Asianet Suvarna News Asianet Suvarna News

ಅಡ್ವಾಣಿ ಅಂತವರು ನಿಭಾಯಿಸಿರುವ ಖಾತೆ ಅದು: ಗೃಹ ಸಚಿವ ಆರಗ ಜ್ಞಾನೇಂದ್ರಗೆ ಸಿದ್ದು ಪಾಠ

* ಗೃಹ ಸಚಿವ ಆರಗ ಜ್ಞಾನೇಂದ್ರಗೆ ಸಿದ್ದರಾಮಯ್ಯ ಪಾಠ
* ಸದನದಲ್ಲಿ ಸಿದ್ದಾರಾಮಯ್ಯರಿಂದ ಅರಗ ಜ್ಞಾನೇಂದ್ರಗೆ ಕಿವಿ ಮಾತು
* ಸಮರ್ಥವಾಗಿ ನಿಭಾಯಿಸಿ ಎಂದು ಸಲಹೆ ನೀಡಿದ ವಿರೋಧ ಪಕ್ಷದ ನಾಯಕ

Siddaramaiah Gives Some suggestions To araga jnanendra about Home Minister Dept rbj
Author
Bengaluru, First Published Sep 22, 2021, 4:26 PM IST
  • Facebook
  • Twitter
  • Whatsapp

ಬೆಂಗಳೂರು, (ಸೆ.22): ವಿಧಾನಸಭೆ ಅಧಿವೇಶನದಲ್ಲಿ (session) ಇಂದು (ಸೆ.22) ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಅವರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಪಾಠ ಮಾಡಿದ್ದಾರೆ.

"

ಮೊದಲ ಬಾರೀ ಸಚಿವರಾಗಿದ್ದೀರಾ. ಯಾವುದೇ ಕೆಲಸವನ್ನ ಹಗುರವಾಗಿ ತೆಗರದುಕೊಳ್ಳಬೇಡಿ. ಜನ ಸ್ನೇಹಿಯಾಗಿ ಕೆಲಸ ಮಾಡಿ ಇಷ್ಟು ನಾನು ನಿಮಗೆ ಹೇಳಿವೆ ಎಂದು ಕಿವಿ ಮಾತು ಹೇಳಿದರು.

ರೇಪ್ ಸಂತ್ರಸ್ತೆ ಅಷ್ಟೊತ್ತಿಗೆ ಆ ನಿರ್ಜನ ಪ್ರದೇಶಕ್ಕೆ ಹೋಗ್ಬಾರದಿತ್ತು: ಗೃಹ ಸಚಿವ ವಿವಾದಾತ್ಮಕ ಹೇಳಿಕೆ

ನಿಜಲಿಂಗಪ್ಪ ಸರ್ಕಾರದಲ್ಲಿ ರಾಮರಾಯರು ಗೃಹ ಸಚಿವರಾಗಿದ್ರು. ಆ ಕಾಲದಲ್ಲಿ ಒಂದು ಮಹಿಳೆ ಮೇಲೆ ರೇಪ್ (Rape) ಆಯಿತು. ಸದನದಲ್ಲಿ ಚರ್ಚೆ ಆಗುವಾಗ ಗೋಪಾಲಗೌಡ್ರು ನಿಮ್ಮ ಮನೆಯ ಮಗಳ ಮೇಲೆ ಇಂತಹ ರೇಪ್ ಕೇಸ್ ಆಗಿದ್ರೆ ಏನು ಮಾಡ್ತಿದ್ರಿ ಎಂದು ಕೇಳಿದ ಮರುಕ್ಷಣವೇ ತಮ್ಮ ಸಚಿವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋದರು. ಆ ಕೆಲಸ ನೀವು ಮಾಡಿ ಎಂದು ನಾವು ಹೇಳಲ್ಲ. ಅಷ್ಟೊಂದು ಸೂಕ್ಷ್ಮತೆ ಈಗ ಯಾವ ರಾಜಕಾರಣಿಯಲ್ಲೂ ಇಲ್ಲ. ನಾವು ಗೃಹ ಸಚಿವ,ಸಿಎಂ ರಾಜೀನಾಮೆ ಕೇಳುವುದಿಲ್ಲ ಎಂದರು.

ಮೈಸೂರು (Mysuru) ಗ್ಯಾಂಗ್‌ರೇಪ್‌ ಸಂತ್ರಸ್ತೆಗೆ ನ್ಯಾಯ ಒದಗಿಸುವ ಕೆಲಸ ಮಾಡಿ. ಬಹಳ ವರ್ಷಗಳ ಬಳಿಕ ಉತ್ತಮ ಖಾತೆ ಸಿಕ್ಕಿದೆ.  ಅಡ್ವಾಣಿ (Advani) ಅಂತವರು ನಿಭಾಯಿಸಿರುವ ಖಾತೆ. ಖಾತೆ ಬಗ್ಗೆ ಬೇಸರಿಸಕೊಳ್ಳಬೇಡಿ. ಸಮರ್ಥವಾಗಿ ನಿಭಾಯಿಸಿ ಎಂದು ಸಿದ್ದರಾಮಯ್ಯ ಅವರು ಆರಗ ಜ್ಞಾನೇಂದ್ರ (Araga Jnanendra) ಅವರಿಗೆ ಸಲಹೆ ನೀಡಿದರು.

Follow Us:
Download App:
  • android
  • ios