕವನ್ನು ಒಟ್ಟಿಗೆ ಓದಬೇಕು. ಈ ಪುಸ್ತಕವನ್ನು ಭೌತಿಕ ಅಂಶ ಮತ್ತು ವ್ಯವಹಾರದ ಭಾರವಾಗಿ ಅರ್ಥಮಾಡಿಕೊಳ್ಳಬೇಕು. 

ಲವ್ ವರ್ತ್ ಮೇಕಿಂಗ್ (Love Worth Making) : ದೈಹಿಕ ಆಕರ್ಷಣೆ ಮತ್ತು ದೈಹಿಕ ಸಾಹಸ ಸಾಮಾನ್ಯ ಸಂಬಂಧದಲ್ಲಿ ಎಷ್ಟು ಮುಖ್ಯ ಎಂಬುದನ್ನು ಈ ಪುಸ್ತಕ ಹೇಳಲಾಗಿದೆ. ಈ ಪುಸ್ತಕವನ್ನು ಸ್ಟೀಫನ್ ಸಿಂಡರ್ ಬರೆದಿದ್ದಾರೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಇದ್ರಲ್ಲಿ ಮಾಹಿತಿ ಲಭ್ಯವಿದೆ. ಸಂಬಂಧದಲ್ಲಿ ಹೇಗೆ ಪ್ರಗತಿ ಸಾಧ್ಯ, ದೀರ್ಘಕಾಲಿಕ ಸಂಬಂಧದಲ್ಲಿ ಏನು ಮಾಡ್ಬೇಕು ಹಾಗೆ ಅಲ್ಪಾವಧಿ ಸಂಬಂಧದಲ್ಲಿ ಹೇಗೆ ಇರಬೇಕು ಎಂಬುದನ್ನು ಕೂಡ ಇದ್ರಲ್ಲಿ ಹೇಳಲಾಗಿದೆ. 

The Joy Of Self Loving : ಇದ್ರಲ್ಲಿ ಸೆಲ್ಫ್ ಲವ್ ಬಗ್ಗೆ ವಿವರಿಸಲಾಗಿದೆ. ಹಸ್ತಮೈಥುನದ ಬಗೆಗಿರುವ ಪ್ರಶ್ನೆಗಳಿಗೆ ಇದ್ರಲ್ಲಿ ಉತ್ತರ ಸಿಗುತ್ತದೆ. ಸೆಕ್ಸ್ ಗೆ ಸಂಬಂಧಿಸಿದ ತಪ್ಪು ಕಲ್ಪನೆಯ ಬಗ್ಗೆಯೂ ಹೇಳಲಾಗಿದೆ. The Joy Of Self Loving  ಪುಸ್ತಕ ಮಹಿಳೆಯರಿಗೆ ಸಾಕಷ್ಟು ಮಾಹಿತಿ ನೀಡಲಿದೆ. ಮಹಿಳೆಯರನ್ನು ಕಾಡುವ ಅನೇಕ ಪ್ರಶ್ನೆಗಳಿಗೆ ಇದ್ರಿಂದ ಉತ್ತರ ಸಿಗಲಿದೆ.

Follow Us:
Download App:
  • android
  • ios